For Quick Alerts
  ALLOW NOTIFICATIONS  
  For Daily Alerts

  ಕಪೂರ್ ಖಾಂದಾನ್‌ನಲ್ಲಿ ಮತ್ತೆ ತಲೆ ಎತ್ತಿದ ಆಸ್ತಿ ವಿವಾದ

  |

  ಭಾರತ ಸಿನಿಮಾ ರಂಗದಲ್ಲಿ ಕಪೂರ್ ವಂಶಕ್ಕೆ ಬಹುಮುಖ್ಯ ಸ್ಥಾನವಿದೆ. ಭಾರತದ ಸಿನಿಮಾ ಇಂದು ಇರುವ ಮಟ್ಟಕ್ಕೆ ಕರೆತರುವಲ್ಲಿ ಕಪೂರ್ ವಂಶದ ಯೋಗದಾನ ಬಹಳ ದೊಡ್ಡದು. ಬಹಳ ದೊಡ್ಡ ವಂಶವಾದ ಕಪೂರ್‌ ಖಾಂದಾನ್‌ನಲ್ಲಿ ಆಗಾಗ್ಗೆ ಆಸ್ತಿ ವಿವಾದಗಳು ನಡೆಯುವುದು ಸಹ ಸಾಮಾನ್ಯ.

  ಇದೇ ವರ್ಷದ ಆರಂಭದಲ್ಲಿ ರಾಜ್ ಕಪೂರ್ ಪುತ್ರ ರಾಜೀವ್ ಕಪೂರ್ ಅಸುನೀಗಿದರು. ಫೆಬ್ರವರಿಯಲ್ಲಿ ಮರಣ ಹೊಂದಿದ ಅವರು ಯಾವುದೇ ವ್ಹಿಲ್ ಮಾಡದೇ ಸಾವನ್ನಪ್ಪಿದರು. ರಾಜೀವ್ ಅವರ ಆಸ್ತಿ ಮೇಲೆ ನಮ್ಮ ಹಕ್ಕಿದೆ ಎಂದು ರಾಜೀವ್ ಸಹೋದರ ರಣಧೀರ್ ಕಪೂರ್ ಹಾಗೂ ಸಹೋದರಿ ರೀಮಾ ಜೈನ್ ಹೈಕೋರ್ಟ್‌ಗೆ ಪಿಟಿಷನ್ ಹಾಕಿದ್ದಾರೆ.

  ರಾಜೀವ್ ಕಪೂರ್ ಅವರು 2001 ರಲ್ಲಿ ಆರತಿ ಸಬರ್ವಾಲ್‌ ಅವರೊಟ್ಟಿಗೆ ವಿವಾಹವಾಗಿದ್ದರು ಆದರೆ ಎರಡೇ ವರ್ಷಕ್ಕೆ ಅಂದರೆ 2003 ಕ್ಕೆ ಅವರು ವಿಚ್ಛೇಧನ ಪಡೆದು ದೂರಾದರು. ರಾಜೀವ್‌ಗೆ ಮಕ್ಕಳು ಇಲ್ಲ ಹಾಗಾಗಿ ರಾಜೀವ್ ಆಸ್ತಿಯನ್ನು ತಮ್ಮ ಸುಪರ್ಧಿಗೆ ಒಪ್ಪಿಸಬೇಕು ಎಂದು ಮನವಿ ಮಾಡಿದ್ದಾರೆ ರಣಧೀರ್ ಹಾಗೂ ರೀಮಾ.

  ವಿಚ್ಛೇಧನದ ತೀರ್ಪನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚನೆ

  ವಿಚ್ಛೇಧನದ ತೀರ್ಪನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚನೆ

  ವಿಚಾರಣೆ ನಡೆಸಿರುವ ಬಾಂಬೆ ಹೈಕೋರ್ಟ್, ದಿವಂಗತ ರಾಜೀವ್ ಹಾಗೂ ರೀಮಾ ಜೈನ್ ಅವರ ವಿಚ್ಛೇಧನದ ತೀರ್ಪಿನ ದಾಖಲೆ ತಂದು ಕೋರ್ಟ್‌ಗೆ ಒಪ್ಪಿಸುವಂತೆ ರಣಧೀರ್ ಹಾಗೂ ರೀಮಾ ಅವರಿಗೆ ಸೂಚಿಸಿದೆ.

  ವಿಚ್ಛೇಧನ ತೀರ್ಪು ಕೊಟ್ಟ ನ್ಯಾಯಾಲಯದ ಬಗ್ಗೆ ತಿಳಿದಿಲ್ಲ

  ವಿಚ್ಛೇಧನ ತೀರ್ಪು ಕೊಟ್ಟ ನ್ಯಾಯಾಲಯದ ಬಗ್ಗೆ ತಿಳಿದಿಲ್ಲ

  ಆದರೆ ಇದಕ್ಕೆ ತಕರಾರು ಸಲ್ಲಿಸಿರುವ ರಣಧೀರ್ ಹಾಗೂ ರೀಮಾ ಪರ ವಕೀಲರು, ಯಾವ ಕುಟುಂಬ ನ್ಯಾಯಾಲಯ ರಾಜೀವ್ ಹಾಗೂ ಆರತಿ ಸಬರ್ವಾಲ್‌ ಅವರಿಗೆ ವಿಚ್ಛೇಧನ ನೀಡಿದೆ ಎಂಬುದು ರಣಧೀರ್ ಹಾಗೂ ರೀಮಾ ಅವರಿಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಈ ತಕರಾರನ್ನು ಹೈಕೋರ್ಟ್‌ ಒಪ್ಪಿಲ್ಲ. ಆಸ್ತಿಯ ಮೇಲೆ ಹಕ್ಕು ಪಡೆಯಲು ರಣಧೀರ್ ಹಾಗೂ ರೀಮಾ ಅವರು ಸಹೋದರ ರಾಜೀವ್‌ನ ವಿಚ್ಛೇಧನ ಆದೇಶದ ದಾಖಲೆಯನ್ನು ಹುಡುಕಬೇಕಾಗಿದೆ.

  ರಾಜ್‌ ಕಪೂರ್‌ರ ಮಕ್ಕಳು

  ರಾಜ್‌ ಕಪೂರ್‌ರ ಮಕ್ಕಳು

  ಬಾಲಿವುಡ್‌ನ ಶೋ ಮ್ಯಾನ್ ರಾಜ್‌ ಕಪೂರ್‌ಗೆ ಐದು ಜನ ಮಕ್ಕಳು, ರಣಧೀರ್ ಕಪೂರ್, ರಿಶಿ ಕಪೂರ್, ರಾಜೀವ್ ಕಪೂರ್. ರೀಮಾ ಹಾಗೂ ರೀತು ಹೆಣ್ಣು ಮಕ್ಕಳು. ಇದೀಗ ಮೊದಲ ಮಗ ರಣಧೀರ್ ಹಾಗೂ ನಾಲ್ಕನೇ ಮಗಳು ರೀಮಾ ಮಾತ್ರವೇ ಬದುಕಿದ್ದಾರೆ.

  ಮುಂಬೈ ಏರ್ ಪೋರ್ಟ್ ನಲ್ಲಿ ಊರ್ವಶಿಯ ಡ್ರೆಸ್ ಗೆ ಗಾಳಿ ಕೊಟ್ಟ ಕಾಟ ಅಷ್ಟಿಷ್ಟಲ್ಲ | Filmibeat Kannada
  ಹೃದಯಾಘಾತದಿಂದ ನಿಧನರಾದ ರಾಜೀವ್ ಕಪೂರ್

  ಹೃದಯಾಘಾತದಿಂದ ನಿಧನರಾದ ರಾಜೀವ್ ಕಪೂರ್

  ರಾಜೀವ್ ಕಪೂರ್ ಅವರು ನಟನಾಗಿ, ನಿರ್ಮಾಪಕರಾಗಿ, ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಇದೇ ವರ್ಷದ ಫೆಬ್ರವರಿ 9 ರಂದು ಹೃದಯಾಘಾತದಿಂದ ನಿಧನರಾದರು ರಾಜೀವ್. ಬಹುತೇಕ ಜೀವನ ಒಂಟಿಯಾಗಿಯೇ ಇದ್ದ ರಾಜೀವ್ ಕಪೂರ್ ಅವರ ಅಣ್ಣ ರಣಧೀರ್ ಕಪೂರ್ ಜೊತೆಯಲ್ಲಿಯೇ ವಾಸವಿದ್ದರು.

  English summary
  Bombay high court instructed Randhir Kapoor and Rima Jain to submit Rajiv Kapoor's divorce decree to gain ownership on Rajiv's property.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X