twitter
    For Quick Alerts
    ALLOW NOTIFICATIONS  
    For Daily Alerts

    ಟ್ವಿಟ್ಟರ್'ನಲ್ಲಿ ವಿಡಿಯೋ ಹಾಕಿದ್ದಕ್ಕೆ ನಟನ ವಿರುದ್ಧ ದೂರು, ಆ ವಿಡಿಯೋದಲ್ಲಿ ಅಂತಹದ್ದೇನಿದೆ?

    By Bharath Kumar
    |

    ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋಗಳು ಅಥವಾ ಫೋಟೋಗಳನ್ನ ಹಾಕುವ ಮುಂಚೆ ಸೂಕ್ಷ್ಮವಾಗಿ ಯೋಚಿಸಿ. ಇಲ್ಲವಾದಲ್ಲಿ ನಿಮ್ಮ ಮೇಲೆ ದೂರು ದಾಖಲಾದರೂ ಆಗಬಹುದು. ಕೇವಲ ಹಾಸ್ಯದ ಉದ್ದೇಶದಿಂದ ವಿಡಿಯೋ ಹಾಕಿದರು, ಅದು ಕೆಲವೊಮ್ಮೆ ಗಂಭೀರವಾಗಿ ಪರಿಣಾಮ ಬೀರುತ್ತೆ. ಈಗ ಇಂತಹದ್ದೇ ಹಾಸ್ಯ ವಿಡಿಯೋವೊಂದನ್ನ ಹಾಕಿದ ಕಾರಣಕ್ಕೆ ಬಾಲಿವುಡ್ ನಟ ರಿಷಿ ಕಪೂರ್ ವಿರುದ್ಧ ದೂರು ದಾಖಲಾಗಿದೆ.

    ಹೌದು, ಬಾಲಿವುಡ್ ನಟ ರಿಷಿ ಕಪೂರ್ ಇತ್ತೀಚೆಗಷ್ಟೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಿದ್ದರು. ಈ ವಿಡಿಯೋವನ್ನ ಖಂಡಿಸಿ, ಖಾಸಗಿ ವ್ಯಕ್ತಿಯೊಬ್ಬ ಸೈಬರ್ ಕ್ರೈಂಗೆ ದೂರು ನೀಡಿದ್ದಾನೆ. ಹೀಗಾಗಿ, ಸೈಬರ್ ಕ್ರೈಂ ಪೊಲೀಸರು ರಿಷಿ ಕಪೂರ್ ಅವರ ವಿರುದ್ಧ ದೂರು ದಾಖಲಸಿಕೊಂಡಿದ್ದಾರೆ ಎನ್ನಲಾಗಿದೆ.

    FIR filed against actor Rishi Kapoor

    ಇನ್ನು ಬಾಲಿವುಡ್ ನಟ ರಿಷಿ ಕಪೂರ್ ಅವರು ಈ ವಿಡಿಯೋ ಹಾಕಿರುವ ಬಗ್ಗೆ ಜೈ ಹೋ ಫೌಂಡೇಷನ್ ಎನ್.ಜಿ.ಒ. ಅಧ್ಯಕ್ಷ ಅಫ್ರೋಜ್ ಮಲಿಕ್ ಅವರು ಆಕ್ರೋಶ ವ್ಯಕ್ತಪಡಿಸಿದ್ದು, ''ರಿಷಿ ಕಪೂರ್ ಅವರಿಗೆ 2.6 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಅವರ ಹಾಕಿರುವ ವಿಡಿಯೋದಲ್ಲಿ ಅಪ್ರಾಪ್ತ ಬಾಲಕಿಯನ್ನ ಅಶ್ಲೀಲವಾಗಿ ಬಳಸಲಾಗಿದೆ. ಈ ವಿಡಿಯೋ ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತೆ. ಹೀಗಾಗಿ, ಈ ವಿಡಿಯೋ ಪೋಸ್ಟ್ ಮಾಡಿರುವ ರಿಷಿ ಕಪೂರ್ ಅವರ ಮೇಲೆ ಕ್ರಮ ತೆಗೆದುಕೊಳ್ಳಕೆಂದು ಒತ್ತಾಯಿಸಿದ್ದಾರೆ.

    ಅಂದ್ಹಾಗೆ, ರಿಷಿ ಕಪೂರ್ ಅವರು ಪೋಸ್ಟ್ ಮಾಡಿರುವ ವಿಡಿಯೋ ಸಾಮಾನ್ಯವಾಗಿ ಹಾಸ್ಯದ ಉದ್ದೇಶದಿಂದ ನಿರ್ಮಾಣ ಮಾಡಿರುವ ವಿಡಿಯೋ. ಇದು ವಿದೇಶದಲ್ಲಿ ನಿರ್ಮಾಣವಾಗಿರುವ ವಿಡಿಯೋ.

    ರಿಷಿ ಕಪೂರ್ ಅವರು ಪೋಸ್ಟ್ ಮಾಡಿರುವ ವಿಡಿಯೋ ಇಲ್ಲಿದೆ ನೋಡಿ

    English summary
    A non-profit organisation has sent a letter to the Cyber Police to file an FIR against actor Rishi Kapoor for posting 'pornographic material' on his Twitter account.
    Monday, August 28, 2017, 9:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X