»   » ಗೌಹರ್ ಖಾನ್ ಕಪಾಳಮೋಕ್ಷ ಪಬ್ಲಿಸಿಟಿ ಸ್ಟಂಟ್ ಅಂತೆ!

ಗೌಹರ್ ಖಾನ್ ಕಪಾಳಮೋಕ್ಷ ಪಬ್ಲಿಸಿಟಿ ಸ್ಟಂಟ್ ಅಂತೆ!

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ರಿಯಾಲಿಟಿ ಶೋವೊಂದರಲ್ಲಿ ಗೌಹರ್ ಖಾನ್ ಅವರಿಗೆ ಕಪಾಳಮೋಕ್ಷವಾದ ಪ್ರಸಂಗ ಎಲ್ಲರಿಗೂ ಗೊತ್ತೇ ಇದೆ. ಇಂಡಿಯನ್ ರಾ ಸ್ಟಾರ್ ಎಂಬ ರಿಯಾಲಿಟಿ ಶೋ ನಿರೂಪಕಿ ನಟಿ ಗೌಹರ್ ಖಾನ್ ಕೆನ್ನೆ ಊದಿಸಿದ ಪ್ರೇಕ್ಷಕನೊಬ್ಬ ಈಗ ಕೆನ್ನೆ ತಟ್ಟಿದ್ದ ಪ್ರಸಂಗದ ಅಸಲಿ ಕಥೆ ಹೇಳಿದ್ದಾನೆ.

ಈ ಘಟನೆಯಿಂದ ನನಗೆ ನೋವಾಗಿದೆ ಆದರೆ ನಾನು ಧೃತಿಗೆಟ್ಟಿಲ್ಲ ಎಂದು ಕೆನ್ನೆ ಊದಿಸಿಕೊಂಡ ಗೌಹರ್ ಸುದೀರ್ಘ ಪತ್ರ ಬರೆದು ಮಾಧ್ಯಮಗಳಿಗೆ ನೀಡಿದ್ದರು. ಮುಸ್ಲಿಂ ಮಹಿಳೆಯಾಗಿ ತುಂಡುಬಟ್ಟೆ ತೊಟ್ಟಿದ್ದೇಕೆ? ಎಂದು ಪ್ರಶ್ನಿಸಿ ಗೌಹರ್ ಕೆನ್ನೆ ತಟ್ಟಿದ್ದ ಆಗುಂತಕನ ವಿರುದ್ಧ ಅಭಿಮಾನಿಗಳು, ಬಾಲಿವುಡ್ ಸಹದ್ಯೋಗಿಗಳು ಹರಿಹಾಯ್ದಿದ್ದರು. [ಕೆನ್ನೆ ಊದಿಸಿಕೊಂಡ ಗೌಹರ್ ಬರೆದ ಪತ್ರದಲ್ಲೇನಿದೆ?]

ಅದರೆ, ಅಸಲಿಗೆ ರಿಯಾಲಿಟಿ ಶೋ ಟಿಆರ್ ಪಿ ಹೆಚ್ಚಳಕ್ಕಾಗಿ ಕೆನ್ನೆಗೆ ಬಾರಿಸುವ ಪ್ರಸಂಗವನ್ನು ಗೌಹರ್ ಅವರೇ ಸೃಷ್ಟಿಸಿದ್ದರು. ಆರೋಪಿ ಮಲಿಕ್ ಗೆ ಸುಪಾರಿ ನೀಡಿ ಈ ರೀತಿ ನಡೆದುಕೊಳ್ಳುವಂತೆ ಹೇಳಿದ್ದರು ಎಂಬ ಸತ್ಯ ಕಥೆಯನ್ನು ಜೀ ವಾಹಿನಿ ಬಯಲಿಗೆಳೆದಿದೆ.

Gauahar Khan paid me to slap her in public claims Mohammad Akil Malik

ಜ್ಯೂನಿಯರ್ ಆರ್ಟಿಸ್ಟ್ ಕೂಡಾ ಆಗಿರುವ ಆರೋಪಿ ಮೊಹಮ್ಮದ್ ಅಖಿಲ್ ಮಲ್ಲಿಕ್ ಹೇಳಿಕೆ ಪ್ರಕಾರ, ಈ ರಿಯಾಲಿಟಿ ಶೋನ ಫೈನಲ್ ಎಪಿಸೋಡ್ ನಲ್ಲಿ ಗೌಹರ್ ಅವರಿಗೆ ನಾನು ಕೆನ್ನೆಗೆ ಬಾರಿಸಿ ಅವರ ಉಡುಪಿನ ಬಗ್ಗೆ ಕಾಮೆಂಟ್ ಮಾಡಬೇಕಿತ್ತು. ನಾನು ಅದರಂತೆ ನಡೆದುಕೊಂಡೆ. ಇದಕ್ಕಾಗಿ ನನಗೆ ಒಂದಷ್ಟು ಹಣ ಹಾಗೂ ದಬ್ಬಾಂಗ್ ಚಿತ್ರದ ಮುಂದಿನ ಭಾಗದಲ್ಲಿ ನಟಿಸುವ ಅವಕಾಶ ಕೊಡಿಸುವ ಭರವಸೆ ನೀಡಲಾಗಿತ್ತು ಎಂದು ಹೇಳಿದ್ದಾನೆ.

ಬಿಹಾರ ಮೂಲದ ಮಲೀಕ್ ಹೊಟ್ಟೆಪಾಡಿಗಾಗಿ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದು, ಆಡಿಷನ್ ವೊಂದರ ಸಮಯದಲ್ಲಿ ಗೌಹರ್ ಖಾನ್ ಕಣ್ಣಿಗೆ ಬಿದ್ದಿದ್ದಾನೆ. ಸಿನಿಮಾದಲ್ಲಿ ಚಾನ್ಸ್ ಕೊಡಿಸುವಂತೆ ಮಲೀಕ್ ಕೇಳಿ ಕೊಂಡಿದ್ದಾನೆ. ನಂತರ ಎರಡು ಬಾರಿ ಗೌಹರ್ ಖಾನ್ ಅವರನ್ನು ಭೇಟಿ ಮಾಡಿದ್ದಾನೆ. ಸಿನಿಮಾದಲ್ಲಿ ಚಾನ್ಸ್ ಕೊಡಿಸುತ್ತೇನೆ ಎಂದು ಆಮಿಷ ನೀಡಿದರು ಅದು ನನಗೆ ಸಾಕಾಗಿತ್ತು. ದುಡ್ಡು ಕಾಸು ಏನು ಬೇಕಾಗಿರಲಿಲ್ಲ. ಅವರು ಹೇಳಿದಂತೆ ನಾನು ನಡೆದುಕೊಂಡಿದ್ದೇನೆ. ಅದರೆ, ನನಗೆ ಮೋಸ ಮಾಡಿದ್ದಾರೆ ಎಂದು ಮಲೀಕ್ ಹೇಳಿಕೊಂಡಿದ್ದಾನೆ. ಈ ಬಗ್ಗೆ ಡ್ರಾಮಾ ಕ್ವೀನ್ ಗೌಹರ್ ತುಟಿಪಿಟಕ್ ಅಂದಿಲ್ಲ.


(ಏಜೆನ್ಸೀಸ್)
English summary
Mohammad Akil Malik the 24-yr-old man who slapped Gauahar Khan in full public glare has called it a publicity stunt by the actor herself reports Zee News

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada