For Quick Alerts
  ALLOW NOTIFICATIONS  
  For Daily Alerts

  ಅರೆ ಬೆತ್ತಲೆ ಚಿತ್ರ ಪೋಸ್ಟ್ ಮಾಡಿ 'ಏನಾದ್ರು ಮಾಡಿಕೊಳ್ಳಿ' ಎಂದ ನಟಿ

  By ಫಿಲ್ಮಿಬೀಟ್ ಡೆಸ್ಕ್
  |

  ಉದ್ಯಮಿ ರಾಜ್ ಕುಂದ್ರಾ ಬಂಧನಕ್ಕೂ ಮೊದಲೇ ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ನಟಿ ಗೆಹನಾ ವಸಿಷ್ಠ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅರೆ ಬೆತ್ತಲೆ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.

  ಚಿತ್ರವನ್ನು ಪೋಸ್ಟ್ ಮಾಡುವ ಜೊತೆಗೆ ಡಿಸ್‌ಕ್ಲೇಮರ್ ಬರೆದಿರುವ ನಟಿ ಗೆಹನಾ, ನಾನಿರೋದೆ ಹೀಗೆ ಏನು ಬೇಕಾದರೂ ಮಾಡಿಕೊಳ್ಳಿ ಎಂದು ಸವಾಲು ಹಾಕಿದ್ದಾರೆ.

  ಅಶ್ಲೀಲ ವಿಡಿಯೋ ನಿರ್ಮಾಣ ಮಾಡುತ್ತಿದ್ದ ಪ್ರಕರಣದಲ್ಲಿ ಗೆಹನಾ ವಶಿಷ್ಠ ಅನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಗೆಹನಾ ವಶಿಷ್ಠ ನಿರ್ದೇಶಿಸುತ್ತಿದ್ದ ಕಿರು ವಿಡಿಯೋದ ಸೆಟ್‌ನಲ್ಲಿ ಅತ್ಯಾಚಾರ ಆದ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಗೆಹನಾರನ್ನು ಬಂಧಿಸಗಿತ್ತು. ಜಾಮೀನಿನ ಮೇಲೆ ಹೊರಗಿರುವ ನಟಿ ಗೆಹನಾ ವಶಿಷ್ಠ ಸಾಫ್ಟ್ ಪೋರ್ನ್ ಸಿನಿಮಾಗಳಲ್ಲಿ ನಟಿಸುವುದನ್ನು ಮುಂದುವರೆಸಿದ್ದಾರೆ.

  ತಮ್ಮ ಅರೆ ಬೆತ್ತಲೆ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿರುವ ಗೆಹನಾ, ಈ ರೀತಿಯ ಚಿತ್ರಗಳನ್ನು ಹಯಾತ್ ರಿಜೆನ್ಸಿ ಹೋಟೆಲ್‌ನಲ್ಲಿ ಚಿತ್ರೀಕರಿಸಿದೆವು. ಚಿತ್ರೀಕರಣದ ಸಮಯದಲ್ಲಿ ಸುಮಾರು 20 ಮಂದಿ ಸೆಟ್‌ನಲ್ಲಿದ್ದರು. ಆ ಸಮಯದಲ್ಲಿ ನನ್ನ ಮೇಲೆ ಯಾವುದೇ ಅತ್ಯಾಚಾರ ಆಗಲಿಲ್ಲ. ಚಿತ್ರೀಕರಣದ ಸಮಯದಲ್ಲಿ ನಾನು ಕುಡಿದಿರಲಿಲ್ಲ, ಮಾದಕ ವಸ್ತು ಸೇವಿಸಿರಲಿಲ್ಲ. ಅಥವಾ ಯಾವುದೇ ಮತ್ತು ಭರಿತ ಜ್ಯೂಸ್ ಅನ್ನು ಸೆಟ್‌ನವರು ನನಗೆ ನೀಡಿರಲಿಲ್ಲ'' ಎಂದಿದ್ದಾರೆ ಗೆಹನಾ.

  ನಾನು ಅಪ್ರಾಪ್ತಳಲ್ಲ: ಗೆಹನಾ ವಸಿಷ್ಠ

  ನಾನು ಅಪ್ರಾಪ್ತಳಲ್ಲ: ಗೆಹನಾ ವಸಿಷ್ಠ

  ಮುಂದುವರೆದು ''ನಾನು ಆಟೊ ಒಂದರಲ್ಲಿ ಸೆಟ್‌ಗೆ ಹೋದೆ ಬೇರೆ ಆಟೊ ಹಿಡಿದುಕೊಂಡು ಸುರಕ್ಷತೆಯಿಂದ ನನ್ನ ಮನೆಗೆ ಬಂದೆ. ಮನೆಗೆ ಬರುವ ಮುನ್ನ ನನ್ನ ಸಂಭಾವನೆಯನ್ನು ಪಡೆದುಕೊಂಡೇ ಬಂದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ನಾನು ಅಪ್ರಾಪ್ತಳಲ್ಲ ಮತ್ತು ನಾನೊಬ್ಬ ಕಲಾವಿದೆ'' ಎಂದಿದ್ದಾರೆ ಗೆಹನಾ ವಸಿಷ್ಠ.

  ನಮ್ಮ ನಿರ್ಮಾಪಕರ ಮೇಲೆ ಕೇಸು ಹಾಕಬೇಡಿ: ಗೆಹನಾ

  ನಮ್ಮ ನಿರ್ಮಾಪಕರ ಮೇಲೆ ಕೇಸು ಹಾಕಬೇಡಿ: ಗೆಹನಾ

  ''ವರ್ಷ, ಒಂದುವರೆ ವರ್ಷವಾದ ಬಳಿಕ ಈ ಚಿತ್ರಗಳನ್ನು ತೆಗೆದಿದ್ದಕ್ಕೆ, ಇಂಥಹಾ ವಿಡಿಯೋ ಚಿತ್ರೀಕರಣ ಮಾಡಿದ್ದಕ್ಕೆ ನನ್ನ ನಿರ್ಮಾಪಕರ ಮೇಲೆ ಸೆಕ್ಷನ್ 370, 376, 354 ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಬೇಡಿ. ಯಾರಿಗಾದರೂ ನನ್ನ ಈ ಚಿತ್ರಗಳಿಂದ ಮನಸ್ಸಿಗೆ ನೋವಾಗಿದ್ದರೆ ನನ್ನನ್ನು ಬ್ಲಾಕ್ ಮಾಡಿ. ಇದು ನನ್ನ ಸಾಮಾಜಿಕ ಜಾಲತಾಣ ಖಾತೆ ಇಲ್ಲಿ ಏನು ಬೇಕಾದರು ಪೋಸ್ಟ್ ಮಾಡುವ ಅಧಿಕಾರ ನನಗೆ ಇದೆ'' ಎಂದಿದ್ದಾರೆ ಗೆಹನಾ ವಸಿ‍ಷ್ಠ.

  ಗೆಹನಾ ವಸಿಷ್ಠರನ್ನು ಬಂಧಿಸಿದ್ದ ಮುಂಬೈ ಪೊಲೀಸರು

  ಗೆಹನಾ ವಸಿಷ್ಠರನ್ನು ಬಂಧಿಸಿದ್ದ ಮುಂಬೈ ಪೊಲೀಸರು

  ರಾಜ್ ಕುಂದ್ರಾಗಾಗಿ ಗೆಹನಾ ವಸಿಷ್ಠ ವಿಡಿಯೋಗಳನ್ನು ಚಿತ್ರೀಕರಣ ಮಾಡಿ ಕೊಡುತ್ತಿದ್ದರು. ಅದೇ ಸಮಯದಲ್ಲಿ ಅವರ ಸೆಟ್‌ ಮೇಲೆ ಮುಂಬೈ ಪೊಲೀಸರು ದಾಳಿ ಮಾಡಿ ಹಲವರನ್ನು ಬಂಧಿಸಿದ್ದರು. ಗೆಹನಾರನ್ನು ಸಹ ಬಂಧಿಸಲಾಗಿತ್ತು. ಅದಾದ ಬಳಿಕ ಗೆಹನಾ ಬಳಿಯೇ ಕೆಲಸ ಮಾಡುತ್ತಿದ್ದ ಮಾಡೆಲ್ ಒಬ್ಬರು ಸೆಟ್‌ನಲ್ಲಿ ನನ್ನ ಮೇಲೆ ಅತ್ಯಾಚಾರವಾಗಿದೆ ಎಂದು ದೂರು ನೀಡಿದರು. ಆ ದೂರಿನ ಅನ್ವಯ ಆಗಷ್ಟೆ ಜಾಮೀನಿನ ಹೊರಗೆ ಬಂದಿದ್ದ ಗೆಹನಾರನ್ನು ಮತ್ತೆ ಬಂಧಿಸಲಾಯ್ತು. ಎರಡೂ ಪ್ರಕರಣದಲ್ಲಿ ಜಾಮೀನು ಪಡೆದಿಕೊಂಡಿರುವ ಗೆಹನಾಗೆ ಕೆಲವು ದಿನಗಳ ಹಿಂದೆ ಮುಂಬೈ ಪೊಲೀಸರು ಮತ್ತೆ ಸಮನ್ಸ್ ಜಾರಿ ಮಾಡಿದ್ದರು. ಗೆಹನಾ ವಶಿಷ್ಠ ನಿರೀಕ್ಷಣಾ ಜಾಮೀನಿಗೆ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತು.

  ರಾಜ್ ಕುಂದ್ರಾ ಪರ ನಿಂತಿದ್ದ ಗೆಹನಾ

  ರಾಜ್ ಕುಂದ್ರಾ ಪರ ನಿಂತಿದ್ದ ಗೆಹನಾ

  ರಾಜ್ ಕುಂದ್ರಾ ಬಂಧನವಾದ ಬಳಿಕ ಗೆಹನಾ ವಸಿಷ್ಠ, ಕುಂದ್ರಾಗೆ ಬೆಂಬಲ ನೀಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕಿದ್ದರು. ಕುಂದ್ರಾ ಎಂದೂ ಸಹ ಅಶ್ಲೀಲ ವಿಡಿಯೋ ನಿರ್ಮಾಣ ಮಾಡುವಂತೆ ಕೇಳಿರಲಿಲ್ಲ. ನಟಿಯರಿಗೆ ಇಷ್ಟವಿದ್ದರಷ್ಟೆ ಶೃಂಗಾರದ ವಿಡಿಯೋಗಳನ್ನು ಚಿತ್ರಿಸುವಂತೆ ಹೇಳಿದ್ದರು ಎಂದಿದ್ದರು. ರಾಜ್ ಕುಂದ್ರಾ ಜಂಟಲ್‌ಮನ್ ಎಂದಿದ್ದ ಗೆಹನಾ, ಕುಂದ್ರಾ ವಿರುದ್ಧ ಆರೋಪ ಮಾಡುತ್ತಿರುವ ಶೆರ್ಲಿನ್ ಚೋಪ್ರಾ, ಪೂನಂ ಪಾಂಡೆ ಅವರುಗಳನ್ನು ತರಾಟೆಗೆ ತೆಗೆದುಕೊಂಡರು. ಸೆಟ್‌ನಲ್ಲಿ ಅತ್ಯಾಚಾರವಾಗಿದೆ ಎಂದಿದ್ದ ಹುಡುಗಿಯ ಬಗ್ಗೆ ಮಾತನಾಡಿದ್ದ ಗೆಹನಾ, ದೂರು ನೀಡಿದ ಹುಡುಗಿ ಪ್ರತಿದಿನ ನನಗೆ ವಾಟ್ಸ್‌ಆಪ್ ಸಂದೇಶ ಕಳಿಸುತ್ತಿದ್ದಳು. ಮತ್ತೊಮ್ಮೆ ನಿಮ್ಮೊಂದಿಗೆ ಕೆಲಸ ಮಾಡಲು ಉತ್ಸುಕಳಾಗಿದ್ದೇನೆ ಎಂದು ಹೇಳಿದ್ದಳು. ಆಕೆ ಅತ್ಯಾಚಾರವಾಗಿದೆ ಎಂದು ಹೇಳಿದ ದಿನವೇ ಆಕೆ ಇನ್‌ಸ್ಟಾಗ್ರಾಂನಲ್ಲಿ ಹಾಡಿ-ಕುಣಿಯುತ್ತಿರುವ ವಿಡಿಯೋ ಪ್ರಕಟಿಸಿದ್ದಳು. ಆ ನಂತರದ ದಿನಗಳಲ್ಲೂ ಪ್ರಕಟಿಸಿದ್ದಳು ಎಂದು ಗೆಹನಾ ಹೇಳಿದ್ದರು.

  English summary
  Actress Gehana Vasistha posted glamours pictures of her and put a disclaimer that who ever found these photos were offending they can block me.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X