»   » 4 ವರ್ಷದ ಹಿಂದೆ ಸತ್ತ ನಟಿಯ ಪ್ರಕರಣದಲ್ಲಿ ಬೆಚ್ಚಿಬೀಳಿಸುವ ಸತ್ಯ ಹೊರಬಿದ್ದಿದೆ.!

4 ವರ್ಷದ ಹಿಂದೆ ಸತ್ತ ನಟಿಯ ಪ್ರಕರಣದಲ್ಲಿ ಬೆಚ್ಚಿಬೀಳಿಸುವ ಸತ್ಯ ಹೊರಬಿದ್ದಿದೆ.!

Posted By:
Subscribe to Filmibeat Kannada

ಅದು ಜೂನ್ 3, 2013.....ಮುಂಬೈನ ಫ್ಲ್ಯಾಟ್ ವೊಂದರಲ್ಲಿ ನಟಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ರೀತಿಯಲ್ಲಿ ಸಾವಿಗೀಡಾಗಿದ್ದಳು. ತನಿಖೆ ನಡೆಸಿದ್ದ ಪೊಲೀಸರು ಇದು ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದರು.

ಆದ್ರೆ, ತಂದೆ-ತಾಯಿಯ ಆಕ್ರಂದನ ಅದನ್ನ ಒಪ್ಪಲಿಲ್ಲ. ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಆರೋಪಿಸಿದರು. ಅದರ ಪರಿಣಾಮ ಈ ಪ್ರಕರಣ ಸಿಬಿಐ ಕೈ ಸೇರಿತು. ಮತ್ತೆ ಮರು ವಿಚಾರಣೆ ನಡೆಸಿದ ಸಿಬಿಐ ಅಧಿಕಾರಿಗಳು, ಈಗ ಪ್ರಕರಣವನ್ನ ಭೇದಿಸಿದ್ದಾರೆ.

ಈ ಸಾವಿಗೆ ಕಾರಣವೇನು ಎಂಬುದನ್ನ ಬಹಿರಂಗಪಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸೂರಜ್ ಪಾಂಚೋಲಿ ವಿರುದ್ಧ ಎಫ್.ಐ.ಆರ್ ದಾಖಲಿಸಿದ್ದಾರೆ. ಅಷ್ಟಕ್ಕೂ, ಕೊಲೆಯಾದ ನಟಿ ಯಾರು? ಈಕೆಗೂ ಸೂರಜ್ ಗೂ ಏನು ಸಂಬಂಧ? ಆತ್ಮಹತ್ಯೆ ಮಾಡಿಕೊಂಡಿದ್ದೇಕೆ ಎಂಬ ಸಂಪೂರ್ಣ ಚಿತ್ರಣವನ್ನ ಮುಂದೆ ನೀಡಲಾಗಿದೆ.

ಜಿಯಾ ಖಾನ್ ಸಾವಿಗೆ ಸೂರಜ್ ಕಾರಣ

ಬಾಲಿವುಡ್ ನಟಿ ಜಿಯಾ ಖಾನ್ ಸಾವಿಗೆ ಪರೋಕ್ಷವಾಗಿ ಸೂರಜ್ ಪಾಂಚೋಲಿ ಕಾರಣವೆಂದು ಸಿಬಿಐ ಪೊಲೀಸರು ಚಾರ್ಜ್ ಶೀಟ್ ದಾಖಲಿಸಿದ್ದಾರೆ. ಜಿಯಾ ಖಾನ್ ಆತ್ಮಹತ್ಯೆ ಮಾಡಿಕೊಳ್ಳಲು ಸೂರಜ್ ಪ್ರೇರೇಪಿಸಿದ್ದಾನೆ ಎಂಬುದು ಪೊಲಿಸರ ತನಿಖೆಯಿಂದ ಹೊರಬಿದ್ದಿದೆ.

ಗರ್ಭಪಾತ ಮಾಡಿಸಿದ್ದ ಸೂರಜ್

ಜಿಯಾ ಖಾನ್ ಮತ್ತು ಸೂರಜ್ ಪಾಂಚೋಲಿ ಒಟ್ಟಿಗೆ ಸಹಜೀವನ ನಡೆಸಿದ್ದು, ಆಕೆ ಬಳಿಕ ಗರ್ಭಿಣಿಯಾಗಿದ್ದರು. ನಂತರ ಒತ್ತಾಯಪೂರ್ವಕವಾಗಿ ಗರ್ಭಪಾತ ಮಾಡಿದ್ದು, ಅದು ವ್ಯತಿರಿಕ್ತ ಪರಿಣಾಮ ಬೀರಿತ್ತು ಎಂಬುದು ಸೇರಿದಂತೆ ಹಲವಾರು ಸಂಗತಿಗಳನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಡೆತ್ ನೋಡ್ ನಲ್ಲಿ ಉಲ್ಲೇಖಿಸಿದ್ದರು

''ನನ್ನನ್ನು ನಿನಗೆ ಸಂಪೂರ್ಣ ಅರ್ಪಿಸಿಕೊಂಡೆ. ಆದರೆ ನೀನು ಪ್ರತಿಕ್ಷಣ ನನಗೆ ನರಕ ತೋರಿಸಿದೆ. ನನ್ನ ಪ್ರತಿ ಅಂಶವನ್ನೂ ನಾಶ ಮಾಡಿದೆ. ನನ್ನಲ್ಲಿ ಬೆಳೆಯುತ್ತಿರುವ ನಿನ್ನ ಮಗುವನ್ನು ಸಾಯಿಸುವ ಸಂದರ್ಭ ಬಂದಾಗ ಅದೆಷ್ಟು ನೋವನುಭವಿಸಿದೆ ನಿನಗರ್ಥವಾಗಲ್ಲ' ಎಂದು ಜಿಯಾ ಬರೆದಿದ್ದ ಡೆತ್ ನೋಟ್ ನಲ್ಲಿ ಉಲ್ಲೇಖವಾಗಿದೆ.

ಕಠಿಣ ಶಿಕ್ಷೆಯಾಗುವ ಸಾಧ್ಯತೆ

ಇನ್ನು ಸಿಬಿಐ ಸಲ್ಲಿರುವ ವರದಿ ಆಧರಿಸಿ, ಫೆಬ್ರವರಿ 14 ರಂದು ಕೋರ್ಟ್ ವಿಚಾರಣೆ ನಡೆಸಲಿದೆ. ಒಂದು ವೇಳೆ ಸೂರಜ್ ಅಪರಾಧಿ ಎಂದು ಸಾಬೀತಾದರೇ, ಕಠಿಣ ಶಿಕ್ಷೆಗೆ ಗುರಿಯಾಗಲಿದ್ದಾರೆ.

ಜಿಯಾ ಖಾನ್ ಬಗ್ಗೆ

ಅಮಿತಾಬ್ ಬಚ್ಚನ್ ಹಾಗೂ ರಾಮ್ ಗೋಪಾಲ್ ವರ್ಮಾರ 'ನಿಶಬ್ಧ್' ಎಂಬ ಬಾಲಿವುಡ್ ಸಿನಿಮಾದಿಂದ ಪರಿಚಯವಾಗಿ, 'ಗಜಿನಿ', 'ಹೌಸ್‍ಫುಲ್‌' ಚಿತ್ರಗಳಲ್ಲಿ ಅಭಿನಯಿಸಿದ್ದರು.

English summary
A sessions court here today framed charges against Bollywood actor Sooraj Pancholi for allegedly abetting actress Jiah Khan's suicide.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada