»   » ಮಫ್ಲರ್ ಮ್ಯಾನ್ ಅರವಿಂದ್ ಸಿನಿಮಾ ರಿಲೀಸ್ ಗೆ ರೆಡಿ!

ಮಫ್ಲರ್ ಮ್ಯಾನ್ ಅರವಿಂದ್ ಸಿನಿಮಾ ರಿಲೀಸ್ ಗೆ ರೆಡಿ!

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ದೆಹಲಿ ಅಸೆಂಬ್ಲಿ ಚುನಾವಣೆಯಲ್ಲಿ ಅದ್ಭುತ ಗೆಲುವು ಸಾಧಿಸಿರುವ ಆಮ್ ಆದ್ಮಿ ಪಕ್ಷದ ವಿಜಯಗಾಥೆಯನ್ನು ಬೆಳ್ಳಿತೆರೆಯ ಮೇಲೆ ತರಲು ಬಾಲಿವುಡ್ ಮಂದಿ ಯತ್ನಿಸುತ್ತಿದ್ದಾರೆ. ಮಫ್ಲರ್ ಮ್ಯಾನ್ ಎಂದು ವಿಪಕ್ಷಗಳು ಗೇಲಿ ಮಾಡಿದರೂ ಶ್ರೀ ಸಾಮಾನ್ಯನಿಗೆ ಬೆಲೆ ತಂದು ಕೊಟ್ಟ ಅರವಿಂದ್ ಕೇಜ್ರಿವಾಲ್ ಅವರ ರಾಜಕೀಯ ಬದುಕು, ಎಎಪಿ ಕನಸುಗಳನ್ನು ದೊಡ್ಡಪರದೆಯಲ್ಲಿ ಕಾಣಬಹುದಾಗಿದೆ.

ಇದಕ್ಕೂ ಮುನ್ನ ಐಐಟಿ, ಖರಗ್ ಪುರ್ ಪದವೀಧರ ಅರವಿಂದ್ ಕೇಜ್ರಿವಾಲ್ ಅವರು ಭ್ರಷ್ಟಾಚಾರ ವಿರುದ್ಧ ಹೋರಾಟಕ್ಕೆ ಇಳಿದಿದ್ದನ್ನು ಕಂಡು ಸ್ಪೂರ್ತಿಗೊಂಡ ಅನೇಕ ಚಿತ್ರಕರ್ಮಿಗಳು ಸಿನಿಮಾ ಮಾಡಲು ಹೊರಟು ತೆಪ್ಪಗಾಗಿದ್ದರು. ಅದರೆ, ಈಗ ಶಿಫ್ ಆಫ್ ಥೀಸ್ಯೂಸ್ ನ ನಿರ್ದೆಶಕ ಆನಂದ್ ಗಾಂಧಿ ಅವರು ಅರವಿಂದ್ ಕೇಜ್ರಿವಾಲ್ ಅವರ ಬಗ್ಗೆ ಒಂದು ಸಾಕ್ಷ್ಯಚಿತ್ರ ನಿರ್ಮಿಸುತ್ತಿದ್ದಾರಂತೆ. [ನೆಗಟಿವ್ ಪಬ್ಲಿಸಿಟಿ ಬಿಜೆಪಿ ಸೋಲಿಗೆ ಕಾರಣ: ಎಎಪಿ]

Proposition For A Revolution ಎಂಬ ಹೆಸರಿನ ಈ ಸಾಕ್ಷ್ಯ ಚಿತ್ರಕ್ಕೆ ದೆಹಲಿಯಲ್ಲಿ ಪ್ರಜಾಪ್ರಭುತ್ವಕ್ಕೆ ಬೆಲೆ ತಂದು ಕೊಟ್ಟ ಆಮ್ ಆದ್ಮಿ ಪಕ್ಷದ ಗೆಲುವಿನ ಓಟವನ್ನು ಚಿತ್ರದ ಕೊನೆಯಲ್ಲಿ ತೋರಿಸಲಾಗುತ್ತದೆಯಂತೆ. ದೆಹಲಿ ಅಸೆಂಬ್ಲಿ ಕದನದ ಅಸಲಿ ಕಥೆಯನ್ನು ಈ ಸಾಕ್ಷ್ಯ ಚಿತ್ರ ಬಿಚ್ಚಿಡಲಿದೆಯಂತೆ.

Film On Arvind Kejriwal's AAP Ready To Hit Theatres

ಆಮ್ ಆದ್ಮಿ ಪಕ್ಷ ಕುರಿತ ಈ ಚಿತ್ರವನ್ನು ಖುಷ್ಬು ರಂಕಾ ಹಾಗೂ ವಿನಯ್ ಶುಕ್ಲಾ ಎಂಬುವರು ನಿರ್ದೇಶಿಸಲಿದ್ದಾರೆ. ಡಿಸೆಂಬರ್ 2013ರಿಂದ ಇಲ್ಲಿ ತನಕದ ಕಥಾನಕ ಇದರಲ್ಲಿರುತ್ತದೆ.

ಎಎಪಿ ಹಾದಿಯಲ್ಲೇ ದೇಣಿಗೆ: ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಸಾರ್ವಜನಿಕರೇ ಒಳ್ಳೆಯದನ್ನು ಮಾಡುವ ಎಎಪಿ ತತ್ತ್ವವನ್ನೇ ಈ ಚಿತ್ರ ನಿರ್ಮಾಪಕರು ಅನುಸರಿಸುತ್ತಿದ್ದಾರೆ. ಆಮ್ ಆದ್ಮಿ ಪಕ್ಷದ ಮಾದರಿಯಲ್ಲೇ ಈ ಚಿತ್ರಕ್ಕಾಗಿ ಜನರಿಂದ ದೇಣಿಗೆ ಸಂಗ್ರಹಿಸಲಾಗಿದೆ. ಇದುವರೆವಿಗೂ ಸುಮಾರು 10 ಲಕ್ಷ ರು ಹಣ ಸಿಕ್ಕಿದೆ.

ಸದ್ಯಕ್ಕಂತೂ ಈ ಸಿನಿಮಾ ಚಿತ್ರಮಂದಿರಕ್ಕೆ ಯಾವಾಗ ಬರುವುದೋ ಗೊತ್ತಿಲ್ಲ.ಈಗಾಗಲೇ ಬೂಸಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಹಾಗೂ ಭಾರತದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ವಿಮರ್ಶಕರ ಮೆಚ್ಚುಗೆ ಪಡೆದುಕೊಂಡಿದೆಯಂತೆ.

ಅರವಿಂದ್ ಕೇಜ್ರಿವಾಲ್ ರನ್ನು ಆಮ್ ಆದ್ಮಿ ಬನ್ ಗಯಾ ಸಿಎಂ ಎಂದು ತೋರಿಸಿರುವ ಈ ಸಾಕ್ಷ್ಯಚಿತ್ರಕ್ಕೆ ಜನ ಮೆಚ್ಚುಗೆ ದೊರೆಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಆನಂದ್ ಗಾಂಧಿ ಹೇಳಿದ್ದಾರೆ.

English summary
After Aam Aadmi Party led by Arvind Kejriwal made a historic victory in the recently held Delhi elections, a film on Aam Aadmi Party is set to roll in the theatres.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada