»   » ಕರೀನಾ ಕಪೂರ್ ಸೆಕ್ಸಿ ಸೀರೆ ಮತ್ತು ಕಂಚುಕ ಹರಾಜು

ಕರೀನಾ ಕಪೂರ್ ಸೆಕ್ಸಿ ಸೀರೆ ಮತ್ತು ಕಂಚುಕ ಹರಾಜು

Posted By:
Subscribe to Filmibeat Kannada

'ಚಾಂದಿನಿ ಬಾರ್' ಹಾಗೂ 'ಫ್ಯಾಷನ್' ಚಿತ್ರಗಳ ಮೂಲಕ ವಿಭಿನ್ನವಾಗಿ ಕಥೆ ಹೆಣೆದು ತಾನೊಬ್ಬ ವಿಭಿನ್ನ ನಿರ್ದೇಶಕ ಎಂದು ತೋರಿಸಿದ ಮಧುರ್ ಭಂಡಾರ್ಕರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮತ್ತೊಂದು ಚಿತ್ರ 'ಹೀರೋಯಿನ್'. ಈ ಚಿತ್ರದ ಐಟಂ ಸಾಂಗ್ "ಹಲ್ಕಟ್ ಜವಾನಿ"ಯಲ್ಲಿ ಕರೀನಾ ಕಪೂರ್ ತಮ್ಮ ಸೊಂಟವನ್ನು ಬುಗುರಿಯಂತೆ ತಿರುಗಿಸಿದ್ದಾರೆ.

ಈ ಹಾಡಿಗೆ ಬಳಸಿರುವ ಪಿಂಕ್ ಸ್ಯಾರಿ ಹಾಗೂ ಬ್ಲೂ ಜಾಕೆಟ್ ನಲ್ಲಿ ಕುಣಿದು ಪಡ್ಡೆಗಳನ್ನು ಹುಚ್ಚೆಬ್ಬಿಸಿದ್ದಾರೆ ಕರೀನಾ. ಈ ಹಾಡಿಗೆ ಬಳಸಿಕೊಂಡಿರುವ ಸೀರೆ ಹಾಗೂ ಕಂಚುಕ (ರವಿಕೆ)ವನ್ನು ಈಗ ಹರಾಜು ಹಾಕಲು ಮುಂದಾಗಿದ್ದಾರೆ ಚಿತ್ರದ ನಿರ್ದೇಶಕರು.

Kareena Kapoor saree

ಹರಾಜಿನಲ್ಲಿ ಬಂದ ಹಣವನ್ನು ವಿವಿಧ ಸೇವಾ ಕಾರ್ಯಕ್ರಗಳಿಗೆ ವಿನಿಯೋಗಿಸಲಾಗುತ್ತದಂತೆ. ತಮ್ಮ ಸಿನೆಮಾಗೆ ಪ್ರಚಾರ ಜೊತೆಗೆ ಒಂದಷ್ಟು ಒಳ್ಳೆಯ ಕಾರ್ಯಗಳನ್ನು ಮಾಡುವ ಉದ್ದೇಶ ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕದ್ವಯರದು. ಕರೀನಾ ಉಟ್ಟ ಸೀರೆ ರವಿಕೆ ಎಂದರೆ ಕೇಳಬೇಕೆ? ಅಭಿಮಾನಿಗಳು ಮುಗಿಬಿದ್ದು ಕೊಳ್ಳುವದಂತೂ ಖಚಿತ. ಸೀರೆ ಮತ್ತು ರವಿಕೆ ಎಷ್ಟಕ್ಕೆ ಹರಾಜಾಗುತ್ತದೋ ನೋಡಬೇಕು.

ಈ ಹಿಂದೆ ಬಾರ್ ಗರ್ಲ್ಸ್, ರೂಪದರ್ಶಿಗಳ ತೆರೆಹಿಂದಿನ ಬದುಕನ್ನು ತೆರೆ ಮೇಲೆ ತೋರಿಸಿದ್ದರು ಮಧುರ್....ಈಗ ಚಿತ್ರದ ಹೀರೋಯಿನ್ ಗಳ ತೆರೆಹಿಂದಿನ ಕತೆಯನ್ನು ಬೆಳಕಿಗೆ ತರುತ್ತಿದ್ದಾರೆ. ತೀರಾ ಕೆಳಮಟ್ಟದಿಂದ ಬಂದಂತಹ ಹೀರೋಯಿನ್ ಗಳ ಜೀವನ ಹೇಗಿರುತ್ತದೆ, ಅವರ ಎದುರಿಸುತ್ತಿರುವ ಸಮಸ್ಯೆಗಳೇನು? ಈ ಅಂಶಗಳ ಆಧಾರವಾಗಿ ಈ ಚಿತ್ರವನ್ನು ತೆರೆಗೆ ಬರುತ್ತಿದೆ.

ಸೆಪ್ಟಂಬರ್ 21ರಂದು ಈ ಚಿತ್ರವನ್ನು ಭರ್ಜರಿಯಾಗಿ ಬಿಡುಗಡೆ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ರೋನಿ, ಮಧುರ್ ಭಂಡಾರ್ಕರ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಸುಮಾರು ರು.18 ಕೋಟಿ ಸುರಿಯಲಾಗಿದೆ.

ಮಧುರ್ ಭಂಡಾರ್ಕರ್ ಈ ಹಿಂದೆ ನಿರ್ದೇಶಿಸಿದ ಚಾಂದಿನಿ ಬಾರ್, ಫ್ಯಾಷನ್, ಪೇಜ್ ತ್ರಿ, ಟ್ರಾಫಿಕ್ ಸಿಗ್ನಲ್ ಚಿತ್ರಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈಗ 'ಹೀರೋಯಿನ್' ಚಿತ್ರವೂ ಅಷ್ಟೇ ಭಾರಿ ನಿರೀಕ್ಷೆ ಮೂಡಿಸಿದೆ. (ಏಜೆನ್ಸೀಸ್)

English summary
Ever since Kareena Kapoor featured in her bright pink saree and dark blue blouse in her item song Halkat Jawaani in Madhur Bhandarkar’s upcoming film Herone, her costume became the talk of town. And now buzz is that the same ensemble is being auctioned for a cause.
Please Wait while comments are loading...