For Quick Alerts
  ALLOW NOTIFICATIONS  
  For Daily Alerts

  ಹನ್ಸಿಕಾ ಮೋಟ್ವಾನಿ ಮದುವೆ: ನಡೆದಿದ್ದೆಲ್ಲಿ? ಏನು ವಿಶೇಷತೆ?

  |

  ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಸಿನಿಮಾಗಳು ಹಾಗೂ ಬಾಲಿವುಡ್‌ನಲ್ಲಿಯೂ ನಟಿಸಿರುವ ಜನಪ್ರಿಯ ನಟಿ ಹನ್ಸಿಕಾ ಮೊಟ್ವಾನಿ ಡಿಸೆಂಬರ್ 04 ರಂದು ಅದ್ಧೂರಿಯಾಗಿ ವಿವಾಹವಾಗಿದ್ದಾರೆ.

  31 ವರ್ಷ ವಯಸ್ಸಿನ ಹನ್ಸಿಕಾ ಮೊಟ್ವಾನಿ ಉದ್ಯಮಿ ಸೋಹೆಲ್ ಕುತಾರಿಯಾ ಅವರೊಟ್ಟಿಗೆ ಸಪ್ತಪದಿ ತುಳಿದಿದ್ದು, ಆಪ್ತೇಷ್ಟರು, ಚಿತ್ರೋದ್ಯಮದ ಕೆಲವು ಗಣ್ಯರ ಸಮ್ಮುಖದಲ್ಲಿ ರಾಜಸ್ಥಾನದಲ್ಲಿ ವಿವಾಹವಾಗಿದ್ದಾರೆ.

  ಹನ್ಸಿಕಾ- ಸೊಹೈಲ್ ಮದುವೆ ಸಂಭ್ರಮ: ಸಂಗೀತ್, ಮೆಹಂದಿ ಪಾರ್ಟಿ ಜೋರು ಹನ್ಸಿಕಾ- ಸೊಹೈಲ್ ಮದುವೆ ಸಂಭ್ರಮ: ಸಂಗೀತ್, ಮೆಹಂದಿ ಪಾರ್ಟಿ ಜೋರು

  ರಾಜಸ್ಥಾನದ, ಜೈಪುರದಲ್ಲಿನ ಮುಂದೋಟಾ ಫೋರ್ಟ್ ಹೆಸರಿನ ಐಶಾರಾಮಿ ಹೋಟೆಲ್‌ನಲ್ಲಿ ವಿವಾಹವಾಗಿದ್ದಾರೆ. ಡಿಸೆಂಬರ್ 02 ರಿಂದಲೂ ಹೋಟೆಲ್ ಅನ್ನು ವಿವಾಹದ ಕಾರಣಕ್ಕೆ ಹನ್ಸಿಕಾ ಹಾಗೂ ಸೋಹೆಲ್ ಬುಕ್ ಮಾಡಿಕೊಂಡಿದ್ದರು.

  ಕೆಂಪು ಬಣ್ಣದ ಡಿಸೈನರ್ ಲೆಹೆಂಗಾ ಹಾಗೂ ಖಾಸಗಿಯಾಗಿ ವಿನ್ಯಾಸ ಮಾಡಿದ ಹಲವು ಆಭರಣಗಳನ್ನು ತೊಟ್ಟು ತಮ್ಮ ವಿವಾಹದಲ್ಲಿ ಹನ್ಸಿಕಾ ಮೊಟ್ವಾನಿ ಕಂಗೊಳಿಸಿದರು. ಹನ್ಸಿಕಾರ ಲೆಹಂಗಾಗೆ ಸುಮಾರು 8 ಲಕ್ಷ ತೆತ್ತಿದ್ದಾರೆ ಎನ್ನಲಾಗುತ್ತಿದೆ. ಇನ್ನು ಡಿಸೈನರ್ ಆಭರಣಗಳಿಗೆ ಸುಮಾರು 40 ಲಕ್ಷ ಖರ್ಚು ಮಾಡಿದ್ದಾರಂತೆ.

  ಮುಹೂರ್ತಕ್ಕೂ ಮುನ್ನ, ಮೆಹಂದಿ ನೈಟ್ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಾಗೂ ಮದುವೆ ಸಂಬಂಧಿತ ಪಾರ್ಟಿಗಳನ್ನು ಮಾಡಲಾಗಿದೆ. ಮದುವೆಯ ದಿನವೂ ಸಹ ಆಫ್ಟರ್ ಪಾರ್ಟಿಯನ್ನು ಸಹ ಈ ಜೋಡಿ ಆಯೋಜಿಸಿತ್ತಂತೆ.

  ಹನ್ಸಿಕಾ ಹಾಗೂ ಸೋಹೆಲ್ ಕುತಾರಿಯಾ ಅವರ ಎಂಟ್ರಿಗಳಿಗಾಗಿಯೇ ವಿಶೇಷ ಸೆಟ್‌ಅಪ್‌ಗಳನ್ನು ಹೋಟೆಲ್‌ನಲ್ಲಿ ಹಾಕಲಾಗಿತ್ತು, ಅಲ್ಲದೆ ಮದುವೆಗಾಗಿ ಭಿನ್ನವಾದ ಸೆಟ್‌ ಅನ್ನು ಸಹ ಹಾಕಲಾಗಿತ್ತು. ಮದುವೆಯ ಬಳಿಕ ಆಫ್ಟರ್‌ ಪಾರ್ಟಿಯಲ್ಲಿ ಹೊಸ ಮದುವೆ ವಧು-ವರ ಡ್ಯಾನ್ಸ್ ಮಾಡಿ ನೆರೆದಿದ್ದವರನ್ನು ರಂಜಿಸಿದ್ದಾರೆ.

  ಹೃತಿಕ್ ರೋಷನ್ ನಟನೆಯ 'ಕೋಯಿ ಮಿಲ್ ಗಯಾ' ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸಿದ್ದ ಹನ್ಸಿಕಾ ಮೊಟ್ವಾನಿ, ಆ ನಂತರ ಹಲವಾರು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ಜೊತೆಗೆ 'ಬಿಂದಾಸ್' ಸಿನಿಮಾದಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ಅಲ್ಲು ಅರ್ಜುನ್, ಜೂ ಎನ್‌ಟಿಆರ್, ಪ್ರಭಾಸ್, ರಾಮ್ ಪೋತಿನೇನಿ, ಸಿದ್ಧಾರ್ಥ್, ನಿತಿನ್, ಬಾಲಕೃಷ್ಣ ಇನ್ನೂ ಹಲವರೊಟ್ಟಿಗೆ ನಟಿಸಿದ್ದಾರೆ. ತಮಿಳು ಹಾಗೂ ಮಲಯಾಳಂನಲ್ಲಿಯೂ ಹನ್ಸಿಕಾ ನಟಿಸಿದ್ದಾರೆ.

  English summary
  Actress Hansika Motwani and Sohael Kathuriya royal wedding in Jaipur's Mundota Fort. Sohael Kathuriya is a businessman.
  Monday, December 5, 2022, 15:00
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X