For Quick Alerts
  ALLOW NOTIFICATIONS  
  For Daily Alerts

  ಜೆನಿಲಿಯಾ ದಂಪತಿಯ ಮಹತ್ವಾಕಾಂಕ್ಷೆ ಸಿನಿಮಾ ಸೆಟ್ಟೇರಿದೆ

  By Bharath Kumar
  |

  ಬಾಲಿವುಡ್ ತಾರಾ ದಂಪತಿ ಜೆನಿಲಿಯಾ ಡಿಸೋಜಾ ಮತ್ತು ರಿತೇಶ್ ದೇಶ್ ಮುಖ್ ಅವರ ಮಹತ್ವಾಕಾಂಕ್ಷೆಯ ಸಿನಿಮಾ ಸೆಟ್ಟೇರಿದೆ. ಈ ಸಂತಸವನ್ನ ಸ್ವತಃ ಜೆನಿಲಿಯಾ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

  ಮರಾಠಿ ಭಾಷೆಯಲ್ಲಿ ತನ್ನ ಪತಿ ರಿತೇಶ್ ದೇಶ್ ಮುಖ್ ನಾಯಕನಾಗಿ ಅಭಿನಯಿಸುತ್ತಿರುವ 'ಮೌಲಿ' ಚಿತ್ರ ಏಪ್ರಿಲ್ 30 ರಂದು ಸೆಟ್ಟೇರಿದೆ.

  ಅಂದ್ಹಾಗೆ, ರಿತೇಶ್ ಮರಾಠಿಯಲ್ಲಿ ರಿತೇಶ್ ದೇಶ್ ಮುಖ್ ಅಭಿನಯಿಸುತ್ತಿರುವ ಎರಡನೇ ಸಿನಿಮಾ ಇದು. ಇದಕ್ಕೂ ಮುಂಚೆ 2014 ರಲ್ಲಿ 'ಲೈ ಭಾರಿ' ಎಂಬ ಚಿತ್ರದಲ್ಲಿ ರಿತೇಶ್ ಕಾಣಿಸಿಕೊಂಡಿದ್ದರು.

  ವಿಶೇಷ ಅಂದ್ರೆ, ಈ ಮೊದಲ ಚಿತ್ರ ಹಾಗೂ ಈಗ ಸೆಟ್ಟೇರಿರುವ ಹೊಸ ಚಿತ್ರವನ್ನ ಜೆನಿಲಿಯಾ ತಮ್ಮದೇ ಬ್ಯಾನರ್ ನಲ್ಲೇ ನಿರ್ಮಾಣ ಮಾಡುತ್ತಿದ್ದಾರೆ. ಜೆನಿಲಿಯಾ ಮತ್ತು ರಿತೇಶ್ ಮಾಲಿಕತ್ವದ ಮುಂಬೈ ಫಿಲ್ಮ್ಸ್ ಸಂಸ್ಥೆ ಅಡಿ ಈ ಸಿನಿಮಾ ಆರಂಭವಾಗಿದೆ. ಆಧಿತ್ಯ ಸರ್ಪೋತ್ದರ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ.

  'ಲೈ ಭಾರಿ' ಚಿತ್ರದಲ್ಲಿ ಪತಿ ಜೊತೆ ಜೆನಿಲಿಯಾ ಕೂಡ ವಿಶೇಷ ಪಾತ್ರವೊಂದರಲ್ಲಿ ಅಭಿನಯಿಸಿದ್ದರು. ಬಹುಶಃ ಈ ಚಿತ್ರದಲ್ಲೂ ಜೆನಿಲಿಯಾ ಅಭಿನಯಿಸಬಹುದು ಎಂಬ ನಿರೀಕ್ಷೆ ಇದೆ. 2012ರಲ್ಲಿ ನಾಇಷ್ಟಂ ಚಿತ್ರದಲ್ಲಿ ಜೆನಿಲಿಯಾ ಕೊನೆಯದಾಗಿ ನಾಯಕಿಯಾಗಿ ಅಭಿನಯಿಸಿದ್ದರು. ಅದಾದ ನಂತರ 'ಜೈ ಹೋ', 'ಲೈ ಭಾರಿ', 'ಫೋರ್ಸ್ 2' ಚಿತ್ರದಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದರು.

  English summary
  Actress-producer Genelia Deshmukh is excited about the commencement of shooting of Marathi film Mauli, backed by her and husband Riteish Deshmukh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X