For Quick Alerts
ALLOW NOTIFICATIONS  
For Daily Alerts

  ಪ್ರಾಣಿ ಪ್ರಿಯ 'ಪೆಟಾ' ತಾರೆಯರ ಭಾವ ಭಂಗಿಗಳು

  By ಜೇಮ್ಸ್ ಮಾರ್ಟಿನ್
  |

  ಬಾಲಿವುಡ್ ನಟ ನಟಿಯರಿಗೂ ಪೀಪಲ್ ಫಾರ್ ಎಥಿಕಲ್ ಟ್ರೀಟ್ ಮೆಂಟ್ ಫಾರ್ ಅನಿಮಲ್(ಪೆಟಾ) ಸಂಸ್ಥೆಗೂ ಭಾರಿ ನಂಟು, ದಿಯಾ ಮಿರ್ಜಾ, ನೆಹಾ ದೂಪಿಯಾ, ಸೋನು ಸೂದ್, ಜಾಕ್ವಲೀನ್ ಫರ್ನಾಂಡೀಸ್, ತ್ರಿಶಾ ಕೃಷ್ಣನ್, ಮಾಧವನ್, ಪ್ರಿಯಾ ಆನಂದ್, ಅಮೃತಾ ರಾವ್, ಅಶ್ಮಿತ್ ಪಟೇಲ್ ಸೇರಿದಂತೆ ಅನೇಕ ತಾರೆಯರು ಪೆಟಾ ಪರ ನಿಂತಿದ್ದಾರೆ.

  ಅಕ್ಟೋಬರ್ ತಿಂಗಳನ್ನು ಪೆಟಾ ಸಸ್ಯಹಾರಿ ಜಾಗೃತಿ ಮಾಸವನ್ನಾಗಿ ಆಚರಿಸುತ್ತಿದ್ದು, ಡ್ರೀಮ್ ಗರ್ಲ್ ಹೇಮಮಾಲಿನಿ ಜಾಹೀರಾತಿಗೆ ಫೋಸ್ ನೀಡಿದ್ದಾರೆ. ಪಶು ಸಂರಕ್ಷಣೆಯ ಪ್ರತಿಪಾದಕಿಯೂ ಆಗಿರುವ ಹೇಮಮಾಲಿನಿ ಮತ್ತೊಮ್ಮೆ ಸಮೂಹದೊಂದಿಗೆ ಕೈಜೋಡಿಸಿದ್ದಾರೆ.

  ವಾಹನ ದಟ್ಟಣೆ ಇರುವ ನಗರದ ರಸ್ತೆಗಳಲ್ಲಿ ಕುದುರೆಗಾಡಿಗಳನ್ನು ನಿಷೇಧಿಸಬೇಕೆಂದು ಒತ್ತಾಯಿಸುತ್ತಾ 2009ರಲ್ಲಿ ಪೆಟಾದ ಪರವಾಗಿ ಅಂದಿನ ಮುಂಬಯಿ ಮುನಿಸಿಪಲ್ ಕಮೀಷನರ್ ಗೆ ಪತ್ರ ಬರೆದಿದ್ದರು ಎಂದು ಪೆಟಾ ಹೇಳಿದೆ.

  ಪ್ರತಿಯೊಬ್ಬ ಸಸ್ಯಾಹಾರಿ ವರ್ಷಕ್ಕೆ ನೂರಕ್ಕೂ ಅಧಿಕ ಪಶುಗಳನ್ನು ರಕ್ಷಿಸುತ್ತಾನೆ. ಅಲ್ಲದೆ ಸಸ್ಯಾಹಾರಿಗಳು ಪ್ರಮುಖ ಮಾರಕ ರೋಗಗಳಿಂದ ಪರಿಣಾಮಗೊಳ್ಳುವ ಸಾಧ್ಯತೆ ಕಡಿಮೆ ಇರುತ್ತದೆ ಎಂದು ಪೆಟಾ ಹೇಳಿದೆ.ಪೆಟಾ ಎಂದರೇನು? ಹಾಲಿವುಡ್, ಬಾಲಿವುಡ್ ತಾರೆಯರು ಕೆಲವು ಬೆತ್ತಲೆ ಅರೆ ಬೆತ್ತಲೆ ಪೋಸ್ ನೀಡಿ ಪ್ರಾಣಿಗಳನ್ನು ರಕ್ಷಿಸಿ ಎಂದು ಆಗ್ರಹಿಸಿದ್ದು ಇದೆ.. ಚಿತ್ರಗಳಲ್ಲಿ ನೀವೇ ನೋಡಿ..

  ಹೇಮ ಮಾಲಿನಿ

  ಪ್ರಾಣಿಗಳನ್ನು ಹಿಂಸಿಸದೆ, ನೈತಿಕ ದೃಷ್ಟಿಯಿಂದ ವರ್ತಿಸಬೇಕು ಎಂದು ಪ್ರತಿಪಾದಿಸುವ ಅಂತರರಾಷ್ಟ್ರೀಯ ಸಂಸ್ಥೆಯಾಗಿರುವ ಪೀಪಲ್ ಫಾರ್ ಎಥಿಕಲ್ ಟ್ರೀಟ್ ಮೆಂಟ್ ಫಾರ್ ಅನಿಮಲ್ ಪರ ಹೇಮಮಾಲಿನಿ ಪ್ರಚಾರಕ್ಕೆ ಇಳಿದಿದ್ದಾರೆ.

  ಜಿಯಾಖಾನ್

  ವಿಶ್ವದಾದ್ಯಂತ ಸುಮಾರು 25 ಲಕ್ಷ ಸದಸ್ಯರನ್ನು ಹೊಂದಿರುವ ಪೆಟಾ ಸಂಸ್ಥೆ ಕೇಂದ್ರ ಕಚೇರಿ ಅಮೆರಿಕದಲ್ಲಿದೆ

  ಮಲೈಕಾ ಅರೋರಾ ಖಾನ್

  ಪ್ರಾಣಿಗಳನ್ನು ತಮ್ಮಷ್ಟಕ್ಕೆ ಬದುಕಲು ಬಿಡಬೇಕು. ಅವು ಮನುಷ್ಯರಿಗೆ ಸೇರಿಲ್ಲ. ಮನುಷ್ಯರ ಆಹಾರ ಪ್ರಾಣಿಗಳಲ್ಲ. ಸರ್ಕಸ್ ನಲ್ಲಿ ಹಿಂಸಿಸಬೇಡಿ ಎನ್ನುತ್ತಿರುವ ಮಲೈಕಾ ಅರೋರಾ ಖಾನ್

  ಶಿಲ್ಪಾ ಶೆಟ್ಟಿ

  ಪ್ರಾಣಿಗಳನ್ನು ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸುವುದೂ ತರವಲ್ಲ. ಯಾವುದೇ ಉದ್ಯಮದ ಕಚ್ಚಾ ಪದಾರ್ಥಗಳಿಗಾಗಿ ಪ್ರಾಣಿಗಳನ್ನು ಬಳಸಕೂಡದು ಎನ್ನುತ್ತಿರುವ ಶಿಲ್ಪಾ ಶೆಟ್ಟಿ

  ಸೋಫಿಯಾ ಮಂಕ್

  ಜೀವನವನ್ನು ಮಸಾಲೆ ಭರಿತ ಮಾಡಿಕೊಳ್ಳಿ ಶಾಖಾಹಾರಿಗಳಾಗಿ- ಸೋಫಿಯಾ ಮಂಕ್..

  ಎಮಾಗನ್ ಬೈಲಿ

  ಪ್ರಾಣಿ ಚರ್ಮ ಬಳಸಿ ತಯಾರಿಸಿದ ಉತ್ಪನ್ನಗಳ ಖರೀದಿ ವಿರುದ್ಧ ನಿಂತ ತಾರೆ ಎಮಾಗನ್ ಬೈಲಿ

  ಪಮೇಲಾ ಆಂಡರ್ಸನ್

  ಬೇ ವಾಚ್ ಖ್ಯಾತಿಯ ತಾರೆ ಪಮೇಲಾ ಆಂಡರ್ಸನ್ ಕೂಡಾ ಪೆಟಾ ರಾಯಭಾರಿಯಾಗಿದ್ದಾರೆ.

  ನನ್ನ ದೇಹ ಬೇಕೇ?

  ನನ್ನ ದೇಹ ಬೇಕೇ ಸಸ್ಯಾಹಾರಿಗಳಾಗಿ ಎನ್ನುತ್ತಿರುವ ಬೆನ್ನಿ ಜಿಲ್ ಲಾಫ್ಲಿನ್

  ಜೋಹನ್ನಾ ಕೃಪಾ

  ಪ್ರಾಣಿಗಳಿಗೆ ಏಂಜೆಲ್ ಆಗಿ ಪ್ರಾಣಿ ಖರೀದಿ ಬದಲು ಅವುಗಳನ್ನು ಪಾಲಿಸಿ

  ಅಲ್ಸಿಯಾ ಸಿಲ್ವರ್ ಸ್ಟೋನ್

  ನಾನು ಸಸ್ಯಾಹಾರಿ ಎಂದು ಘೋಷಿಸಿಕೊಂಡ ನಟಿ ಅಲ್ಸಿಯಾ ಸಿಲ್ವರ್ ಸ್ಟೋನ್

  English summary
  A known supporter of animal rights, veteran atcress Hema Malini has recently posed for People for the Ethical Treatment of Animals, promoting vegetarianism. Bollywood actors Dia Mirza, Neha Dhupia, Sonu Sood, Jacqueline Fernandez, Trisha Krishnan, Madhavan, Priya Anand, Amrita Rao and Ashmit Patel are other Peta supporters

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more