»   » ಹೆಚ್ಚು ಗಳಿಕೆ ಹೊಂದಿರುವ ಸಿನಿತಾರೆಯರು

ಹೆಚ್ಚು ಗಳಿಕೆ ಹೊಂದಿರುವ ಸಿನಿತಾರೆಯರು

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಾಲಿವುಡ್ ನಲ್ಲಿ ಚಿತ್ರದಿಂದ ಚಿತ್ರಕ್ಕೆ ನಾಯಕರಂತೆ ನಾಯಕಿಯರ ಸಂಭಾವನೆ ರೇಟ್ ಕೂಡಾ ಏರಿಕೆಯಾಗುವುದು ಮಾಮೂಲಿ. ಇಡೀ ವಿಶ್ವಕ್ಕೆ ಹೆಚ್ಚು ಚಿತ್ರಗಳನ್ನು ಅದರಲ್ಲೂ ಭಾರಿ ಬಜೆಟ್ ಚಿತ್ರಗಳನ್ನು ನೀಡುವ ಭಾರತೀಯ ಚಿತ್ರರಂಗದಲ್ಲಿ ನಾಯಕಿಯರ ಸಂಭಾವನೆ ವಿಷಯ ಈಗ ಗೌಪ್ಯವಾಗೇನು ಉಳಿದಿಲ್ಲ.

ಕೋಟಿಗಟ್ಟಲೇ ಹಣ ಸುರಿಯುವ ನಿರ್ಮಾಪಕರಿಗೆ ಚಿತ್ರ ಗೆದ್ದರೆ ಹಬ್ಬ ಇಲ್ಲದಿದ್ದರೆ ಬೀದಿಪಾಲಾಗುವ ಭಯ ಇರುತ್ತದೆ. ತಾರೆಯರಿಗೆ ಚಿತ್ರ ಸೋಲಲಿ, ಗೆಲ್ಲಲಿ ಸಂಭಾವನೆ ಮಾತ್ರ ಸಿಗುವುದು ತಪ್ಪುವುದಿಲ್ಲ. ಎಲ್ಲೋ ಕೆಲವರು ಚಿತ್ರ ಸೋತಾಗ ನಿರ್ಮಾಪಕರಿಗೆ ಸಹಾಯ ಹಸ್ತ ಚಾಚುತ್ತಾರೆ ಅಷ್ಟೆ.

ಈಗ ಬಾಲಿವುಡ್ ಮಾರುಕಟ್ಟೆ ವಿಸ್ತ್ರೀರ್ಣವಾಗಿದ್ದು, ಅಮೆರಿಕ, ಇಂಗ್ಲೆಂಡ್ ಅಲ್ಲದೆ ರಷ್ಯಾ, ಮಧ್ಯಪ್ರಾಚ್ಯ, ಜರ್ಮನಿ ಸೇರಿದಂತೆ ವಿಶ್ವದ ಮೂಲೆ ಮೂಲೆ ತಲುಪುತ್ತಿದೆ. ಕಳೆದ ವರ್ಷದಂತೆ ಈ ವರ್ಷ ಕೂಡಾ 100, 200 ಕೋಟಿ ಕ್ಲಬ್ ಗೆ ಚಿತ್ರಗಳು ಸೇರುತ್ತಿದ್ದಂತೆ ಚಿತ್ರದ ತಾರಾವರ್ಗಕ್ಕೂ ಭರ್ಜರಿ ಸಂಭಾವನೆ ಸಿಗುತ್ತಿದೆ.

ಎಂದಿನಂತೆ ಖಾನ್ ತ್ರಯರು ಬಾಲಿವುಡ್ ನಲ್ಲಿ ತಮ್ಮ ರಾಜ್ಯಭಾರ ಮುಂದುವರೆಸಿದ್ದರೆ, ನಾಯಕಿಯರ ಪೈಕಿ ಪ್ರಿಯಾಂಕಾ ಛೋಪ್ರಾ, ಕರೀನಾ ಕಪೂರ್, ಐಶ್ವರ್ಯಾ ರೈ, ಕತ್ರೀನಾ ಕೈಫ್ ತಮ್ಮ ಬೇಡಿಕೆ ಹೆಚ್ಚಾಗುವಂತೆ ನೋಡಿಕೊಂಡಿದ್ದಾರೆ. 2013ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ಟಾಪ್ 10 ಬಾಲಿವುಡ್ ನಾಯಕಿಯರು ಇಲ್ಲಿದ್ದಾರೆ ನೋಡಿ...

ಸೋನಾಕ್ಷಿ ಸಿನ್ಹಾ

ದಬ್ಬಾಂಗ್ ಗರ್ಲ್ ಸೋನಾಕ್ಷಿ ಸಿನ್ಹಾ ವೃತ್ತಿ ಜೀವನದ ಗ್ರಾಫ್ ಏರಿಕೆಯಲ್ಲೇ ಸಾಗಿದೆ. ಪ್ರತಿ ಚಿತ್ರಕ್ಕೂ 1.25 ಕೋಟಿ ರು ಸಂಭಾವನೆ ಪಡೆಯುವ ಈಕೆ 1.5 ಕೋಟಿ ರು ಜಾಹೀರಾತಿನ ಮೂಲಕ ಗಳಿಸುತ್ತಾಳೆ

ಅನುಷ್ಕಾ ಶರ್ಮ

ಬೆಂಗಳೂರು ಬೆಡಗಿ ಅನುಷ್ಕಾ ಶರ್ಮ, ಕಿಂಗ್ ಖಾನ್ ಶಾರುಖ್ ಜತೆ ನಟಿಸಿ ಹಿಟ್ ಜೋಡಿ ಎನಿಸಿಕೊಂಡ ಮೇಲೆ ಬ್ರ್ಯಾಂಡ್ ಮೌಲ್ಯ ಹೆಚ್ಚಿಸಿಕೊಂಡಿದ್ದಾಳೆ. ಚಿತ್ರಗಳಿಗೆ ಹಾಗೂ ಜಾಹೀರಾತಿಗೆ ಸುಮಾರು 1.5 ಕೋಟಿ ರು ಪಡೆಯುತ್ತಿದ್ದಾಳೆ.

ಸೋನಮ್ ಕಪೂರ್

ಸಾವರಿಯಾ ಚಿತ್ರದಿಂದ ರಾಂಝಾನಾ ತನಕ ಏಳುಬೀಳು ಕಂಡಿರುವ ಅನಿಲ್ ಕಪೂರ್ ಮಗಳು ಸೋನಮ್ ಕಪೂರ್ ಕೂಡಾ ಪ್ರತಿ ಚಿತ್ರಕ್ಕೆ 1.5 ಕೋಟಿ ರು ಪಡೆಯುತ್ತಿದ್ದಾಳೆ

ವಿದ್ಯಾ ಬಾಲನ್

ಪಾತ್ರಗಳ ಆಯ್ಕೆ ಬಗ್ಗೆ ಸಾಕಷ್ಟು ಕಾಲ ತೆಗೆದುಕೊಳ್ಳುವ ವಿದ್ಯಾ ಬಾಲನ್ ಘನ್ ಚಕ್ಕರ್ ಚಿತ್ರದಲ್ಲಿ ಸಾಧಾರಣ ಪಾತ್ರದಲ್ಲಿ ಕಾಣಿಸಿಕೊಂಡರೂ ಮಾರುಕಟ್ಟೆಯಲ್ಲಿ 2 ಕೋಟಿ ರು ಪ್ರತಿ ಚಿತ್ರದಂತೆ ಪಡೆಯುತ್ತಿದ್ದಾರೆ.

ದೀಪಿಕಾ ಪಡುಕೋಣೆ

ಬೆಂಗಳೂರಿನ ಮತ್ತೊಬ್ಬ ಬೆಡಗಿ ದೀಪಿಕಾ ಮತ್ತೊಮ್ಮೆ ಬಾಲಿವುಡ್ ಕ್ವೀನ್ ಆಗಿ ಮೆರೆಯುತ್ತಿದ್ದಾಳೆ. ಯೇ ಜವಾನಿ ಹೇ ದಿವಾನಿ, ಚೆನ್ನೈ ಎಕ್ಸ್ ಪ್ರೆಸ್ ಭರ್ಜರಿ ಯಶಸ್ಸಿನ ನಂತರ ದೀಪಿಕಾ ಸಂಭಾವನೆ ಏರುತ್ತಿದೆ.

ಪ್ರತಿ ಚಿತ್ರಕ್ಕೆ 2.5 ಕೋಟಿ ರು ಪಡೆಯುವ ದೀಪಿಕಾ ಈಗಲೂ ರೂಪದರ್ಶಿಯಾಗಿ ಜಾಹೀರಾತು ಲೋಕದಿಂದ 3.5 ಕೋಟಿ ರು ಬಾಚುತ್ತಿದ್ದಾಳೆ.

ಬಿಪಾಶ ಬಾಸು

ಬೆಂಗಾಳಿ ಬೆಡಗಿ ಬಿಪಾಶಾ ಗಾಸಿಪ್ ಕಾಲಂನಲ್ಲಿ ತನ್ನ ಹೆಸರು ಓಡಾಡುವಂತೆ ಮಾಡುವ ಮೂಲಕ ಸದಾ ಸುದ್ದಿಯಲ್ಲಿರಲು ಹವಣಿಸುತ್ತಾಳೆ. ಕೈಲಿ ಸಾಕಷ್ಟು ಚಿತ್ರಗಳಿಲ್ಲದಿದ್ದರೂ ಈ ಕೃಷ್ಣಸುಂದರಿ ಚಿತ್ರವೊಂದಕ್ಕೆ 3 ಕೋಟಿ ಸಂಭಾವನೆ ಪಡೆಯುತ್ತಿದ್ದಾಳೆ.

ಕತ್ರೀನಾ ಕೈಫ್

ಕತ್ರೀನಾ ಕೈಫ್ ಕೂಡಾ ಗಾಸಿಪ್ ಕಾಲಂನ ಖಾಯಂ ಅತಿಥಿಯಾಗಿದ್ದು, ಜಾಹೀರಾತುಗಳಿಂದಲೆ ಸುಮಾರು 4 ಕೋಟಿ ರು ಪಡೆಯುತ್ತಿದ್ದಾಳೆ. ಅದರೆ, ಪ್ರತಿ ಚಿತ್ರಕ್ಕೆ ಎಷ್ಟು ಮೊತ್ತ ಸಂದಾಯವಾಗುತ್ತಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಐಶ್ವರ್ಯಾ ರೈ

ಮದುವೆ, ಮಕ್ಕಳಾದ ಮೇಲೆ ಚಿತ್ರರಂಗದಿಂದ ಮರೆಯಾಗುವ ನಾಯಕಿಯರಿಗಿಂತ ಕೊಂಚ ಭಿನ್ನವಾಗಿರುಚ ಐಶ್ವರ್ಯಾ ಈಗಲೂ ಜನಪ್ರಿಯತೆ ಉಳಿಸಿಕೊಂಡಿದ್ದಾಳೆ.

ಕಳೆದ ಬಾರಿ ಐಶ್ವರ್ಯಾ ಅವರನ್ನು ನೀವು ನೋಡಿದ್ದು ರಜನಿ ಜತೆ ರೋಬೊಟ್ ಚಿತ್ರದಲ್ಲಿ ಅಲ್ಲವೇ, ರೋಬೋಟ್ ಚಿತ್ರಕ್ಕೆ ಐಶ್ವರ್ಯಾ ರೈ ಪಡೆದಿದ್ದು ಬರೋಬ್ಬರಿ 6 ಕೋಟಿ ರು.

ಜ್ಯುವೆಲ್ಲರಿ ಕಂಪನಿಗಳ ರೂಪದರ್ಶಿಯಾಗಿರುವ ಐಶ್ವರ್ಯಾ ಈಗಲೂ ಜಾಹೀರಾತು ಲೋಕದಿಂದ ಸುಮಾರು 4 ಕೋಟಿ ರು ಪಡೆಯುತ್ತಿದ್ದಾರೆ.

ಕರೀನಾ ಕಪೂರ್

ಕಪೂರ್ ಖಾನ್ ದಾನ್ ಬೆಡಗಿ ಕರೀನಾ ಪ್ರತಿ ಚಿತ್ರಕ್ಕೆ ಸುಮಾರು 8 ಕೋಟಿ ರು ಪಡೆಯುತ್ತಿದ್ದಾಳೆ. ಆದರೆ, ಇತ್ತೀಚೆಗೆ ಜಾಹೀರಾತು ಲೋಕದಲ್ಲಿ ಜನಪ್ರಿಯತೆ ಕಳೆದುಕೊಳ್ಳುತ್ತಿದ್ದು 3 ಕೋಟಿ ರು ಮಾತ್ರ ಗಳಿಸುತ್ತಿದ್ದಾಳೆ.

ಪ್ರಿಯಾಂಕಾ ಛೋಪ್ರಾ

ಯಾವುದೇ ಬಿಗ್ ಬಜೆಟ್ ಚಿತ್ರಗಳಿಲ್ಲದಿದ್ದರೂ, ಮೋಸ್ಟ್ ಡೇಂಜರೇಸ್ ಎಂದು ಸರ್ಚ್ ಇಂಜಿನ್ ನಿಂದ ಬಿರುದು ಪಡೆದುಕೊಂಡಿರುವ ಪ್ರಿಯಾಂಕಾ ಛೋಪ್ರಾ ಜಂಜೀರ್ ಚಿತ್ರಕ್ಕೆ ಪಡೆದಿದ್ದು 9 ಕೋಟಿ ರು. ಜಂಜೀರ್ ಚಿತ್ರಕ್ಕೆ ವಿಮರ್ಶಕರೆಲ್ಲರೂ ನಕಾರಾತ್ಮಕ ವಿಮರ್ಶೆ ನೀಡಿದ್ದರು, ಪ್ರೇಕ್ಷಕರೂ ಅಷ್ಟಾಗಿ ಕೈ ಹಿಡಿಯಲಿಲ್ಲ. ಆದರೆ, ಪ್ರಿಯಾಂಕಾಗೆ ಮಾತ್ರ ಭರ್ಜರಿ ಗಳಿಕೆ ಸಿಕ್ಕಿದೆ.

English summary
Bollywood is the Indian Hollywood and movies that are churned out from this industry are made with a huge budget. Crores of money are spent on making a film, and if the movie turns out to be a disaster at the box office, the producers might even land up on the streets!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada