Just In
Don't Miss!
- Sports
ಐಪಿಎಲ್: ಫೌಂಡೇಶನ್ ದಿನದ ಸಂಭ್ರಮದಲ್ಲಿ ಆರ್ಸಿಬಿ ಪ್ರಾಂಚೈಸಿ
- News
ಎಫ್ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ; 10 ಲಕ್ಷಕ್ಕೆ ಮಾರಾಟ!
- Finance
ಈ 4 ಕಂಪೆನಿಗಳ ಮಾರುಕಟ್ಟೆ ಮೌಲ್ಯ ರು. 1,15,758.53 ಕೋಟಿ ಹೆಚ್ಚಳ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Automobiles
ವಾರದ ಪ್ರಮುಖ ಆಟೋ ಸುದ್ದಿ: ಆಲ್ಟ್ರೊಜ್ ಐಟರ್ಬೋ ಬಿಡುಗಡೆ, ಜಾರಿಗೆ ಬರಲಿದೆ ಹೊಸ ಆಟೋ ಇನ್ಸುರೆನ್ಸ್..
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅವಳಿ ಮಕ್ಕಳಿಗೆ ಜನ್ಮ ನೀಡಿದ ಹೇಮಾ ಮಾಲಿನಿ ಪುತ್ರಿ ಅಹನಾ
ಹಿರಿಯ ನಟಿ ಹೇಮಾ ಮಾಲಿನಿ ಮತ್ತು ಧರ್ಮೇಂದ್ರ ದಂಪತಿಯ ಕಿರಿಯ ಪುತ್ರಿ ಅಹನಾ ಡಿಯೋಲ್ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು ಜನಿಸಿದ್ದು ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ನವೆಂಬರ್ 26ರಂದು ಇಬ್ಬರು ಮಕ್ಕಳಿಗೆ ಜನ್ಮ ನೀಡಿದ್ದು, ಇನ್ನು ಆಸ್ಪತ್ರೆಯಲ್ಲೆ ಇದ್ದಾರೆ ಎಂದು ಹೇಳಲಾಗುತ್ತಿದೆ.
ಆ ಒಬ್ಬಾಕೆಗಾಗಿ 25 ಸಲ ಆ ಸಿನಿಮಾ ನೋಡಿದ್ದರಂತೆ ವಾಜಪೇಯಿ
ಮುದ್ದಾದ ಮಕ್ಕಳಿಗೆ ಜನ್ಮ ನೀಡಿರುವ ಅಹನಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ನವೆಂಬರ್ 26ರಂದು ಇಬ್ಬರು ಮುದ್ದಾದ ಹೆಣ್ಣುಮಕ್ಕಳು ಆಗಮಿಸಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ ಮತ್ತೊಮ್ಮೆ ಅಜ್ಜಿಯಾಗಿರುವ ನಟಿ ಹೇಮಾ ಮಾಲಿನಿ ಹಾಗೂ ತಾತ ಆಗಿರುವ ಧರ್ಮೇಂದ್ರ ಸಂತೋಷವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ನಟಿ ಹೇಮಾ ಮಾಲಿನಿ, 'ಸಾಂಕ್ರಾಮಿಕ ಕೊರೊನಾ ಸಮಯದಲ್ಲಿ ನನ್ನ ಏಕೈಕ ಪ್ರವಾಸ ಎಂದರೆ ಅಹನಾ ಮನೆಗೆ ಓಡಾಡಿರುವುದು. ಈಗ ಮೂರು ಮಕ್ಕಳನ್ನು ನೋಡಿಕೊಳ್ಳುತ್ತಿದ್ದೇನೆ. ನಾನು ಸಾಧ್ಯವಾದಷ್ಟು ಅವರೊಂದಿಗೆ ಸಮಯ ಕಳೆಯುತ್ತಿದ್ದೇನೆ' ಎಂದು ಹೇಳಿದ್ದಾರೆ.