For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಲ್ಲಿ ಶೂಟರ್ ಅಭಿನವ್ ಬಿಂದ್ರಾ ಬಯೋಪಿಕ್, ನಾಯಕ ಯಾರು?

  By Bharath Kumar
  |

  ಬಾಲಿವುಡ್ ನಲ್ಲಿ ಕ್ರೀಡಾ ಆಧರಿತ ಚಿತ್ರಗಳು ಸಖತ್ ಸೌಂಡ್ ಮಾಡ್ತಾವೆ. ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, 'ಎಂ.ಎಸ್ ಧೋನಿ', ಬಾಕ್ಸರ್ 'ಮೇರಿಕಾಮ್' ಹೀಗೆ ಅನೇಕ ಕ್ರೀಡಾಪಟುಗಳ ಜೀವನಾಧರಿತ ಚಿತ್ರ ಬಾಲಿವುಡ್ ತೆರೆ ಮೇಲೆ ಬಂದು ಯಶಸ್ಸು ಕಂಡಿದೆ. ಈಗ ಮತ್ತೊಬ್ಬ ಕ್ರೀಡಾಪಟುವಿನ ಜೀವನ ಸಿನಿಮಾವಾಗ್ತಿದೆ.

  ಹೌದು, 20೦8ರ ಬೀಜಿಂಗ್ ಒಲಂಪಿಕ್ ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದು ಕೊಟ್ಟ ಶೂಟರ್ ಅಭಿನವ್ ಬಿಂದ್ರಾ ಅವರ ಬಯೋಪಿಕ್ ಬೆಳ್ಳಿತೆರೆಯ ಲೆಮೇ ಮೂಡಿ ಬರುತ್ತಿದೆ. ರೀಲ್ ಮೇಲೆ ಅಭಿನವ್ ಬಿಂದ್ರಾ ಅವರ ಪಾತ್ರದಲ್ಲಿ ಬಾಲಿವುಡ್ ಯಂಗ್ ಹೀರೋ ಹರ್ಷವರ್ಧನ್ ಕಪೂರ್ ಕಾಣಿಸಿಕೊಳ್ಳುತ್ತಿದ್ದಾರೆ.

  ಅಂದ್ಹಾಗೆ, ಬಾಲಿವುಡ್ ನಟ ಅನಿಲ್ ಕಪೂರ್ ಅವರ ಮಗ ಈ ಹರ್ಷವರ್ಧನ್ ಕಪೂರ್. ನಟಿ ಸೋನಂ ಕಪೂರ್ ಅವರ ಸಹೋದರ.

  ರಾಕೇಶ್ ಓಂಪ್ರಕಾಶ್ ಮೆಹ್ರಾ ನಿರ್ದೇಶನದಲ್ಲಿ ಮೂಡಿಬಂದಿದ್ದ 'ಮಿರ್ಜಿಯ' ಚಿತ್ರದ ಮೂಲಕ ಬಾಲಿವುಡ್ ಗೆ ಲಗ್ಗೆಯಿಟ್ಟಿದ್ದ ಹರ್ಷವರ್ಧನ್, ಈಗ ಅಭಿನವ್ ಬಿಂದ್ರಾ ಬಯೋಪಿಕ್ ಗೆ ಸಿದ್ದವಾಗುತ್ತಿದ್ದಾರೆ. ಸದ್ಯ, ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಕೊಂಡಿರುವ ಚಿತ್ರತಂಡ ಆದಷ್ಟೂ ಬೇಗ ಸಿನಿಮಾ ಶುರು ಮಾಡಲಿದೆ.

  English summary
  Harshvardhan Kapoor, who made his Bollywood debut with Rakeysh Omprakash Mehra’s Mirzya, will star as Olympic gold medalist, Abhinav Bindra in a biopic.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X