»   » ಉಗ್ರರೂಪ ತಾಳಿದ 'ಪದ್ಮಾವತಿ' ಚಿತ್ರದ ವಿರುದ್ಧ ಪ್ರತಿಭಟನೆ

ಉಗ್ರರೂಪ ತಾಳಿದ 'ಪದ್ಮಾವತಿ' ಚಿತ್ರದ ವಿರುದ್ಧ ಪ್ರತಿಭಟನೆ

Posted By:
Subscribe to Filmibeat Kannada

'ಪದ್ಮಾವತಿ' ಚಿತ್ರದ ದರ್ಶನ ಭಾಗ್ಯ ಪ್ರೇಕ್ಷಕರಿಗೆ ಸಿಗೋದಿಲ್ಲ ಅನ್ನೋದು ಕನ್ಫರ್ಮ್ ಆಗಿದೆ. 'ಪದ್ಮಾವತಿ' ಸಿನಿಮಾ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಗಳು ನಿಲ್ಲುತ್ತಿಲ್ಲ. ದಿನ ಕಳೆದಂತೆ ಹೋರಾಟ ಹಿಂಸಾಚಾರಕ್ಕೆ ತಿರುಗುತ್ತಿದೆ. ರಾಜಸ್ಥಾನದ ನಹರ್ಘಡ್ ಕೋಟೆಯಲ್ಲಿ 'ಮೃತದೇಹ'ವೊಂದು ನೇಣುಬಿಗಿದ ಪರಿಸ್ಥಿತಿಯಲ್ಲಿ ಕಂಡಿಬಂದಿದ್ದು, ಪ್ರತಿಭಟನೆಗಳು ಮತ್ತಷ್ಟು ಉಗ್ರರೂಪ ತಾಳುವ ಲಕ್ಷಣ ಕಾಣುತ್ತಿದೆ.

ಹೆಣದ ಸಮೀಪ "ನಾವು ತಲೆ ಕತ್ತರಿಸುವುದಿಲ್ಲ. ಬದಲಾಗಿ ನೇಣು ಹಾಕುತ್ತೇವೆ" ಎಂದು ಕಲ್ಲಿನ ಮೇಲೆ ಬರೆಯಲಾಗಿದೆ. ಅದಷ್ಟೇ ಅಲ್ಲದೆ ಮತ್ತೊಂದು ಕಲ್ಲಿನ ಮೇಲೆ 'ಪದ್ಮಾವತಿ' ಎಂದು ಬರೆಯಲಾಗಿದೆ. ದೂರನ್ನ ದಾಖಲಿಸಿರುವ ಪೊಲೀಸರು ಇದನ್ನ ಸಿನಿಮಾ ಜೊತೆಯಲ್ಲಿ ತಳುಕು ಹಾಕಬೇಡಿ ಎಂದಿದ್ದಾರೆ.

 Fierce protest against Padmavathi: Dead body found

190 ಕೋಟಿ ಬಂಡವಾಳ ಹೂಡಿ 'ಪದ್ಮಾವತಿ' ಸಿನಿಮಾವನ್ನ ನಿರ್ಮಾಣ ಮಾಡಿರುವ ಚಿತ್ರತಂಡ, ಪ್ರತಿಭಟನೆ ನೋಡಿ ತಲೆ ಮೇಲೆ ಕೈಹೊತ್ತು ಕೂತಿದೆ. ಪ್ರತಿಭಟನೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ 'ಪದ್ಮಾವತಿ' ಸಿನಿಮಾ ತಂಡ ಮೌನಕ್ಕೆ ಶರಣಾಗಿದೆ. ಡಿಸೆಂಬರ್ 1 ರಂದು ತೆರೆಕಾಣಬೇಕಿದ್ದ 'ಪದ್ಮಾವತಿ' ಚಿತ್ರಕ್ಕೆ ಇನ್ನೂ ಸೆನ್ಸಾರ್ ಸರ್ಟಿಫಿಕೆಟ್ ಸಿಕ್ಕಿಲ್ಲ. ಉಗ್ರರೂಪಕ್ಕೆ ತಿರುಗಿರುವ ಪ್ರತಿಭಟನೆ ಇನ್ಯಾವ ಪರಿಸ್ಥಿತಿಗೆ ತಲುಪುತ್ತೋ ಅನ್ನೋದೇ ಜನರ ಆತಂಕ. 

 Fierce protest against Padmavathi: Dead body found
English summary
Fierce protest against Padmavathi: Dead body found. ಉಗ್ರರೂಪ ತಾಳಿದ ಪದ್ಮಾವತಿ ಸಿನಿಮಾದ ಪ್ರತಿಭಟನೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada