For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಪಾಸಿಟಿವ್ ಸಮಯದಲ್ಲಿ ಜೆನಿಲಿಯಾಗೆ ಜ್ಞಾನೋದಯ!

  |

  ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಪ್ರತಿಭಾವಂತ ನಟಿ ಜೆನಿಲಿಯಾಗೆ ಮೂರು ವಾರದ ಹಿಂದೆ ಕೊರೊನಾ ಪಾಸಿಟಿವ್ ಆಗಿತ್ತಂತೆ.

  Drug Mafia 15 ಜನ ಹೀರೋ, ಹೀರೋಯಿನ್ ದಾಖಲೆಯನ್ನು ಸಾಕ್ಷಿ ಸಮೇತ ಪೋಲೀಸರ ಕೈಗೆ ಕೊಟ್ಟ ಇ,ಲಂಕೇಶ್ |

  ಈ ಬಗ್ಗೆ ಅವರೇ ಇನ್‌ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದಾರೆ. ಮೂರು ವಾರದ ಹಿಂದೆ ಕೊರೊನಾ ಪಾಸಿಟಿವ್ ವರದಿ ಬಂದಿತ್ತು. ನನಗೆ ರೋಗ ಲಕ್ಷಣಗಳೇನೂ ಇರಲಿಲ್ಲ. ಆದರೆ ನಾನು ಮನೆಯಲ್ಲಿಯೇ ಐಸೋಲೇಶನ್‌ಗೆ ಒಳಗಾಗಿದ್ದೆ ಎಂದಿದ್ದಾರೆ ಜೆನಿಲಿಯಾ.

  ನಂತರ ನಿನ್ನೆ (ಆಗಸ್ಟ್ 30) ಕ್ಕೆ ಕೊರೊನಾ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು, ಸಂತಸದ ವಿಷಯವನ್ನು ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೆ ಅಲ್ಲದೆ ಕೊರೊನಾ ಐಸೋಲೇಶನ್ ಸಮಯದಲ್ಲಿ ತಮಗಾದ ಜ್ಞಾನೋದಯದ ಬಗ್ಗೆಯೂ ಬರೆದುಕೊಂಡಿದ್ದಾರೆ ಜೆನಿಲಿಯಾ.

  ಈ ಇಪ್ಪತ್ತೊಂದು ದಿನಗಳು ಅತ್ಯಂತ ಕೆಟ್ಟದಾಗಿದ್ದವು: ಜೆನಿಲಿಯಾ

  ಈ ಇಪ್ಪತ್ತೊಂದು ದಿನಗಳು ಅತ್ಯಂತ ಕೆಟ್ಟದಾಗಿದ್ದವು: ಜೆನಿಲಿಯಾ

  ಕೊರೊನಾ ಐಸೋಲೇಶನ್‌ನಲ್ಲಿ ಒಂಟಿಯಾಗಿ ಕಳೆದ ಈ 21 ದಿನಗಳು ನನ್ನ ಪಾಲಿಗೆ ಅತ್ಯಂತ ಕೆಟ್ಟ ದಿನಗಳಾಗಿದ್ದವು. ಯಾವ ಖಾಯಿಲೆಗಳಿಗಿಂತಲೂ ಒಂಟಿತನ ಎನ್ನುವುದು ಅತಿ ದೊಡ್ಡ ಖಾಯಿಲೆ ಎಂದು ಜೆನಿಲಿಯಾ ಹೇಳಿದ್ದಾರೆ.

  'ಯಾವುವೂ ಒಂಟಿತನವನ್ನು ಹೋಗಲಾಡಿಸಲಾರವು'

  'ಯಾವುವೂ ಒಂಟಿತನವನ್ನು ಹೋಗಲಾಡಿಸಲಾರವು'

  ಎಷ್ಟು ವಿಡಿಯೋ ಕಾಲ್‌ಗಳು, ಸಾಮಾಜಿಕ ಜಾಲತಾಣಗಳು, ಆನ್‌ಲೈನ್ ಸಿನಿಮಾಗಳು, ಗೇಮ್‌ಗಳು ಸಹ ನನ್ನವರು, ತನ್ನವರು ನೀಡುವ ಆನಂದವನ್ನು ನೀಡಲಾರರು. ಒಂಟಿತನ ಹೋಗಲಾಡಿಸಲು ಡಿಜಿಟಲ್ ತಂತ್ರಜ್ಞಾನದ ಕೈಲಿ ಸಾಧ್ಯವಿಲ್ಲ ಎಂದಿದ್ದಾರೆ ಜೆನಿಲಿಯಾ.

  ಪ್ರೀತಿ ಪಾತ್ರರ ಜೊತೆಗೆ ಇದ್ದೇನೆ: ಜೆನಿಲಿಯಾ

  ಪ್ರೀತಿ ಪಾತ್ರರ ಜೊತೆಗೆ ಇದ್ದೇನೆ: ಜೆನಿಲಿಯಾ

  ಈಗ ನಾನು ಮತ್ತೆ ನನ್ನ ಪ್ರೀತಿಪಾತ್ರರ ಜೊತೆ ಸೇರಿದ್ದೇನೆ. ನನ್ನನ್ನು ಪ್ರೀತಿಸುವವರ, ನಾನು ಪ್ರೀತಿಸುವವರಿಗೆ ಸಮೀಪದಲ್ಲಿದ್ದೇನೆ. ನೀವು ಸಹ ಕೊರೊನಾ ದಿಂದ ದೂರವಿರಿ, ಒಂಟಿತನದಿಂದ ದೂರವಿರಿ ಎಂದು ಸಲಹೆ ನೀಡಿದ್ದಾರೆ ಜೆನಿಲಿಯಾ.

  ಅಮಿತಾಬ್ ಬಚ್ಚನ್ ಕುಟುಂಬಕ್ಕೆ ಕೊರೊನಾ

  ಅಮಿತಾಬ್ ಬಚ್ಚನ್ ಕುಟುಂಬಕ್ಕೆ ಕೊರೊನಾ

  ಬಾಲಿವುಡ್‌ನಲ್ಲಿ ಹಲವರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ, ಆರಾಧ್ಯಾ ಅವರಿಗೂ ಕೊರೊನಾ ಪಾಸಿಟಿವ್ ಆಗಿತ್ತು, ಹಲವಾರು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ನಂತರ ಇವರೆಲ್ಲಾ ಡಿಸ್‌ಚಾರ್ಜ್ ಆದರು.

  English summary
  actress, Ritesh Deshmukh's wife Genelia D'Souza recovered from coronavirus. She said loneliness is real evil.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X