»   » ಉದ್ಯಾನನಗರಿ ಬೆಂಗಳೂರನ್ನು ಮನಸಾರೆ ಹೊಗಳಿದ ಸನ್ನಿ ಲಿಯೋನ್

ಉದ್ಯಾನನಗರಿ ಬೆಂಗಳೂರನ್ನು ಮನಸಾರೆ ಹೊಗಳಿದ ಸನ್ನಿ ಲಿಯೋನ್

By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ನ ಮಾದಕ ನಟಿ ಸನ್ನಿ ಲಿಯೋನ್ ಅವರು ತಮ್ಮ ಮುಂಬರುವ ಚಿತ್ರ 'ಒನ್ ನೈಟ್ ಸ್ಟ್ಯಾಂಡ್' ಚಿತ್ರದ ಪ್ರಚಾರಕ್ಕೆ ಏಪ್ರಿಲ್ 9 ರಂದು ಬೆಂಗಳೂರು ದೊಮ್ಮಲೂರು ಫೋರಂ ಮಾಲ್ ಗೆ ಆಗಮಿಸಿದ್ದರು.

ಈ ಸಂದರ್ಭದಲ್ಲಿ ಸನ್ನಿ ಲಿಯೋನ್ ಅವರು ರಾಜಧಾನಿ ಬೆಂಗಳೂರನ್ನು ಸಿಕ್ಕಾಪಟ್ಟೆ ಹೊಗಳಿದ್ದಾರೆ. ಬಿಟೌನ್ ಬೇಬಿ ಡಾಲ್ ಸನ್ನಿ ಲಿಯೋನ್ ಅವರಿಗೆ ಬೆಂಗಳೂರು ಅಂದರೆ ಬಹಳ ಇಷ್ಟವಂತೆ. 'ಬೆಂಗಳೂರಿನ ವಾತಾವರಣ ನನಗೆ ಬಹಳ ಹಿಡಿಸಿದ್ದು, ಇಲ್ಲಿಗೆ ಬಂದರೆ ಮನಸ್ಸು ಹಗುರವಾಗುತ್ತದೆ' ಎನ್ನುತ್ತಾರೆ ಸನ್ನಿ.[ಶಾರುಖ್ ಜೊತೆ ಮಾದಕ ತಾರೆ ಸನ್ನಿ ಲಿಯೋನ್ ಡ್ಯುಯೆಟ್]

Hindi Actress Sunny Leone celebrates 5th anniversary in Bengaluru

ನಿರ್ದೇಶಕ ಜಾಸ್ಮಿನ್ ಮೊಸೆಸ್ ಡಿಸೋಜಾ ಆಕ್ಷನ್-ಕಟ್ ಹೇಳಿರುವ 'ಒನ್ ನೈಟ್ ಸ್ಟ್ಯಾಂಡ್' ಚಿತ್ರ ಏಪ್ರಿಲ್ 29 ರಂದು ತೆರೆ ಕಾಣುತ್ತಿದ್ದು, ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ನಟಿ ಸನ್ನಿ ಲಿಯೋನ್ ಅವರು ಉದ್ಯಾನನಗರಿ ಬೆಂಗಳೂರನ್ನು ಮನಸಾರೆ ಕೊಂಡಾಡಿದ್ದಾರೆ.

ಜೊತೆಗೆ ಏಪ್ರಿಲ್ 9 ಶನಿವಾರದಂದು ಸನ್ನಿ ಲಿಯೋನ್ ಅವರ 5ನೇ ವರ್ಷದ ವಿವಾಹ ವಾರ್ಷಿಕೋತ್ಸವ ಕೂಡ ಇದ್ದುದ್ದರಿಂದ ಡಬಲ್ ಖುಷಿಯಲ್ಲಿ ತೇಲಾಡುತ್ತಿದ್ದರು.[ಹಾಟ್ ಫೊಟೋ ಶೂಟ್ ನಲ್ಲಿ ಸನ್ನಿಯ ಸೊಬಗು ನೋಡ್ರಲ್ಲಾ..]

'ಬೆಂಗಳೂರಿನಲ್ಲೇ ನನ್ನ 5ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವುದು ನನಗೆ ಮತ್ತಷ್ಟು ಖುಷಿ ತಂದಿದೆ' ಎಂದು ಇಂಡೋ-ಕೆನಡಿಯನ್ ಮೂಲದ ನಟಿ ಸನ್ನಿ ಲಿಯೋನ್ ಅವರು ತಿಳಿಸಿದ್ದಾರೆ.[ಸನ್ನಿ ಜೊತೆ ನನಗೆ ಕೆಲಸ ಮಾಡಲು ಇಷ್ಟ ಎಂದವರಾರು?]

ಸನ್ನಿ ಲಿಯೋನ್ ಅವರು ಬೆಂಗಳೂರಿಗೆ ಆಗಮಿಸಿದ ಫೊಟೋ ಗ್ಯಾಲರಿ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

-
-
-
-
-
-
-
-
-
-
-
-
English summary
Hindi Actress Sunny Leone Promotes her Movie 'One Night Stand' in Bangalore on April 9th. The movie is directed by Jasmine D'Souza.
Please Wait while comments are loading...