For Quick Alerts
  ALLOW NOTIFICATIONS  
  For Daily Alerts

  ಆಮ್ಲಜನಕ, ರೆಮ್‌ಡೆಸಿವಿರ್ ವಿತರಿಸುತ್ತಿರುವ ಸಿನಿತಾರೆಯರಿಗೆ ಅವು ಸಿಗುತ್ತಿರುವುದು ಎಲ್ಲಿಂದ?

  |

  ಕೋವಿಡ್‌ನ ಈ ಸಂಕಷ್ಟದ ಸಮಯದಲ್ಲಿ ಹಲವು ಸಿನಿಮಾ ತಾರೆಯರು ಸಕ್ರಿಯವಾಗಿ ಜನರ ಸಹಾಯಕ್ಕೆ ಧಾವಿಸಿದ್ದಾರೆ.

  ಆಮ್ಲಜನಕ ಸಿಲಿಂಡರ್ ವಿತರಣೆ, ಆಮ್ಲಜನಕ ಸಾಂದ್ರಕ ಯಂತ್ರಗಳ ವಿತರಣೆ, ಆಸ್ಪತ್ರೆಗಳಲ್ಲಿ ಬೆಡ್‌ ವ್ಯವಸ್ಥೆ ಮಾಡಿಕೊಡುವುದು. ಕೋವಿಡ್ ರೋಗಿಗಳಿಗೆ ಬೇಕಾದ ಔಷಧಗಳ ನೀಡಿಕೆ ಹೀಗೆ ಹಲವು ಕಾರ್ಯಗಳನ್ನು ಸಿನಿಮಾ ತಾರೆಯರು ಮಾಡುತ್ತಿದ್ದಾರೆ.

  ಇದನ್ನೆಲ್ಲ ಗಮನಿಸಿರುವ ಬಾಂಬೆ ಹೈಕೋರ್ಟ್‌, 'ಕೋವಿಡ್ ಔಷಧಗಳನ್ನು ವಿತರಣೆ ಮಾಡುತ್ತಿರುವ ಸೆಲೆಬ್ರಿಟಿಗಳಿಗೆ ಈ ಔಷಧಗಳು ಸಿಗುತ್ತಿರುವುದು ಎಲ್ಲಿಂದ ಮತ್ತು ಅವು ಎಷ್ಟು ಸುರಕ್ಷಿತ' ಎಂದು ಪ್ರಶ್ನೆ ಮಾಡಿದೆ.

  'ಜನರ ಜೀವದ ಬಗ್ಗೆ ಹೈಕೋರ್ಟ್ ಚಿಂತಿತವಾಗಿದೆ. ಪ್ರಚಾರ ಪಡೆಯುವ ಕಾರಣಕ್ಕೆ, ಅಗತ್ಯವಿರುವ ವ್ಯಕ್ತಿಗೆ ಸೇರಬೇಕಾದ ಔಷಧಗಳು ಇತರೆ ಸವಲತ್ತುಗಳು ಸೆಲೆಬ್ರಿಟಿಗಳ ಪಾಲಾಗುತ್ತಿದ್ದರೆ ಅದು ಬಹಳ ಅನ್ಯಾಯ' ಎಂದಿದ್ದಾರೆ ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಜಿಎಸ್ ಕುಲಕರ್ಣಿ ಹೇಳಿದ್ದಾರೆ.

  ಸೋನು ಸೂದ್ ಚಾರಿಟಿಗೆ ಶೋಕಾಸ್ ನೊಟೀಸ್

  ಸೋನು ಸೂದ್ ಚಾರಿಟಿಗೆ ಶೋಕಾಸ್ ನೊಟೀಸ್

  ಇದಕ್ಕೆ ಉತ್ತರಿಸಿರುವ ಮಹಾರಾಷ್ಟ್ರ ಸರ್ಕಾರವು, 'ಈ ಸಂಬಂಧ ನಾವು ಸೋನು ಸೂದ್ ಚಾರಿಟಿ ಹಾಗೂ ಕಾಂಗ್ರೆಸ್ ಶಾಸಕ ಜೀಶಾನ್ ಸಿದ್ಧಿಖಿಗೆ ಶೋಕಾಸ್ ನೊಟೀಸ್ ನೀಡಿದ್ದೇವೆ' ಎಂದುತ್ತರಿಸಿದೆ. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, 'ಈ ವೇಳೆಗಾಗಲೆ ನೀವು ಅವರ ಹೇಳಿಕೆ ದಾಖಲಿಸಿಕೊಳ್ಳಬೇಕಾಗಿತ್ತು. ಅವರ ಬಳಿ ಪರವಾನಗಿ ಇಲ್ಲ. ಆದರೂ ಔಷಧಗಳನ್ನು ವಿತರಿಸುತ್ತಿದ್ದಾರೆ' ಎಂದಿದೆ.

  ರೆಮ್‌ಡೆಸಿವಿರ್ ಔಷಧ ವಿತರಣೆ ಮಾಡಿದ್ದ ಚಿತ್ರಗಳನ್ನು ಸಲ್ಲಿಸಲಾಗಿದೆ

  ರೆಮ್‌ಡೆಸಿವಿರ್ ಔಷಧ ವಿತರಣೆ ಮಾಡಿದ್ದ ಚಿತ್ರಗಳನ್ನು ಸಲ್ಲಿಸಲಾಗಿದೆ

  ಈ ಹಿಂದಿನ ವಿಚಾರಣೆ ಸಂದರ್ಭದಲ್ಲಿಯೇ ವಕೀಲ ರಾಜೇಶ್ ಇನಾಮ್ದಾರ್ ಅವರು, ನಟ ಸೋನು ಸೂದ್ ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ಜೀಶಾನ್ ಸಿದ್ಧಿಖಿ ಹಾಗೂ ಇನ್ನಿತರರು ರೆಮ್‌ಡಿಸಿವಿರ್ ಇಂಜೆಕ್ಷನ್‌ ಅನ್ನು ವಿತರಣೆ ಮಾಡುತ್ತಿರುವ ಚಿತ್ರಗಳು, ಟ್ವೀಟ್‌ಗಳನ್ನು ಹೈಕೋರ್ಟ್‌ಗೆ ಸಲ್ಲಿಸಿದ್ದರು. ಸರ್ಕಾರದಿಂದ ಔಷಧಗಳು ಸಿಗದೇ ರೋಗಿಗಳು ಬಾಲಿವುಡ್‌ ಸೆಲೆಬ್ರಿಟಿಗಳ ಮೊರೆ ಹೋಗುತ್ತಿದ್ದಾರೆ ಎಂದು ರಾಜೇಶ್ ಹೇಳಿದ್ದರು. ಇದನ್ನು ಹೈಕೋರ್ಟ್‌ ಗಂಭೀರವಾಗಿ ಪರಿಗಣಿಸಿದೆ.

  ರೋಗಿಗಳಿಗೆ ತಲುಪಬೇಕಿದ್ದ ಔಷಧಗಳನ್ನು ಖರೀದಿಸುತ್ತಿರುವ ಸೆಲೆಬ್ರಿಟಿಗಳು?

  ರೋಗಿಗಳಿಗೆ ತಲುಪಬೇಕಿದ್ದ ಔಷಧಗಳನ್ನು ಖರೀದಿಸುತ್ತಿರುವ ಸೆಲೆಬ್ರಿಟಿಗಳು?

  ಸೋನು ಸೂದ್ ಹಾಗೂ ಇತರ ಸೆಲೆಬ್ರಿಟಿಗಳು ಆಮ್ಲಜನಕ ಸಿಲಿಂಡರ್ ವಿತರಣೆ ಮಾಡುತ್ತಿರುವ ಬಗ್ಗೆಯೂ ಇದೇ ಪ್ರಶ್ನೆಗಳು ಎದ್ದಿದ್ದವು. ಆಸ್ಪತ್ರೆಗಳನ್ನು ತಲುಪಬೇಕಿದ್ದ ಆಮ್ಲಜನಕ ಸಿಲಿಂಡರ್‌ಗಳನ್ನು ಸೆಲೆಬ್ರಿಟಿಗಳು ದೇಣಿಗೆ ಸಂಗ್ರಹಿಸಿದ ಹಣದಲ್ಲಿ ತಾವು ಖರೀದಿಸಿ ಅದನ್ನು ವಿತರಣೆ ಮಾಡಿ ಪ್ರಚಾರ ಪಡೆಯುತ್ತಿದ್ದಾರೆ ಎಂದು ಪ್ರಶ್ನಿಸಲಾಗಿತ್ತು.

  Kiccha Sudeep ಅವರ ಪ್ರೀತಿಗೆ ತಲೆಬಾಗಿದ ಸಿನಿರಂಗ | Filmibeat Kannada
  ಪರವಾನಗಿ ಇಲ್ಲದೆ ಆಮ್ಲಜನಕ, ಔಷಧ ವಿತರಣೆ

  ಪರವಾನಗಿ ಇಲ್ಲದೆ ಆಮ್ಲಜನಕ, ಔಷಧ ವಿತರಣೆ

  ಆಮ್ಲಜನಕ ವಿತರಣೆ ಮಾಡಲು ಸೂಕ್ತ ಪರವಾನಗಿ ಇರಬೇಕಾಗುತ್ತದೆ. ಆದರೆ ಹಲವು ಸೆಲೆಬ್ರಿಟಿಗಳು ಆಮ್ಲಜನಕ ಸಿಲಿಂಡರ್‌ಗಳನ್ನು ಸ್ವತಃವಾಗಿ ತಾವೇ ವಿತರಣೆ ಮಾಡಿ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ರೆಮ್‌ಡಿಸಿವಿರ್ ಗಾಗಿ ಸಹ ಸೆಲೆಬ್ರಿಟಿಗಳನ್ನು ಕೇಳಲಾಗುತ್ತಿದ್ದು, ಸೋನು ಸೂದ್, ತಾವು ಕೆಲವರಿಗೆ ರೆಮ್‌ಡಿಸಿವಿರ್ ಔಷಧ ತಲುಪಿಸಿರುವುದಾಗಿ ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ರೋಗಿಗಳಿಗೆ ಸಿಗದ ಔಷಧ ಇವರಿಗೆ ಸಿಕ್ಕಿದ್ದು ಹೇಗೆ? ಹಾಗೂ ಪರವಾನಗಿ ಇಲ್ಲದೆ ಔಷಧ ವಿತರಣೆ ಮಾಡುತ್ತಿರುವುದು ಹೇಗೆ? ಎಂಬ ಪ್ರಶ್ನೆಗಳು ಉದ್ಭವವಾಗಿವೆ.

  English summary
  Bombay high court questioned how celebrities getting Remdisivier and Oxygen cylinders whene government complaining about shortage.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X