»   » ಬಾಲಿವುಡ್ ನಟಿ ರವೀನಾ ಟಂಡನ್ ವಿರುದ್ಧ ಎಫ್.ಐ.ಆರ್ ದಾಖಲು

ಬಾಲಿವುಡ್ ನಟಿ ರವೀನಾ ಟಂಡನ್ ವಿರುದ್ಧ ಎಫ್.ಐ.ಆರ್ ದಾಖಲು

Posted By:
Subscribe to Filmibeat Kannada

ಬಾಲಿವುಡ್ ನಟಿ ರವೀನಾ ಟಂಡನ್ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ. ದೇಗುಲದಲ್ಲಿ ಜಾಹೀರಾತು ಚಿತ್ರೀಕರಣ ಮಾಡಿದ್ದಾರೆ ಎಂಬ ಆರೋಪದ ಮೇಲೆ ರವೀನಾ ವಿರುದ್ಧ ಪ್ರಕರಣ ದಾಖಲಾಗಿದೆ.

11ನೇ ಶತಮಾನದ ಲಿಂಗರಾಜ ದೇಗುಲದ 'ನೋ ಕ್ಯಾಮರಾ ಝೋನ್'ನಲ್ಲಿ ನಟಿ ರವೀನಾ ಟಂಡನ್ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ ಎಂದು ಆರೋಪಿಸಿ ದೇವಾಲಯದ ಆಡಳಿತ ಮಂಡಳಿ ಲಿಂಗರಾಜ ಪೋಲೀಸ್ ಠಾಣೆಗೆ ದೂರು ನೀಡಿದೆ.

ದೇವಸ್ಥಾನದಲ್ಲಿ ಆವರಣದಲ್ಲಿ ನಿಂತು ನಟಿ ರವೀನಾ ಟಂಡನ್ ಬ್ಯೂಟಿ ಟಿಪ್ಸ್ ನೀಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆ ವಿಡಿಯೋನ ದೇವಸ್ಥಾನದ ಆಡಳಿತ ಮಂಡಳಿ ವೀಕ್ಷಿಸಿದ ಮೇಲೆ ದೂರು ದಾಖಲಿಸಿದೆ.

FIR lodged against Bollywood Actress Raveena Tandon

ದೇಗುಲದಲ್ಲಿ ಚಿತ್ರೀಕರಣ, ರವೀನಾ ಟಂಡನ್ ವಿರುದ್ಧ ಎಫ್ಐಆರ್

ಪ್ರಕರಣದ ಬಗ್ಗೆ ಟೈಮ್ಸ್ ಆಫ್ ಇಂಡಿಯಾಗೆ ಪ್ರತಿಕ್ರಿಯೆ ನೀಡಿರುವ ರವೀನಾ ಟಂಡನ್, ''ನಾನು ಮಾತನಾಡುತ್ತಿರುವುದನ್ನ ಯಾರು ಕ್ಯಾಮರಾದಲ್ಲಿ ಸೆರೆಹಿಡಿದರು ಅನ್ನೋದು ನನಗೆ ಗೊತ್ತಿಲ್ಲ. ನನ್ನ ಅಕ್ಕ-ಪಕ್ಕದಲ್ಲಿದ್ದವರ ಕೈಯಲ್ಲಿ ಮೊಬೈಲ್ ಫೋನ್ ಇತ್ತು. ಬಹುತೇಕರು ನನ್ನೊಂದಿಗೆ ಸೆಲ್ಫಿ ಕ್ಲಿಕ್ ಮಾಡಿಕೊಂಡರು. ಯಾರೋ ಒಬ್ಬರು ನನ್ನ ಬಳಿ ಬಂದ ಬ್ಯೂಟಿ ಟಿಪ್ಸ್ ಕೇಳಿದರು. ಅದಕ್ಕೆ ನಾನು ಕೆಲ ಟಿಪ್ಸ್ ಗಳನ್ನು ನೀಡಿದೆ. ಅದನ್ನೇ ಯಾರೋ ರೆಕಾರ್ಡ್ ಮಾಡಿದ್ದಾರೆ'' ಎಂದಿದ್ದಾರೆ.

English summary
FIR lodged against Bollywood Actress Raveena Tandon for allegedly shooting an advertisement inside the premises of Lord Shiva Shrine.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada