For Quick Alerts
  ALLOW NOTIFICATIONS  
  For Daily Alerts

  ಕ್ರೈಸ್ತರ ಧಾರ್ಮಿಕ ಭಾವನೆಗೆ ಧಕ್ಕೆ: ರವೀನಾ ಟಂಡನ್, ಫರ್ಹಾ ಖಾನ್, ಭಾರತಿ ಸಿಂಗ್ ವಿರುದ್ಧ FIR

  |

  ಕ್ರೈಸ್ತರ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಡಿ ಬಾಲಿವುಡ್ ನಟಿ ರವೀನಾ ಟಂಡನ್, ನಿರ್ದೇಶಕಿ ಕಮ್ ಕೊರಿಯೋಗ್ರಾಫರ್ ಫರ್ಹಾ ಖಾನ್ ಮತ್ತು ಹಾಸ್ಯ ಕಲಾವಿದೆ ಭಾರತಿ ಸಿಂಗ್ ವಿರುದ್ಧ ನಾಗ್ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಎಫ್.ಐ.ಆರ್ ಹಾಕಿದ್ದಾರೆ.

  ಕಳೆದ ವರ್ಷ ಕ್ರಿಸ್ಮಸ್ ಹಬ್ಬದಂದು ಟಿವಿಯಲ್ಲಿ ಪ್ರಸಾರವಾದ ಕಾರ್ಯಕ್ರಮವೊಂದರಲ್ಲಿ ಕ್ರೈಸ್ತ ಧರ್ಮದ ಶಬ್ದವೊಂದನ್ನು ಬಳಸಿ ಗೇಲಿ ಮಾಡಿದ್ದಾರೆ ಎಂದು ಆರೋಪಿಸಿ ಗೋರೇವಾಡದ ನಿವಾಸಿ ಖುಷ್ಬು ಭಗವಾನ್ ಪರ್ವಾರ್ (27) ದೂರು ನೀಡಿದ್ದಾರೆ ಎಂದು ಮಂಕಾಪುರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ವಜೀರ್ ಶೇಖ್ ತಿಳಿಸಿದ್ದಾರೆ.

  ಟಿವಿಯಲ್ಲಿ ಪ್ರಸಾರವಾದ ಕಾರ್ಯಕ್ರಮವನ್ನು ವೀಕ್ಷಿಸಿ, ತನಿಖೆ ನಡೆಸಿ ಸೆಕ್ಷನ್ 295A ಅಡಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಸದ್ಯದಲ್ಲೇ ನಟಿ ರವೀನಾ ಟಂಡನ್, ಫರ್ಹಾ ಖಾನ್ ಮತ್ತು ಭಾರತಿ ಸಿಂಗ್ ಗೆ ಸಮನ್ಸ್ ಕಳುಹಿಸಲಾಗುವುದು ಎಂದು ಹೇಳಿದ್ದಾರೆ ಇನ್ಸ್ ಪೆಕ್ಟರ್ ವಜೀರ್ ಶೇಖ್.

  ಅಸಲಿಗೆ, ಟಿವಿ ಕಾರ್ಯಕ್ರಮದಲ್ಲಿ ಕ್ರೈಸ್ತ ಧರ್ಮದ ಶಬ್ದವೊಂದನ್ನು ಬಳಸಿ ಅಪಹಾಸ್ಯ ಮಾಡಿದಾಗಲೇ ಸೋಷಿಯಲ್ ಮೀಡಿಯಾದಲ್ಲಿ ವಿವಾದ ಭುಗಿಲೆದ್ದಿತ್ತು. ಆಗ ತಮ್ಮಿಂದಾದ ತಪ್ಪನ್ನು ಅರಿತ ರವೀನಾ ಟಂಡನ್, ಫರ್ಹಾ ಖಾನ್ ಮತ್ತು ಭಾರತಿ ಸಿಂಗ್ ಕ್ಷಮೆ ಕೇಳಿದ್ದರು. ಇದೀಗ ದೂರು ದಾಖಲಾಗಿರುವ ಕಾರಣ, ಮೂವರು ಪೊಲೀಸ್ ಠಾಣೆ ಮೆಟ್ಟಿಲೇರುವಂತಾಗಿದೆ.

  English summary
  FIR Filed against Raveena Tandon, Farah Khan, Bharthi Singh over TV Show content.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X