For Quick Alerts
  ALLOW NOTIFICATIONS  
  For Daily Alerts

  ಎರಡನೇ ಮಗುವಿನ ನಿರೀಕ್ಷೆಯಲ್ಲಿ ಗೀತಾ ಬಸ್ರಾ-ಹರ್ಭಜನ್ ಸಿಂಗ್ ದಂಪತಿ

  |

  ನಟಿ ಗೀತಾ ಬಸ್ರಾ ಮತ್ತು ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಈ ಸ್ಟಾರ್ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಂಭ್ರಮದ ವಿಚಾರವನ್ನು ಹರ್ಭನ್ ಮತ್ತು ಗೀತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಮೊದಲ ಮಗಳು ಹಿನಾಯಾ ಜೊತೆ ಗೀತಾ ಮತ್ತು ಹರ್ಭನ್ ಇಬ್ಬರು ಕ್ಯಾಮರಾಗೆ ಪೋಸ್ ನೀಡಿರುವ ಫೋಟೋವನ್ನು ಶೇರ್ ಮಾಡಿ, ಮತ್ತೊಂದು ಮಗುವಿನ ಸ್ವಾಗತಕ್ಕೆ ಸಜ್ಜಾಗಿರುವುದಾಗಿ ಹೇಳಿದ್ದಾರೆ. ಮಗಳು ಹಿನಾಯಾ ಕೈಯಲ್ಲಿ ಕಪ್ಪು ಬಣ್ಣದ ಟೀ ಶರ್ಟ್ ಹಿಡಿದಿದ್ದು, ಅದರ ಮೇಲೆ ಶೀಘ್ರದಲ್ಲೇ ಸಹೋದರಿ ಆಗಲಿದ್ದೇನೆ ಎಂದು ಬರೆಯಲಾಗಿದೆ.

  ಎರಡನೇ ಮಗುವಿಗೆ ಜನ್ಮ ನೀಡಿದ ನಟಿ ಕರೀನಾ ಕಪೂರ್

  ಹರ್ಭಜನ್ ಸಿಂಗ್ ಕುಟುಂಬದ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನಟಿ ಗೀತಾ ಬಸ್ರಾ ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದು, ಜುಲೈನಲ್ಲಿ ಎರಡನೇ ಮಗು ಆಗಮನವಾಗಲಿದೆ ಎಂದು ಬರೆದುಕೊಂಡಿದ್ದಾರೆ.

  ಹರ್ಭಜನ್ ಮತ್ತು ಗೀತಾ 2015 ಅಕ್ಟೋಬರ್ 29ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 5 ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದ ಈ ಜೋಡಿ ಬಳಿಕ ಪತಿ-ಪತ್ನಿಯರಾಗಿದ್ದಾರೆ. ಪಂಜಾಬ್‌ನ ಜಲಂಧರ್‌ನಲ್ಲಿ ನಡೆದ ಇಬ್ಬರ ಮದುವೆ ಸಮಾರಂಭದಲ್ಲಿ ಅನೇಕ ಗಣ್ಯರು ಭಾಗಿಯಾಗಿದ್ದರು.

  ದಿನೇ ದಿನೇ ಏರುತ್ತಿದೆ ರಾಬರ್ಟ್ ಕಲೆಕ್ಷನ್ | Roberrt Collection | Filmibeat Kannada

  ಹರ್ಭಜನ್ ಸಿಂಗ್ ಸದ್ಯ ಕ್ರಿಕೆಟ್‌ನಿಂದ ಸಿನಿಮಾರಂಗದ ಕಡೆ ಮುಖ ಮಾಡಿದ್ದಾರೆ. ತಮಿಳು ಸಿನಿಮಾದಲ್ಲಿ ನಟಿಸುವ ಮೂಲಕ ಮೊದಲ ಬಾರಿಗೆ ಬಣ್ಣದ ಲೋಕದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಸದ್ಯ ಫ್ರೆಂಡ್ ಶಿಪ್ ಸಿನಿಮಾ ರಿಲೀಸ್‌ ಎದುರು ನೋಡುತ್ತಿದ್ದಾರೆ.

  English summary
  Actress Geeta Basra and Harbhajan Singh to welcome second child in July.
  -->

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X