For Quick Alerts
  ALLOW NOTIFICATIONS  
  For Daily Alerts

  ಹನುಮಾನ್ ಚಾಲಿಸಾ ಪಠಿಸುತ್ತಾ, ಶಾರುಖ್ ಸಿನಿಮಾ ಶೂಟಿಂಗ್‌ಗೆ ನುಗ್ಗಿದ ಹಿಂದೂ ಸಂಘಟನೆ ಸದಸ್ಯರು

  By ಫಿಲ್ಮಿಬೀಟ್ ಡೆಸ್ಕ್
  |

  ಶಾರುಖ್ ಖಾನ್‌ ನಟನೆಯ 'ಪಠಾಣ್' ಸಿನಿಮಾದ ವಿವಾದ ದಿನೇ ದಿನೇ ಹೆಚ್ಚಾಗುತ್ತಿದೆ. 'ಪಠಾಣ್' ಸಿನಿಮಾದ 'ಬೇಷರಮ್' ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಧರಿಸಿದ್ದಾರೆಂದು ಹಿಂದು ಪರ ಸಂಘಟನೆಗಳು ಈ ಸಿನಿಮಾಕ್ಕೆ ವಿರೋಧ ವ್ಯಕ್ತಪಡಿಸುತ್ತಿವೆ.

  ಶಾರುಖ್ ಖಾನ್‌ರ ಹೊಸ ಸಿನಿಮಾದ ಶೂಟಿಂಗ್ ನಡೆಯುತ್ತಿರುವ ಸೆಟ್‌ ಮೇಲೆ ಹಿಂದುಪರ ಸಂಘಟನೆಗಳ ಸದಸ್ಯರು ದಾಳಿ ಮಾಡಿದ್ದು, ಸೆಟ್‌ನ ಹೊರಗೆ ನಿಂತು ಪ್ರತಿಭಟನೆ ನಡೆಸಿದ್ದಾರೆ.

  ಶಾರುಖ್ ಖಾನ್ ನಟಿಸುತ್ತಿರುವ 'ಡಂಕಿ' ಸಿನಿಮಾದ ಚಿತ್ರೀಕರಣ ನಿನ್ನೆ (ಶುಕ್ರವಾರ) ಮಧ್ಯಪ್ರದೇಶದ ಜಬಲ್‌ಪುರದ ಧೂಧಾರ್ ಜಲಪಾತದ ಬಳಿ ಚಿತ್ರೀಕರಣ ನಡೆಯುತ್ತಿತ್ತು. ಆ ಸಮಯದಲ್ಲಿ ವಿಶ್ವ ಹಿಂದು ಪರಿಷತ್, ಭಜರಂಗ ದಳ ಸೇರಿದಂತೆ ಇನ್ನೂ ಕೆಲವು ಹಿಂದುಪರ ಸಂಘಟನೆಗಳ ಸದಸ್ಯರು ಹುನುಮಾನ್ ಚಾಳಿಸ ಹೇಳುತ್ತಾ ಸೆಟ್‌ ಮೇಲೆ ದಾಳಿ ಮಾಡಲು ಯತ್ನಿಸಿದರು. ಶಾರುಖ್ ಖಾನ್ ವಿರುದ್ಧ ಘೋಷಣೆಗಳನ್ನು ಸಹ ಕೂಗಲಾಯಿತು.

  ಪೊಲೀಸರ ಆಗಮನದಿಂದ ಪರಿಸ್ಥಿತಿ ತಿಳಿಯಾಯಿತಾದರೂ ಶೂಟಿಂಗ್‌ ನಡೆಯುತ್ತಿದ್ದ ಜಾಗದಲ್ಲಿ ಬಹುಸಮಯ ಹಿಂದು ಪರಸಂಘಟನೆ ಸದಸ್ಯರು ಪ್ರತಿಭಟನೆ ಮಾಡಿದರು. ಆದರೆ ಇಂದಿನ ಶೂಟಿಂಗ್‌ನಲ್ಲಿ ಶಾರುಖ್ ಖಾನ್ ಸೇರಿದಂತೆ, ಇತರೆ ಪ್ರಮುಖ ನಟರ್ಯಾರು ಭಾಗವಹಿಸಿರಲಿಲ್ಲ. ಆದರೆ ಮುಂದಿನ ದಿನಗಳಲ್ಲಿ ಇದೇ ಸೆಟ್‌ನಲ್ಲಿ ಶಾರಖ್ ಖಾನ್ ಶೂಟಿಂಗ್‌ನಲ್ಲಿ ಭಾಗವಹಿಸಲಿದ್ದಾರೆ.

  ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾದ 'ಬೇಷರಮ್' ಹಾಡು ಕೆಲವು ದಿನಗಳ ಹಿಂದೆ ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಿತ್ತು. ಗ್ಲಾಮರಸ್ ಆಗಿರುವ ಆ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಧರಿಸಿರುವುದನ್ನು ಹಿಂದು ಸಂಘಟನೆಗಳು ವಿರೋಧಿಸಿದ್ದಾರೆ. ಸಿನಿಮಾವನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ.

  'ಪಠಾಣ್' ಸಿನಿಮಾವು ಸ್ಪೈ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಸಿನಿಮಾದಲ್ಲಿ ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ಆದಿತ್ಯ ಚೋಪ್ರಾ ನಿರ್ಮಾಣ ಮಾಡಿದ್ದು, ನಿರ್ದೇಶನ ಮಾಡಿರುವುದು ಸಿದ್ಧಾರ್ಥ್ ಆನಂದ್. ಸಿನಿಮಾವು ಜನವರಿ 25 ರಂದು ಬಿಡುಗಡೆ ಆಗಲಿದೆ.

  English summary
  Hindu outfit members attacks on Shah Rukh Khan's Danki movie shooting set in Madhya Pradesh.
  Saturday, December 17, 2022, 19:00
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X