For Quick Alerts
  ALLOW NOTIFICATIONS  
  For Daily Alerts

  ಕಾಮರಾಣಿ ಸವಿತಾ ಆಂಟಿ ಬಾಲಿವುಡ್ ಗೆ ಎಂಟ್ರಿ!

  By ಜೇಮ್ಸ್ ಮಾರ್ಟಿನ್
  |

  ಸವಿತಾ ಬಾಬಿ ಯಾರಿಗೆ ತಾನೇ ಗೊತ್ತಿಲ್ಲ. ಅಂತರ್ಜಾಲದಲ್ಲಿ ಪೋರ್ನ್ ಟೂನ್ಸ್ ಸಾಮ್ರಾಜ್ಯದ ಅಧಿನಾಯಕಿಯಾದ ಈ ಪಾತ್ರಧಾರಿಣಿ ಸೃಷ್ಟಿಸಿದ ಸಂಚಲನ ಅಷ್ಟಿಷ್ಟಲ್ಲ. ಕಾಮಿಕ್ಸ್ ಜಗತ್ತಿನ ಈ ಸೆಕ್ಸಿ ಪಾತ್ರ ಈಗ ಬಾಲಿವುಡ್ ಗೆ ಎಂಟ್ರಿ ಕೊಡುತ್ತಿದೆ. ಪೋರ್ನ್ ಸ್ಟಾರ್ ಸನ್ನಿ ಲಿಯೋನ್ ನಂತರ ಮತ್ತೊಬ್ಬ ಪೋರ್ನ್ ರಾಣಿ ಹಿಂದಿ ಚಿತ್ರರಂಗದಲ್ಲಿ ಕಾಣಿಸಿಕೊಳ್ಳಲಿದ್ದಾಳೆ.

  ಮೇ.1 ರ ಕಾರ್ಮಿಕರ ದಿನಾಚರಣೆ ದಿನದಂದು ಹಿಂದಿಯಲ್ಲಿ ಮಸ್ತ್ರಂ ಎಂಬ ಹೆಸರಿನ ಚಿತ್ರ ತೆರೆ ಕಾಣಲಿದೆ. ಈ ಚಿತ್ರದ ಪಾತ್ರವೊಂದು ಸವಿತಾ ಬಾಬಿಯನ್ನು ಹೋಲುತ್ತದೆ ಎಂಬ ಸುದ್ದಿ ಬಂದಿದೆ. ಪಾತ್ರದ ಹೆಸರು ಕೂಡಾ ಸವಿತಾ ಎಂದಿರುವುದರಿಂದ ಪಡ್ಡೆಗಳು ಇದು ಕಾಮಿಕ್ ಜಗತ್ತಿನ ಪೋರ್ನ್ ರಾಣಿ ಸವಿತಾ ಬಾಬಿ ಪಾತ್ರವೇ ಎಂದು ನಂಬಿ ಕೂತಿದ್ದಾರೆ.

  ಆದರೆ, ನಿರ್ಮಾಪಕ ನಿತಿನ್ ಗುಪ್ತ ಹಾಗೂ ಬೊಹ್ರಾ ಎಂಬುವರ ನಡುವಿನ ತಿಕ್ಕಾಟ ನಡೆದಿದ್ದು ಇಬ್ಬರಲ್ಲಿ ಒಬ್ಬರು ಸವಿತಾ ಪಾತ್ರವನ್ನು ಬೆಳ್ಳಿತೆರೆ ಮೇಲೆ ಪರಿಚಯಿಸುವುದಂತೂ ಗ್ಯಾರಂಟಿ. ಇಬ್ಬರು ಜೀವಂತವಿರದ 'Savita Bhabhi' ಪಾತ್ರದ ಹಕ್ಕಿಗಾಗಿ ಕಿತ್ತಾಡಿ ಇಂಡಿಯನ್ ಮೋಷನ್ ಪಿಕ್ಚರ್ಸ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್ಸ್ ಕಚೇರಿ ಬಾಗಿಲು ತಟ್ಟಿದ್ದಾರೆ. ಒಟ್ಟಾರೆ ಮಸ್ತ್ರಂ(Mastram) ಚಿತ್ರದ ಮೂಲಕವೇ ಸವಿತಾ ಬಾಬಿ ಎಂಟ್ರಿ ಕೊಡುತ್ತಾಳೋ ಮತ್ತೊಂದು ಚಿತ್ರದ ತನಕ ಕಾಯಬೇಕೋ ಗೊತ್ತಿಲ್ಲ.

  ಅಂದ ಹಾಗೆ, ಸವಿತಾ ಬಾಬಿಯನ್ನು ಬೆಳ್ಳಿತೆರೆಗೆ ತರುವ ಪ್ರಯತ್ನ 2011ರಲ್ಲೇ ಟಾಲಿವುಡ್ ನಲ್ಲಿ ನಡೆದಿತ್ತು. ಕಾಂಡೋಮ್ ಜಾಹೀರಾತು ಖ್ಯಾತಿಯ ರಮ್ಯಶ್ರೀಯನ್ನು ಸವಿತಾ ಬಾಬಿಯ ರೆಡ್ ಡ್ರೆಸ್ ನಲ್ಲಿ ತೂರಿಸಲು ಯತ್ನಿಸಲಾಯಿತು. ರಾಮ್ ಗೋಪಾಲ್ ವರ್ಮಾ ಕೂಡಾ ರೋಜ್ಲಿನ್ ಖಾನ್ ಳನ್ನು ಸವಿತಾ ಬಾಬಿಯಾಗಿ ತೆರೆಗೆ ತರುತ್ತಿದ್ದಾನೆ ಎಂಬ ಸುದ್ದಿ ಟುಸ್ ಆಯಿತು. ಹಿಂದಿಯಲ್ಲಿ ಸವಿತಾ ಪಾತ್ರದಲ್ಲಿ ಮನಿ ಮನಿ ಮನಿ ಚಿತ್ರ ಖ್ಯಾತಿಯ ತಾರಾ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ಕೊನೆಗೆ ಬಾಲಿವುಡ್ ನಲ್ಲಿ ಈಗ ಸವಿತಾ ಬಾಬಿ ಸುದ್ದಿ ಬಿಸಿಬಿಸಿಯಾಗಿ ಓಡಾಡುತ್ತಿದೆ.

  English summary
  After former porn star Sunny Leone made everyone go woo, now the famous adult cartoon character Savita Bhabhi is likely to spread her 'jalwa' in Bollywood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X