»   » ಇನ್ನೂ ಮದುವೆನೇ ಆಗಿಲ್ಲ ಆಗ್ಲೇ ಮಕ್ಕಳು ಬೇಕು ಅಂತಿದ್ದಾರೆ ಪರಿಣಿತಿ

ಇನ್ನೂ ಮದುವೆನೇ ಆಗಿಲ್ಲ ಆಗ್ಲೇ ಮಕ್ಕಳು ಬೇಕು ಅಂತಿದ್ದಾರೆ ಪರಿಣಿತಿ

By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ನ ಬೆಡಗಿ ಪರಿಣಿತಿ ಚೋಪ್ರಾ ಅವರಿಗೆ ಮದುವೆಗೆ ಮುಂಚೆ ಮಕ್ಕಳು ಬೇಕಂತೆ, ಹೀಗಂತ ಖುದ್ದು ಪರಿಣಿತಿ ಚೋಪ್ರಾ ಅವರೇ ಹೇಳಿಕೊಂಡಿದ್ದಾರೆ. ಏನಪ್ಪಾ ಇದು, ಇವರಿಗೇನಾಯ್ತು ಇದ್ದಕ್ಕಿದ್ದಂತೆ ಅಂತ ಗಾಬರಿಯಾದ್ರಾ?.

ಹೌದು ನಟಿ ಪರಿಣಿತಿ ಚೋಪ್ರಾ ಅವರು ಮದುವೆಗೆ ಮುಂಚೆ ಮಗು ಬೇಕು ಅಂದಿದ್ದು ನಿಜ. ಆದರೆ ಸುಮ್ಮ-ಸುಮ್ಮನೆ ಅಲ್ಲ, ಬದ್ಲಾಗಿ ಅನಾಥ ಮಕ್ಕಳನ್ನು ದತ್ತು ತೆಗೆದುಕೊಂಡು, ಅವರಿಗೆ ವಿದ್ಯೆ ನೀಡುವ ಮೂಲಕ ಅವರಿಗೆ ಒಂದೊಳ್ಳೆ ಭವಿಷ್ಯ ನೀಡಲು ಮಾಜಿ ವಿಶ್ವಸುಂದರಿಯ ಸೋದರಿ ಪರಿಣಿತಿ ನಿರ್ಧರಿಸಿದ್ದಾರೆ.[ಬಾಲಿವುಡ್ ಬಿಟ್ಟು ಎತ್ತ ಹೊರಟಳು ಪರಿಣಿತಿ?]

Hindi Actress Parineeti Chopra wants to adopt lots of kids

ಆದರೆ ಬರೀ ಒಂದು ಎರಡು ಮಕ್ಕಳನ್ನು ದತ್ತು ತೆಗೆದುಕೊಳ್ಳುತ್ತಿಲ್ಲವಂತೆ, ಬದಲಾಗಿ ಆದಷ್ಟು ಹೆಚ್ಚಿನ ಮಕ್ಕಳನ್ನು ದತ್ತು ತೆಗೆದುಕೊಳ್ಳುವುದಾಗಿ ಪರಿಣಿತಿ ಚೋಪ್ರಾ ತಿಳಿಸಿದ್ದಾರೆ.

Hindi Actress Parineeti Chopra wants to adopt lots of kids

'ನಾನು ಹಣದ ವಿಚಾರದಲ್ಲಿ ಮತ್ತು ಭಾವನೆಗಳ ವಿಚಾರದಲ್ಲಿ ತುಂಬಾ ಗಟ್ಟಿಗಿತ್ತಿ ಅನ್ನೋದು ನನ್ನ ಅಭಿಪ್ರಾಯ. ಆದ್ದರಿಂದ ತುಂಬಾ ಜನ ಅನಾಥ ಮಕ್ಕಳನ್ನು ದತ್ತು ತೆಗೆದುಕೊಳ್ಳಬೇಕೆಂದಿದ್ದೇನೆ' ಎಂದು ಮುದ್ದಾದ ಬೆಡಗಿ ಪರಿಣಿತಿ ಚೋಪ್ರಾ ಅಷ್ಟೇ ಮುದ್ದು-ಮುದ್ದಾಗಿ ನುಡಿದಿದ್ದಾರೆ.[ಶುದ್ಧ್ ವಿಮರ್ಶೆ: ಈ ಚುಂಬಕ ಚಿತ್ರ 'ಹಾಟ್' ಆಗಿಲ್ಲ]

Hindi Actress Parineeti Chopra wants to adopt lots of kids

ಇವರ ತಂದೆ-ತಾಯಿಗಳು ಸುಮಾರು 50 ಜನ ಅನಾಥ ಮಕ್ಕಳನ್ನು ಬೆಳೆಸಿ ಅವರಿಗೆ ವಿದ್ಯಾಭ್ಯಾಸ ನೀಡಿ ಬೆಳೆಸಿದ್ದಾರಂತೆ, ಅದರಲ್ಲಿ ಕೆಲವರು ಇದೀಗ ಮದುವೆ ಆಗಿ ಸೆಟ್ಲ್ ಆಗಿದ್ದಾರೆ. ಆದ್ದರಿಂದ ಪರಿಣಿತಿ ಚೋಪ್ರಾ ಅವರಿಗೆ, ಅವರ ತಂದೆ-ತಾಯಿಯೇ ನಿಜವಾದ ಸ್ಫೂರ್ತಿಯಂತೆ.

Hindi Actress Parineeti Chopra wants to adopt lots of kids

'ನನ್ನ ಹೆತ್ತವರು ಅನಾಥ ಮಕ್ಕಳನ್ನು ಬೆಳೆಸುತ್ತಾ ಬಂದ ರೀತಿಯನ್ನು ನಾನು ಬೆಳೆಯುತ್ತಾ-ಬೆಳೆಯುತ್ತಾ ಕಣ್ಣಾರೆ ನೋಡಿಕೊಂಡು ಬಂದಿದ್ದೇನೆ. ಆದ್ದರಿಂದ ಇದೀಗ ಅವರು ಮಾಡುತ್ತಿದ್ದ ಕೆಲಸವನ್ನು ನಾನು ಮಾಡಬೇಕೆಂದಿದ್ದೇನೆ' ಎಂದು ಪರಿಣಿತಿ ಚೋಪ್ರಾ ಹೇಳಿಕೊಂಡಿದ್ದಾರೆ.

English summary
Hindi Actress Parineeti Chopra's obsession is with kids. The 'Ishaqzaade' actress wants to adopt children at some point in her life. And not just one or two kids, but quite a few.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada