»   » ಗರತಿ 'ಗಂಗಮ್ಮ' ಹೋಗಿ 'ಬಿಚ್ಚಮ್ಮ' ಆದ್ರಾ 'ಗೂಗ್ಲಿ' ಬೆಡಗಿ ಕೃತಿ

ಗರತಿ 'ಗಂಗಮ್ಮ' ಹೋಗಿ 'ಬಿಚ್ಚಮ್ಮ' ಆದ್ರಾ 'ಗೂಗ್ಲಿ' ಬೆಡಗಿ ಕೃತಿ

By: Sonu Gowda
Subscribe to Filmibeat Kannada

'ಗೂಗ್ಲಿ' ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಜೊತೆ ಸಲ್ವಾರ್ ಹಾಗೂ ಸೀರೆ ಉಟ್ಟು ಗರತಿ ಗಂಗಮ್ಮನಂತೆ ನಟಿಸಿ ಅಪ್ಪಟ ಸಂಪ್ರದಾಯಸ್ಥ ಹುಡುಗರ ಹೃದಯಕ್ಕೆ ಲಗ್ಗೆ ಇಟ್ಟಿದ್ದ ನಟಿ ಕೃತಿ ಖರಬಂದ ಅವರು ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದೇ ತಡ 'ಗಂಗಮ್ಮ' ಹೋಗಿ 'ಬಿಚ್ಚಮ್ಮ' ಆಗಿದ್ದಾರೆ.

ಹೌದು ಮೊದಲ ಬಾರಿಗೆ ಬಾಲಿವುಡ್ ಗೆ 'ರಾಝ್' ಎಂಬ ಹಾರರ್ ಚಿತ್ರದ ಮೂಲಕ ಎಂಟ್ರಿ ಕೊಟ್ಟಿರುವ ನಟಿ ಕೃತಿ ಅವರು ಬಿಟೌನ್ ಕಿಸ್ಸರ್ ಬಾಯ್ ಇಮ್ರಾನ್ ಹಶ್ಮಿ ಮತ್ತು ಗೌರವ್ ಅರೋರಾ ಅವರ ಜೊತೆ ಹಸಿಬಿಸಿಯಾಗಿ ಕಾಣಿಸಿಕೊಂಡಿದ್ದಾರೆ.[ಕಿಸ್ಸರ್ ಬಾಯ್ ಜೊತೆ ಲಿಪ್ ಲಾಕ್ ಕಥೆ ಬಿಚ್ಚಿಟ್ಟ ಕೃತಿ ಖರಬಂದ]

Hindi Movie 'Raaz Reboot' first look posters released

ಈಗಾಗಲೇ ಚಿತ್ರದ ಶೂಟಿಂಗ್ ಮುಗಿದಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರ ತೆರೆಗೆ ಬರಲಿದೆ. ಸದ್ಯಕ್ಕೆ ಬಿಡುಗಡೆ ಆಗಿರುವ ಟೀಸರ್ ಮತ್ತು ಫಸ್ಟ್ ಲುಕ್ ಪೋಸ್ಟರ್ ಗಳಿಂದ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟಿಸುತ್ತಿದೆ.

Hindi Movie 'Raaz Reboot' first look posters released

ನಿರ್ದೇಶಕ ವಿಕ್ರಮ್ ಭಟ್ ಅವರ ಆಕ್ಷನ್-ಕಟ್ ನಲ್ಲಿ ಮೂಡಿಬಂದಿದ್ದ 'ರಾಝ್' ಸೀರೀಸ್ ಚಿತ್ರಗಳು ಸೂಪರ್ ಹಿಟ್ ಆಗಿದ್ದವು. ಇದೀಗ 'ರಾಝ್ (4) ರಿಬೂಟ್' ಚಿತ್ರಕ್ಕೂ ಕೂಡ ವಿಕ್ರಮ್ ಅವರೇ ನಿರ್ದೇಶನ ಮಾಡಿದ್ದು, ನಿರ್ಮಾಪಕರಾದ ಮಹೇಶ್ ಭಟ್ ಮತ್ತು ಮುಖೇಶ್ ಭಟ್ ಅವರು ಬಂಡವಾಳ ಹೂಡಿದ್ದಾರೆ.[ಬಿಟೌನ್ ನ ಕಿಸ್ಸರ್ ಬಾಯ್ ಜೊತೆ 'ಗೂಗ್ಲಿ' ಬೆಡಗಿ ರೊಮ್ಯಾನ್ಸ್..!]

Hindi Movie 'Raaz Reboot' first look posters released

ಫಸ್ಟ್ ಲುಕ್ ಪೋಸ್ಟರ್ ನಲ್ಲಿ ನಟಿ ಕೃತಿ ಖರಬಂದ ಅವರು ವಿಭಿನ್ನವಾಗಿ ಕಾಣಿಸಿಕೊಂಡಿದ್ದು, ಪೋಸ್ಟರ್ ನೋಡುತ್ತಿದ್ದರೆ, ಭಯ ಹುಟ್ಟುತ್ತಿದೆ. ಇನ್ನು ಸಿನಿಮಾದಲ್ಲಿ ಅದ್ಯಾವ ರೀತಿ ತಮ್ಮ ಅಭಿಮಾನಿಗಳನ್ನು ಭಯ ಪಡಿಸುತ್ತಾರೆ ಅನ್ನೋದನ್ನು ಕಾದು ನೋಡಬೇಕು.[ಕೃತಿ ಮುಡಿಗೇರಿದ 'ಬೆಂಗಳೂರಿಗರ ಬಹುಮೆಚ್ಚುಗೆಯ ನಟಿ' ಕಿರೀಟ]

Hindi Movie 'Raaz Reboot' first look posters released

ಬಹಳ ನಿರೀಕ್ಷೆ ಇಟ್ಟುಕೊಂಡು ಬಿಟೌನ್ ಗೆ ಕಾಲಿಟ್ಟಿರುವ ನಟಿ ಕೃತಿ ಖರಬಂದ ಅವರಿಗೆ ಹಾರರ್-ಥ್ರಿಲ್ಲರ್ 'ರಾಝ್' ಬ್ರೇಕ್ ಕೊಡುತ್ತೋ ಇಲ್ವೋ ಅನ್ನೋದು ಚಿತ್ರ ಬಿಡುಗಡೆ ಆದಾಗಲೇ ತಿಳಿಯಲಿದೆ. ಸದ್ಯಕ್ಕೆ ಚಿತ್ರದ ಟೀಸರ್ ನೋಡಿ ಎಂಜಾಯ್ ಮಾಡಿ...

English summary
Kannada Actress Kriti Kharbanda has made her debut in Bollywood and her debut film 'Raaz Reboot' is all set to be released soon. The first poster of the film was released. Hindi Actor Imran Hashmi in the lead role. The movie is directed by Vikram Bhatt.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada