»   » ಚಿನ್ನದ ಮೇಲಿನ ವ್ಯಾಮೋಹಕ್ಕೆ ಪ್ರಿಯಾಂಕ ಹೀಗಾ ಮಾಡೋದು.?

ಚಿನ್ನದ ಮೇಲಿನ ವ್ಯಾಮೋಹಕ್ಕೆ ಪ್ರಿಯಾಂಕ ಹೀಗಾ ಮಾಡೋದು.?

By: ಸೋನು ಗೌಡ
Subscribe to Filmibeat Kannada

'ಚಿನ್ನ', 'ಬಂಗಾರ', 'ಗೋಲ್ಡ್' ಅಂತ ತರೇಹವಾರಿ ಹೆಸರುಗಳಿಂದ ನಾವ್ ಕರೀತೀವಲ್ವಾ?. ಆ ಬಂಗಾರ ಅಂದ್ರೆ ಹೆಂಗಳೆಯರಿಗೆ ಪಂಚಪ್ರಾಣ. ಚಿನ್ನ ಖರೀದಿ ಮಾಡಲಿಕ್ಕಾಗಾದಿದ್ದರೂ, ಕನಿಷ್ಟ ಪಕ್ಷ ಜ್ಯುವೆಲ್ಲರಿ ಶಾಪ್ ನಲ್ಲಿ ನೋಡಿ ಆನಂದ ಪಡೋದು, ಅಥವಾ ಕನಸು ಕಾಣೋದು ಮಾಡ್ತಾರೆ.

ಇದೇ ಸಾಲಿಗೆ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರು ಕೂಡ ಸೇರುತ್ತಾರೆ. ಆದ್ರೆ ಇವರು ಚಿನ್ನದ ಕನಸೆಲ್ಲಾ ಕಣ್ತಾ ಕೂರಲ್ಲ ಬಿಡಿ. ಅಂದಹಾಗೆ ಚಿನ್ನದ ಮೇಲೆ ಅಗಾಧ ಪ್ರೀತಿ-ವ್ಯಾಮೋಹ ಇಟ್ಟುಕೊಂಡಿರುವ ಕ್ಯೂಟ್ ಬೆಡಗಿ ಪಿಗ್ಗಿ ಅವರು ಚಿನ್ನದ ಲೇಪನವನ್ನೇ ಮುಖಕ್ಕೆ ಮೇಕಪ್ಪ್ ಆಗಿ ಹಚ್ಚಿಕೊಂಡಿದ್ದಾರೆ.[ಬರ್ತ್ ಡೇ ಸ್ಪೆಷಲ್: ಪ್ರಿಯಾಂಕ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿ]

Hindi Actress Priyanka Chopra's Gold love

ಗೋಲ್ಡನ್ ಕಲರ್ ಅನ್ನು ಮುಖಕ್ಕೆ ಹಚ್ಚಿಕೊಳ್ಳುತ್ತಿರುವ ವಿಡಿಯೋ ಒಂದನ್ನು ನಟಿ ಪ್ರಿಯಾಂಕ ಚೋಪ್ರಾ ಅವರು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಭಾನುವಾರದಂದು (ಆಗಸ್ಟ್ 7) ಪೋಸ್ಟ್ ಮಾಡಿದ್ದು, ಇದಕ್ಕೆ ಸಾಕಷ್ಟು ಕಾಮೆಂಟ್ ಗಳು ಬರುತ್ತಿವೆ.['ಇವರನ್ನು' ಪ್ರಿಯಾಂಕ ಅನ್ಕೊಂಡ್ರಾ, ಖಂಡಿತ ಅಲ್ವೇ ಅಲ್ಲ.!]

'ಐ ಲವ್ ಗೋಲ್ಡ್....24 ಕ್ಯಾರೆಟ್ ಗೋಲ್ಡ್' ಅಂತ ಕ್ಯೂಟ್ ಪಿಗ್ಗಿ ಇನ್ ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

I love gooooolldd...24 karat gold! #goldengirl

A video posted by Priyanka Chopra (@priyankachopra) on Aug 6, 2016 at 5:00pm PDT

ಬರೀ ಬಾಲಿವುಡ್ ಮಾತ್ರವಲ್ಲದೇ, ಹಾಲಿವುಡ್ ಕ್ಷೇತ್ರದಲ್ಲೂ ಕೂಡ ಸಖತ್ ಬಿಜಿಯಾಗಿರುವ ನಟಿ ಪ್ರಿಯಾಂಕ ಚೋಪ್ರಾ ಅವರು ಸದ್ಯಕ್ಕೆ ಹಾಲಿವುಡ್ 'ಬೇವಾಚ್' ಚಿತ್ರದ ಶೂಟಿಂಗ್ ಮುಗಿಸಿ, ಕ್ವಾಂಟಿಕೋ ಭಾಗ 2, ಸೀರಿಯಲ್ ಶೂಟ್ ನಲ್ಲಿ ತೊಡಗಿದ್ದಾರೆ.[ಉಸ್ಸಪ್ಪಾ! 10 ನಿಮಿಷ ಕುಣಿಯಲು ಪ್ರಿಯಾಂಕ ಪಡೆದ ಸಂಭಾವನೆ ಇಷ್ಟಾ?]

English summary
Bollywood Actress Priyanka Chopra Instagrammed a short and goofy gif-like video on Sunday (August 7th), in which she gets a stroke of bright gold painted across her cheek because she "loves gold."

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada