For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಕುರಿತು ಸಿದ್ಧವಾಗುತ್ತಿದೆ ಬಯೋಪಿಕ್

  |

  ಬಾಲಿವುಡ್ ನಟಿ, ಸುಶಾಂತ್ ಸಿಂಗ್ ರಜಪೂತ್ ಪ್ರೇಯಸಿ ರಿಯಾ ಚಕ್ರವರ್ತಿ ಕುರಿತು ಬಯೋಪಿಕ್ ಸಿದ್ಧವಾಗುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಈಗಾಗಲೇ ಜನಪ್ರಿಯ ವ್ಯಕ್ತಿಗಳ ಅನೇಕ ಬಯೋಪಿಕ್ ಗಳು ಬಾಲಿವುಡ್ ನಲ್ಲಿ ರಿಲೀಸ್ ಆಗಿವೆ. ನಟ ಸುಶಾಂತ್ ಸಿಂಗ್ ನಿಧನದ ಬಳಿಕ ಸುಶಾಂತ್ ಸಿಂಗ್ ಬಯೋಪಿಕ್ ಮಾಡಲು ಬಾಲಿವುಡ್ ನಿರ್ದೇಶಕರು ಮುಂದೆ ಬಂದಿದ್ದರು. ಇದೀಗ ಸುಶಾಂತ್ ಸಿಂಗ್ ಬಯೋಪಿಕ್ ಬರುವ ಮೊದಲೇ ರಿಯಾ ಚಕ್ರವರ್ತಿ ಕುರಿತು ಸಿನಿಮಾ ತಯಾರಾಗುತ್ತಿದೆ.

  ರಿಯಾ ಚಕ್ರವರ್ತಿ ನಟಿಯಾಗಿ ಖ್ಯಾತಿಗಳಿಸಿದಕ್ಕಿಂತ ಹೆಚ್ಚಾಗಿ ಸುಶಾಂತ್ ಸಾವಿನ ಬಳಿಕವೇ ಜನಪ್ರಿಯರಾಗಿದ್ದಾರೆ. ರಿಯಾ ಹೆಸರು ಈಗ ಬಾಲಿವುಡ್ ನಲ್ಲಿ ಸಂಚಲನಸೃಷ್ಟಿ ಮಾಡಿದೆ. ಸುಶಾಂತ್ ಸಿಂಗ್ ಅಸಹಜ ಸಾವು ಮತ್ತು ಡ್ರಗ್ಸ್ ಜಾಲದಲ್ಲಿ ಎನ್ ಸಿ ಬಿ ಅಧಿಕಾರಿಗಳು ರಿಯಾ ಚಕ್ರವರ್ತಿಯನ್ನು ಬಂಧಿಸಿದ್ದಾರೆ.

  ರಿಯಾ ಚಕ್ರವರ್ತಿ ಜೊತೆ ಡ್ರಗ್ ಚಾಟ್ ಮಾಡಿರುವುದಾಗಿ NCB ಮುಂದೆ ಒಪ್ಪಿಕೊಂಡ ರಕುಲ್ರಿಯಾ ಚಕ್ರವರ್ತಿ ಜೊತೆ ಡ್ರಗ್ ಚಾಟ್ ಮಾಡಿರುವುದಾಗಿ NCB ಮುಂದೆ ಒಪ್ಪಿಕೊಂಡ ರಕುಲ್

  ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಿರುವ ಈ ಪ್ರಕರಣದ ಬಗ್ಗೆ ಈಗ ಬಾಲಿವುಡ್ ನಲ್ಲಿ ಸಿನಿಮಾ ಮಾಡಲು ಖ್ಯಾತ ನಿರ್ದೇಶಕರು ಮುಂದೆ ಬಂದಿದ್ದಾರೆ. ಸಿನಿಮಾ ಜೊತೆಗೆ ಸಾಕ್ಷ್ಯ ಚಿತ್ರ ಸಹ ಸಿದ್ಧವಾಗುತ್ತಿದೆಯಂತೆ. ಆದರೆ ನಿರ್ದೇಶಕ ಯಾರು, ರಿಯಾ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಇನ್ನೂ ಬಹಿರಂಗವಾಗಿಲ್ಲ.

  ರಾಗಿಣಿ, ಸಂಜನಾ ಮೊಬೈಲ್ ನಿಂದ ಬಯಲಾಯ್ತು ಸ್ಪೋಟಕ ಮಾಹಿತಿ..? | Filmibeat Kannada

  ಸುಶಾಂತ್ ಸಿಂಗ್ ಬಯೋಪಿಕ್ ಗಿಂತ ಈಗ ರಿಯಾ ಬಯೋಪಿಕ್ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ರಿಯಾ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅಕ್ಟೋಬರ್ 6ರ ವರೆಗೂ ನ್ಯಾಯಾಂಗ ಬಂಧನ ವಿಸ್ತರಿಸಲಾಗಿದೆ. ರಿಯಾ ಜೊತೆಗೆ ಆಕೆಯ ಸಹೋದರ ಶೋವಿಕ್ ಚಕ್ರವರ್ತಿ ಸಹ ಬಂಧನದಲ್ಲಿದ್ದಾರೆ.

  English summary
  After Sushant Singh Rajput biopic filmmakers keen to make biopic on rhea chakraborty journey.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X