For Quick Alerts
  ALLOW NOTIFICATIONS  
  For Daily Alerts

  ಮಕ್ಕಳಿಗಾಗಿ ಆಟ ಕಲಿಯಲು ಹೋಗಿ ಕೈ ಮುರಿದುಕೊಂಡ ಜೆನಿಲಿಯಾ

  |

  ಮದುವೆಯ ನಂತರ ಸಿನಿಮಾದಿಂದ ದೂರ ಉಳಿದಿದ್ದ ಜೆನಿಲಿಯಾ ಡಿ ಸೋಜಾ ಈಗ ಕಮ್‌ಬ್ಯಾಕ್ ಮಾಡುವ ಹುಮ್ಮಸ್ಸಿನಲ್ಲಿದ್ದರು. ಆದರೆ ಹಠಾತ್ತನೆ ಗಾಯಮಾಡಿಕೊಂಡು ಮನೆಯಲ್ಲಿ ಕೂತಿದ್ದಾರೆ.

  ನಟಿ ಜೆನಿಲಿಯಾ ಅವರು ಸ್ಕೇಟಿಂಗ್ ಕಲಿಯಲು ತರಬೇತಿ ಕೇಂದ್ರ ಸೇರಿಕೊಂಡಿದ್ದರು. ಸ್ಕೇಟಿಂಗ್ ಮಾಡುವಾಗ ಜಾರಿ ಹಿಮ್ಮುಖವಾಗಿ ಬಿದ್ದು ಎಡಗೈಗೆ ತೀವ್ರ ಪೆಟ್ಟು ಮಾಡಿಕೊಂಡಿದ್ದಾರೆ. ಎಡಗೈ ಮೂಳೆ ಬಿರುಕು ಬಿಟ್ಟಿದ್ದು ಕೈಗೆ ಪ್ಲಾಸ್ಟರ್ ಹಾಕಲಾಗಿದೆ.

  ತಾವು ಜಾರಿ ಬಿದ್ದ ವಿಡಿಯೋವನ್ನು ಜೆನಿಲಿಯಾ ಡಿಸೋಜಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಅಷ್ಟೇ ಅಲ್ಲದೆ, ತಾವು ಮರಳಿ ಚೇತರಿಸಿಕೊಳ್ಳುತ್ತಿರುವುದಾಗಿ ವೈರಲ್ ವಿಡಿಯೋ 'ಪಾರ್ರಿ ಹೋ ರಹೀ ಹೇ' ಮಾದರಿಯಲ್ಲಿ ತಮಾಷೆಯಾಗಿ ಹೇಳಿದ್ದಾರೆ.

  'ನನ್ನ ಮಕ್ಕಳ ಜೊತೆ ನಾನೂ ಸ್ಕೇಟಿಂಗ್ ಮಾಡೋಣ ಎಂದುಕೊಂಡು ಕಲಿಯಲು ಹೋದೆ. ಕಲಿತ ಮೇಲೆ ಸ್ಕೇಟಿಂಗ್ ಮಾಡುತ್ತಿರುವ ವಿಡಿಯೋಗಳನ್ನು ಇನ್‌ಸ್ಟಾಗ್ರಾಂ ನಲ್ಲಿ ಹಾಕೋಣ ಎಂದುಕೊಂಡಿದ್ದೆ. ಆದರೆ ಈಗ ಬಿದ್ದಿರುವ ವಿಡಿಯೋ ಹಾಕುತ್ತಿದ್ದೇನೆ. ಇನ್‌ಸ್ಟಾಗ್ರಾಂ ನಲ್ಲಿ ಎಲ್ಲ ಯಶಸ್ಸಿನ ವಿಡಿಯೋಗಳನ್ನೇ ಹಾಕುತ್ತಾರೆ. ನನ್ನದು ವಿಫಲ ಯತ್ನದ ವಿಡಿಯೋ' ಎಂದು ಬರೆದುಕೊಂಡಿದ್ದಾರೆ ಜೆನಿಲಿಯಾ.

  'ಹಾರುವ ಮುನ್ನಾ ಬೀಳಲೇ ಬೇಕು. ನಾನೂ ಕೂಡ ಹಾರಿಯೇ ತೀರುತ್ತೇನೆ. ಈ ಬೀಳುವಿಕೆ ನನ್ನನ್ನು ಆತ್ಮಸ್ಥೈರ್ಯ ಕುಂದಿಸುವುದಿಲ್ಲ. ನಾನು ಪ್ರಯತ್ನ ಮಾಡಿದ್ದೇನೆ, ಮಾಡುತ್ತಲೇ ಇರುತ್ತೇನೆ' ಎಂದಿದ್ದಾರೆ ಜೆನಿಲಿಯಾ ಡಿಸೋಜಾ.

  ನಟಿ ಜೆನಿಲಿಯಾ ಡಿಸೋಜಾ, ರಿತೇಶ್ ದೇಶ್‌ಮುಖ್ ಅವರೊಟ್ಟಿಗೆ ವಿವಾಹವಾದ ಮೇಲೆ ನಟನೆಯಿಂದ ದೂರ ಉಳಿದಿದ್ದರು. ಆಗೊಮ್ಮೆ-ಈಗೊಮ್ಮೆ ಅತಿಥಿ ಪಾತ್ರಗಳಲ್ಲಿಯಷ್ಟೆ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈಗ ಮಕ್ಕಳು ತುಸು ದೊಡ್ಡವಾಗಿದ್ದು, ಜೆನಿಲಿಯಾ ಅವರು ಮತ್ತೆ ನಟನೆಗೆ ಮರಳುವ ಬಗ್ಗೆ ಯೋಚಿಸುತ್ತಿದ್ದಾರೆ.

  Recommended Video

  ರಸ್ತೆ ವಿಚಾರಕ್ಕೆ ಗ್ರಾಮಸ್ಥರೊಡನೆ ಕಚ್ಚಾಡಿಕೊಂಡ ಯಶ್ ತಂದೆ-ತಾಯಿ | Filmibeat Kannada

  ಮಹಿಳಾ ಪ್ರಧಾನ ಪಾತ್ರವಿರುವ ಸಿನಿಮಾ, ವೆಬ್ ಸರಣಿಗಳಲ್ಲಿ ನಟಿಸಲು ಆಸಕ್ತಿ ಹೊಂದಿರುವ ಜೆನಿಲಿಯಾ ಅಂಥಹಾ ಸೂಕ್ತ ಕತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಚಿರಂಜೀವಿ ನಟನೆಯ 'ಲೂಸಿಫರ್' ಸಿನಿಮಾದ ತೆಲುಗು ರೀಮೇಕ್‌ನಲ್ಲಿ ಚಿರಂಜೀವಿ ಸಹೋದರಿ ಪಾತ್ರಕ್ಕೆ ಜೆನಿಲಿಯಾ ಅವರನ್ನು ಕೇಳಲಾಗಿತ್ತು ಆದರೆ ಅವರು ಒಲ್ಲೆ ಎಂದಿದ್ದಾರೆ.

  English summary
  Actress Genelia D'Souza fell while learning skating for her children sake and broke her hand.
  Tuesday, March 9, 2021, 18:44
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X