For Quick Alerts
  ALLOW NOTIFICATIONS  
  For Daily Alerts

  ಶಿಲ್ಪಾ ಶೆಟ್ಟಿಗೆ ನಿರ್ದೇಶಕ ಹನ್ಸಲ್ ಮೆಹ್ತಾ ಬೆಂಬಲ

  |

  ಕಳೆದ ಹತ್ತು ದಿನಗಳಿಂದಲೂ ರಾಜ್ ಕುಂದ್ರಾ ಪ್ರಕರಣ ಬಹುವಾಗಿ ಸದ್ದು ಮಾಡುತ್ತಿದೆ. ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಜುಲೈ 19ರಂದು ರಾಜ್ ಕುಂದ್ರಾ ಬಂಧನವಾಗಿದ್ದು, ಅದರ ಸುತ್ತಾ ಹಲವಾರು ಬೆಳವಣಿಗೆಗಳು ಈವರೆಗೆ ನಡೆದಿವೆ.

  ರಾಜ್ ಕುಂದ್ರಾ ಪತ್ನಿ ನಟಿ ಶಿಲ್ಪಾ ಶೆಟ್ಟಿ ಮೇಲೆ ಸಹ ಅನುಮಾನಗಳನ್ನು ಮುಂಬೈ ಪೊಲೀಸರು ವ್ಯಕ್ತಪಡಿಸಿದ್ದು, ಶಿಲ್ಪಾ ಶೆಟ್ಟಿಗೆ ಕ್ಲೀನ್ ಚಿಟ್ ನೀಡಿಲ್ಲ ಎಂದು ಹೇಳಿದ್ದಾರೆ. ಇದರ ಬೆನ್ನೆಲ್ಲ ಕೆಲವು ಸುದ್ದಿ ಮಾಧ್ಯಮಗಳು ಶಿಲ್ಪಾ ಶೆಟ್ಟಿ ವಿರುದ್ಧ ಸುದ್ದಿಗಳನ್ನು ಬಿತ್ತರಿಸಿದ್ದರು. ಇದರ ವಿರುದ್ಧವಾಗಿ ಶಿಲ್ಪಾ ಶೆಟ್ಟಿ ನ್ಯಾಯಾಲಯದ ಮೆಟ್ಟಿಲನ್ನು ಸಹ ಏರಿದ್ದಾರೆ.

  ರಾಜ್ ಕುಂದ್ರಾ ಪ್ರಕರಣವನ್ನು ಮುಖ್ಯವಾಗಿರಿಸಿಕೊಂಡು ಶಿಲ್ಪಾ ಶೆಟ್ಟಿ ವಿರುದ್ಧ ಟೀಕೆಗಳನ್ನು, ಮೂದಲಿಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಹುವಾಗಿ ಮಾಡಲಾಗುತ್ತಿದೆ. ಆದರೆ ಇದೀಗ ನಿರ್ದೇಶಕ ಹನ್ಸಲ್ ಮೆಹ್ತಾರಿಂದ ಶಿಲ್ಪಾ ಶೆಟ್ಟಿಗೆ ನೈತಿಕ ಬೆಂಬಲ ದೊರೆತಿದೆ.

  ಶಿಲ್ಪಾ ಶೆಟ್ಟಿ ಕುರಿತು ಸರಣಿ ಟ್ವೀಟ್ ಮಾಡಿರುವ ಹನ್ಸಲ್ ಮೆಹ್ತಾ, ''ಶಿಲ್ಪಾ ಶೆಟ್ಟಿ ಅವರ ಖಾಸಗಿತನದ ಹಕ್ಕಿಗೆ ಗೌರವ ಕೊಡಿ. ಅವರಿಗೆ ಗೌರವ ನೀಡಿ. ಸಾರ್ವಜನಿಕ ಜೀವನದಲ್ಲಿರುವವರು ಯಾವುದೇ ಆರೋಪಗಳಿಗೆ ಗುರಿ ಆದಾಗ ತೀರ್ಪು ಬರುವ ಮುನ್ನವೇ ಅವರನ್ನು ತಪ್ಪಿತಸ್ಥರು ಎಂದು ತೋರಿಸಲಾಗುತ್ತದೆ. ನಿಮಗೆ ಶಿಲ್ಪಾ ಶೆಟ್ಟಿ ಪರ ನಿಲ್ಲಲು ಸಾಧ್ಯವಿಲ್ಲವಾದರೆ ಆಕೆಯ ಪಾಡಿಗೆ ಆಕೆಯನ್ನು ಬಿಡಿ'' ಎಂದಿದ್ದಾರೆ.

  ಒಟ್ಟಿಗೆ ಪಾರ್ಟಿ ಮಾಡಿದವರು ಈಗ ಮೌನವಾಗಿದ್ದಾರೆ: ಹನ್ಸಲ್

  ಒಟ್ಟಿಗೆ ಪಾರ್ಟಿ ಮಾಡಿದವರು ಈಗ ಮೌನವಾಗಿದ್ದಾರೆ: ಹನ್ಸಲ್

  ಶಿಲ್ಪಾ ಶೆಟ್ಟಿಗೆ ಬೆಂಬಲ ನೀಡದ ಉದ್ಯಮದ ಗೆಳೆಯರ ಬಗ್ಗೆಯೂ ಟ್ವೀಟ್ ಮಾಡಿರುವ ಹನ್ಸಲ್ ಮೆಹ್ತಾ, ''ಒಳ್ಳೆಯ ಸಮಯದಲ್ಲಿ ಎಲ್ಲರೂ ಒಟ್ಟಿಗೆ ಸೇರಿ ಪಾರ್ಟಿ ಮಾಡುತ್ತಾರೆ. ಆದರೆ ಕಷ್ಟದ ಸಮಯದಲ್ಲಿ ಭಯಂಕರ ಮೌನ ತಾಳುತ್ತಾರೆ. ಅಂತಿಮ ಸತ್ಯ ಏನೇ ಆಗಿರಲಿ ಆದರೆ ಹಾನಿ ಆಗಬಿಟ್ಟಿದೆ'' ಎಂದಿದ್ದಾರೆ ಹನ್ಸಲ್.

  ಸುದ್ದಿಯ ಹೆಸರಲ್ಲಿ ಕೊಳಕು ಗಾಸಿಪ್

  ಸುದ್ದಿಯ ಹೆಸರಲ್ಲಿ ಕೊಳಕು ಗಾಸಿಪ್

  ''ಆರೋಪಗಳು ಸಿನಿಮಾ ಸೆಲೆಬ್ರಿಟಿಯ ವಿರುದ್ಧವಿದ್ದರೆ ಅವರ ಖಾಸಗಿತನವನ್ನು ಆಕ್ರಮಿಸಲು ಮಾಧ್ಯಮಗಳು ನುಗ್ಗಿ ಬರುತ್ತವೆ. ಕೊಳಕು ಗಾಸಿಪ್‌ಗಳನ್ನು ಸುದ್ದಿಯ ಹೆಸರಲ್ಲಿ ಬಿತ್ತರಿಸುತ್ತವೆ. ಸೆಲೆಬ್ರಿಟಿಗಳ ಚಾರಿತ್ರ್ಯ ವಧೆ ಮಾಡುತ್ತವೆ. ಮೌನವಾಗಿರುವುದರ ಪ್ರತಿಫಲ ಇದು'' ಎಂದು ಸೆಲೆಬ್ರಿಟಿಗಳು ಮೌನವಾಗಿರುವ ಬಗ್ಗೆ ಹನ್ಸಲ್ ಮೆಹ್ತಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

  ಟ್ವೀಟ್‌ಗೆ ಕೆಲವರ ಆಕ್ಷೇಪ

  ಟ್ವೀಟ್‌ಗೆ ಕೆಲವರ ಆಕ್ಷೇಪ

  ಹನ್ಸಲ್ ಮೆಹ್ತಾ ಟ್ವೀಟ್‌ಗೆ ಹಲವು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೆಲವರು ಕೆಟ್ಟದಾಗಿ ಟ್ರೋಲ್ ಸಹ ಮಾಡಿದ್ದಾರೆ. ''ರಾಜ್ ಕುಂದ್ರಾ ತಮ್ಮ ಅಶ್ಲೀಲ ವಿಡಿಯೋಗಳಲ್ಲಿ ನಿಮ್ಮ ಮಗಳನ್ನು ಹಾಕಿಕೊಂಡಿದ್ದಿದ್ದರೆ ನೀವು ಹೀಗೆ ಮಾತನಾಡುತ್ತಿದ್ದಿರಾ'' ಎಂದು ಪ್ರಶ್ನೆ ಮಾಡಿದ್ದಾರೆ. ''ರಾಜ್ ಕುಂದ್ರಾ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಪಾತ್ರವಿದೆ'' ಎಂದು ಸಹ ಕೆಲವರು ವಾದಿಸಿದ್ದಾರೆ.

  'ಸ್ಕ್ಯಾಮ್-1992' ನಿರ್ದೇಶಕ ಹನ್ಸಲ್

  'ಸ್ಕ್ಯಾಮ್-1992' ನಿರ್ದೇಶಕ ಹನ್ಸಲ್

  ಹನ್ಸಲ್ ಮೆಹ್ತಾ ಬಾಲಿವುಡ್‌ನ ಪ್ರತಿಭಾವಂತ ನಿರ್ದೇಶಕ, 1993 ರಿಂದಲೂ ಮನೊರಂಜನಾ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಹನ್ಸಲ್ ಮೆಹ್ತಾ ಹಲವು ಒಳ್ಳೆಯ ಸಿನಿಮಾಗಳನ್ನು ಬಾಲಿವುಡ್‌ಗೆ ನೀಡಿದ್ದಾರೆ. ಇತ್ತೀಚೆಗೆ ಇವರೇ ನಿರ್ದೇಶಿಸಿದ್ದ 'ಸ್ಕ್ಯಾಮ್ 1992' ವೆಬ್ ಸರಣಿ ಸೂಪರ್ ಡೂಪರ್ ಹಿಟ್ ಆಗಿದೆ.

  ಶಿಲ್ಪಾ ಶೆಟ್ಟಿ ವಿರುದ್ಧ ಸುದ್ದಿ ಬಿತ್ತರ

  ಶಿಲ್ಪಾ ಶೆಟ್ಟಿ ವಿರುದ್ಧ ಸುದ್ದಿ ಬಿತ್ತರ

  ರಾಜ್ ಕುಂದ್ರಾ ಪ್ರಕರಣಕ್ಕೆ ಮರಳುವುದಾದರೆ, ಅಶ್ಲೀಲ ವಿಡಿಯೋಗಳ ನಿರ್ಮಾಣ, ಪ್ರಸಾರ ಮಾಡಿದ ಆರೋಪದಲ್ಲಿ ಜುಲೈ 19 ರಂದು ರಾಜ್ ಕುಂದ್ರಾ ಅನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ರಾಜ್ ಕುಂದ್ರಾ ವಿರುದ್ಧ ಶೆರ್ಲಿನ್ ಚೋಪ್ರಾ ಹಾಗೂ ಪೂನಂ ಪಾಂಡೆ ಹೇಳಿಕೆಗಳನ್ನು ನೀಡಿದ್ದಾರೆ. ರಾಜ್ ಪರವಾಗಿ ಗೆಹನಾ ವಸಿಷ್ಠ ಹೇಳಿಕೆ ನೀಡಿದ್ದಾರೆ. ಶಿಲ್ಪಾ ಶೆಟ್ಟಿಗೂ ಪ್ರಕರಣಕ್ಕೂ ಸಂಬಂಧವಿಲ್ಲ ಎನ್ನಲಾಗಿತ್ತಾದರೂ 'ಶಿಲ್ಪಾ ಶೆಟ್ಟಿಗೆ ನಾವಿನ್ನೂ ಕ್ಲೀನ್ ಚಿಟ್ ನೀಡಿಲ್ಲ' ಎಂದು ಮುಂಬೈ ಪೊಲೀಸರು ಹೇಳಿರುವುದು ಅನುಮಾನಕ್ಕೆ ಕಾರಣವಾಗಿದೆ. ಈ ನಡುವೆ ಕೆಲವು ಮಾಧ್ಯಮಗಳು ಶಿಲ್ಪಾ ಶೆಟ್ಟಿ ವಿರುದ್ಧ ಮಾನಹಾನಿಕರ ಸುದ್ದಿಗಳನ್ನು ಬಿತ್ತರಿಸಿದ್ದು ಇದರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು ಶಿಲ್ಪಾ ಶೆಟ್ಟಿ.

  English summary
  Director Hansal Mehta series of tweet in support of actress Shilpa Shetty. Mehta slams celebrities who were silent in Shilpa Shetty's case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X