For Quick Alerts
  ALLOW NOTIFICATIONS  
  For Daily Alerts

  ಕಂಗನಾ ರಣೌತ್ ಜೊತೆಗೆ ಕೆಲಸ ಮಾಡುವ ಕಷ್ಟ ಬಿಚ್ಚಿಟ್ಟ ನಿರ್ದೇಶಕ

  |

  ಕಂಗನಾ ರಣೌತ್ ಈಗ ಬಾಲಿವುಡ್‌ನ ಬ್ಯಾಡ್ ಗರ್ಲ್. ಬಾಲಿವುಡ್ ನ ತನ್ನ ಸಹೋದ್ಯೋಗಿಗಳ ಮೇಲೆಯೇ ತಿರುಗಿ ಬಿದ್ದಿರುವ ಕಂಗನಾ, ಕೆಲವು ಕೀಳಾದ ಹೇಳಿಕೆಗಳನ್ನು ಸಹೋದ್ಯೋಗಿಗಳ ವಿರುದ್ಧ ನೀಡಿದ್ದಾರೆ.

  ಇತರರನ್ನು ಟೀಕಿಸುತ್ತಲೇ ಕಾಲ ಕಳೆಯುತ್ತಿರುವ ಕಂಗನಾ, ಸ್ವತಃ ಅಷ್ಟೇನೂ ಗುಣವಂತ ವ್ಯಕ್ತಿಯಲ್ಲ ಎಂಬುದು ಕಂಗನಾ ರನ್ನು ಹತ್ತಿರದಿಂದ ಕಂಡವರು ನೀಡಿರುವ ಹೇಳಿಕೆಗಳಿಂದ ಗೊತ್ತಾಗುತ್ತಿದೆ.

  ನಟಿ ಕಂಗನಾ ರಣೌತ್ ಜೊತೆಗೆ ಸಿನಿಮಾದಲ್ಲಿ ಕೆಲಸ ಮಾಡುವುದು ಎಷ್ಟು ಕಷ್ಟದ ಕೆಲಸ ಎಂಬುದನ್ನು ಕಂಗನಾ ಜೊತೆಗೆ ಈ ಹಿಂದೆ ಕೆಲಸ ಮಾಡಿರುವ ನಿರ್ದೇಶಕರೊಬ್ಬರು ಹೇಳಿಕೊಂಡಿದ್ದಾರೆ. ಸೆಟ್‌ನಲ್ಲಿ ಕಂಗನಾ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದರಂತೆ!

  ಕಂಗನಾ ವಿರುದ್ಧ ಮತ್ತೊಂದು ದೇಶದ್ರೋಹ ಪ್ರಕರಣ ದಾಖಲು: ಜೈಲಿಗೆ ಹೋಗಲು ಸಿದ್ಧ ಎಂದ ನಟಿ

  ಕಂಗನಾ ರಣೌತ್ ಜೊತೆಗೆ 'ಸಿಮ್ರನ್' ಸಿನಿಮಾದಲ್ಲಿ ಕೆಲಸ ಮಾಡಿದ ಸಿನಿಮಾ ನಿರ್ದೇಶಕ ಹನ್ಸಲ್ ಮೆಹ್ತಾ, ಚಿತ್ರೀಕರಣ ಸೆಟ್‌ನಲ್ಲಿ ಕಂಗನಾ ಅವಾಂತರಗಳ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

  ಸಿಮ್ರನ್ ಸಿನಿಮಾವನ್ನು ನಿರ್ದೇಶಿಸಲೇಬಾರದಿತ್ತು: ಹನ್ಸಲ್

  ಸಿಮ್ರನ್ ಸಿನಿಮಾವನ್ನು ನಿರ್ದೇಶಿಸಲೇಬಾರದಿತ್ತು: ಹನ್ಸಲ್

  ಸಿಮ್ರನ್ ಸಿನಿಮಾವನ್ನು ನಾನು ನಿರ್ದೇಶಿಸಲೇಬಾರದಿತ್ತು ಎಂದಿರುವ ಹನ್ಸಲ್ ಮೆಹ್ತಾ, ಆ ಸಿನಿಮಾದ ಚಿತ್ರೀಕರಣ ಅವಧಿ ನನ್ನ ವೃತ್ತಿ ಜೀವನದ ನೋವಿನ ಸಮಯ ಎಂದಿದ್ದಾರೆ ಹನ್ಸಲ್ ಮೆಹ್ತಾ. ನಾನು ಆ ಸಿನಿಮಾ ನಿರ್ದೇಶಿಸದೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದಿದ್ದಾರೆ ಹನ್ಸಲ್ ಮೆಹ್ತಾ.

  ನಟ-ನಟಿಯರನ್ನು ನಿರ್ದೇಶನ ಮಾಡುತ್ತಿದ್ದರು: ಹನ್ಸಲ್

  ನಟ-ನಟಿಯರನ್ನು ನಿರ್ದೇಶನ ಮಾಡುತ್ತಿದ್ದರು: ಹನ್ಸಲ್

  ಸೆಟ್‌ನಲ್ಲಿ ನಟಿ ಕಂಗನಾ ರಣೌತ್ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದರು. ಇತರ ನಟ-ನಟಿಯರನ್ನು ನಿರ್ದೇಶನ ಮಾಡಲು ಇಳಿದುಬಿಡುತ್ತಿದ್ದರು. ಸಿನಿಮಾದ ನಿರ್ದೇಶಕನಾದ ನನಗೆ ಅದು ಸರಿ ಹೋಗುತ್ತಿರಲಿಲ್ಲ ಎಂದಿದ್ದಾರೆ ಹನ್ಸಲ್ ಮೆಹ್ತಾ.

  ಬಾಲಿವುಡ್ ನಟಿ ಕಂಗನಾ ರಣಾವತ್ ಗೆ ಅತ್ಯಾಚಾರ ಬೆದರಿಕೆ

  ಮಾನಸಿಕ ಆರೋಗ್ಯ ಹದಗೆಟ್ಟಿತ್ತು: ಹನ್ಸಲ್

  ಮಾನಸಿಕ ಆರೋಗ್ಯ ಹದಗೆಟ್ಟಿತ್ತು: ಹನ್ಸಲ್

  ಆ ಸಿನಿಮಾ ಬಿಡುಗಡೆ ಆದ ನಂತರ ನನಗೆ ಆರ್ಥಿಕ ಸಂಕಷ್ಟ ಎದುರಾಯಿತು, ಮಾನಸಿಕ ಆರೋಗ್ಯವೂ ಸಹ ಹದಗೆಟ್ಟಿತು, ನಾನು ಮನೋವೈದ್ಯರಿಂದ ಚಿಕಿತ್ಸೆಗೆ ಒಳಪಡಬೇಕಾದ ಪರಿಸ್ಥಿತಿ ಎದುರಾಯಿತು ಎಂದಿದ್ದಾರೆ ಹನ್ಸಲ್.

  ಕತ್ತಿ ಹಿಡಿದು ಕುದುರೆ ಏರಿದ ಶ್ರೀಲೀಲಾ ಲುಕ್ ನೋಡಿ ಎಲ್ಲರೂ ಶಾಕ್ | SreeLeela Photoshoot | Filmibeat Kannada
  ಆಕೆಯೊಂದಿಗೆ ಭಿನ್ನಾಭಿಪ್ರಾಯ ಇಲ್ಲ: ಹನ್ಸಲ್

  ಆಕೆಯೊಂದಿಗೆ ಭಿನ್ನಾಭಿಪ್ರಾಯ ಇಲ್ಲ: ಹನ್ಸಲ್

  ಸೆಟ್‌ನಲ್ಲಿ ವರ್ತನೆಯನ್ನು ಪಕ್ಕಕ್ಕೆ ಇಟ್ಟರೆ, ಕಂಗನಾ ಒಬ್ಬ ಅದ್ಭುತ ನಟಿ, ನನಗೆ ಆಕೆಯೊಂದಿಗೆ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ. ಸೆಟ್‌ನ ಹೊರಗೆ ನಾವು ಚೆನ್ನಾಗಿಯೇ ಇದ್ದೆವು. ನಾಳೆ ಮತ್ತೆ ಆಕೆಯೊಂದಿಗೆ ಕೆಲಸ ಮಾಡುವ ಗಳಿಗೆ ಕೂಡಿಬಂದರೆ ನಾನು ಸ್ವೀಕರಿಸುತ್ತೇನೆ ಎಂದಿದ್ದಾರೆ ಹನ್ಸಲ್ ಮೆಹ್ತಾ.

  ಕೋರ್ಟ್ ಆದೇಶದಂತೆ ಕಂಗನಾ ವಿರುದ್ಧ FIR ದಾಖಲಿಸಿದ ಕ್ಯಾತಸಂದ್ರ ಪೊಲೀಸ್

  English summary
  Director Hansal Mehta said working with Kangana Ranaut in Simran movie is painful time.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X