»   » 'ಐಫಾ ಪ್ರಶಸ್ತಿ 2017' ಪ್ರಕಟ : ಅಲಿಯಾ, ಶಾಹಿದ್ ಕಪೂರ್ ಗೆ ಒಲಿದ ಪ್ರಶಸ್ತಿ

'ಐಫಾ ಪ್ರಶಸ್ತಿ 2017' ಪ್ರಕಟ : ಅಲಿಯಾ, ಶಾಹಿದ್ ಕಪೂರ್ ಗೆ ಒಲಿದ ಪ್ರಶಸ್ತಿ

Posted By:
Subscribe to Filmibeat Kannada

2017ರ ಐಫಾ (International Indian Film Academy Awards) ಪ್ರಶಸ್ತಿ ಪ್ರಕಟವಾಗಿದೆ. ನಿನ್ನೆ (ಜುಲೈ 15) ನ್ಯೂಯರ್ಕ್ ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದೆ. ಬಾಲಿವುಡ್ ನ ದೊಡ್ಡ ದೊಡ್ಡ ಸ್ಟಾರ್ ಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ನಿರೂಪಣೆಯನ್ನು ನಿರ್ದೇಶಕ ಕರಣ್ ಜೋಹರ್ ಮತ್ತು ಸೈಫ್ ಅಲಿ ಖಾನ್ ಮಾಡಿದರು. ಸಖತ್ ಕಲರ್ ಫುಲ್ ಆಗಿದ್ದ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ-ನಟಿಯರು ಸಖತ್ ಆಗಿ ಮಿಂಚಿದ್ದರು.

ಅಂದಹಾಗೆ, '2017ರ ಐಫಾ ಪ್ರಶಸ್ತಿ' ಪಡೆದ ವಿಜೇತರ ಪಟ್ಟಿ ಇಲ್ಲಿದೆ ಈ ಓದಿ...

ಅತ್ಯುತ್ತಮ ಸಿನಿಮಾ

ನೈಜ ಕಥೆ ಆಧಾರಿತ ಸಿನಿಮಾ 'ನೀರ್ಜಾ' ಅತ್ಯುತ್ತಮ ಸಿನಿಮಾವಾಗಿ ಆಯ್ಕೆ ಆಗಿದೆ. ಈ ಸಿನಿಮಾದಲ್ಲಿ ಸೋನಂ ಕಪೂರ್ ನಾಯಕಿಯಾಗಿದ್ದು, ರಾಮ್ ಮಧ್ವಾನಿ ನಿರ್ದೇಶನ ಮಾಡಿದ್ದರು.

ಅತ್ಯುತ್ತಮ ನಿರ್ದೇಶಕ

ನಿರ್ದೇಶಕ ಅನಿರುದ್ಧ್ ರಾಯ್ ಚೌಧರಿ ತಮ್ಮ 'ಪಿಂಕ್' ಸಿನಿಮಾಗಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದಿದ್ದಾರೆ.

ಅತ್ಯುತ್ತಮ ನಟ

'ಉಡ್ತಾ ಪಂಜಾಬ್' ಸಿನಿಮಾದ ನಟನೆಗಾಗಿ ಶಾಹಿದ್ ಕಪೂರ್ ಬೆಸ್ಟ್ ಹೀರೋ ಅಂತ ಕರೆಸಿಕೊಂಡಿದ್ದಾರೆ.

ಅತ್ಯುತ್ತಮ ನಟಿ

ನಟಿ ಅಲಿಯಾ ಭಟ್ ಸಹ 'ಉಡ್ತಾ ಪಂಜಾಬ್' ಚಿತ್ರದ ವಿಭಿನ್ನ ಪಾತ್ರಕ್ಕೆ ಅತ್ಯುತ್ತಮ ನಟಿ ಆಗಿ ಆಯ್ಕೆ ಆಗಿದ್ದಾರೆ.

ಅತ್ಯುತ್ತಮ ಪೋಷಕ ನಟ

'ಧೋನಿ ದಿ ಆನ್ ಟೋಲ್ಡ್ ಸ್ಟೋರಿ' ಚಿತ್ರದ ಅಭಿನಯಕ್ಕೆ ನಟ ಅನುಪಮ್ ಖೇರ್ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಒಲಿದಿದೆ.

ಅತ್ಯುತ್ತಮ ಪೋಷಕ ನಟಿ

ನಟಿ ಶಬನಾ ಅಜ್ಮಿ ತಮ್ಮ 'ನೀರ್ಜಾ' ಚಿತ್ರಕ್ಕೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದಿದ್ದಾರೆ.

ಅತ್ಯುತ್ತಮ ಸಂಗೀತ ನಿರ್ದೇಶಕ

'ಹೇ ದಿಲ್ ಹೈ ಮುಷ್ಕಿಲ್' ಚಿತ್ರದ ಸಂಗೀತಕ್ಕೆ ಪ್ರೀತಮ್ ಅವರಿಗೆ ಬೆಸ್ಟ್ ಮ್ಯೂಸಿಕ್ ಡೈರೆಕ್ಟರ್ ಅವಾರ್ಡ್ ದೊರಕಿದೆ.

'ವುಮನ್ ಆಫ್ ದಿ ಇಯರ್'

ಬಾಲಿವುಡ್ ನಲ್ಲಿ ಮಿಂಚುತ್ತಿರುವ ಸೌತ್ ನಟಿ ತಾಪ್ಸಿ ಪನ್ನು 'ವುಮನ್ ಆಫ್ ದಿ ಇಯರ್' ಪ್ರಶಸ್ತಿಯನ್ನು ಪಡೆದು ಗಮನ ಸೆಳೆದರು.

English summary
List Of The IIFA 2017 Winners

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada