»   » ಕಂಗನಾ ಆರೋಪಕ್ಕೆ ಹೃತಿಕ್ ತಿರುಗೇಟು: 'ಕ್ವೀನ್' ಬಗ್ಗೆ ಸ್ಫೋಟಕ ಮಾಹಿತಿ ಬಹಿರಂಗ.!

ಕಂಗನಾ ಆರೋಪಕ್ಕೆ ಹೃತಿಕ್ ತಿರುಗೇಟು: 'ಕ್ವೀನ್' ಬಗ್ಗೆ ಸ್ಫೋಟಕ ಮಾಹಿತಿ ಬಹಿರಂಗ.!

Posted By:
Subscribe to Filmibeat Kannada

ನಟ ಹೃತಿಕ್ ರೋಷನ್ ಹಾಗೂ ಕಂಗನಾ ರನೌತ್ ನಡುವಿನ ಗಲಾಟೆ ಮತ್ತೊಂದು ಹಂತ ತಲುಪಿದೆ. ಸತತ ಎರಡು ವರ್ಷಗಳಿಂದ ತುಟಿ ಬಿಚ್ಚದೇ ಮೌನವಾಗಿದ್ದ ಹೃತಿಕ್ ರೋಷನ್ ಇದೇ ಮೊದಲ ಬಾರಿ ಕಂಗನಾ ಆರೋಪದ ಬಗ್ಗೆ ಮಾತನಾಡಿದ್ದಾರೆ.

ಕ್ವೀನ್ ನಟಿ ಕಂಗನಾ ತಮ್ಮನ್ನು ಬೆಂಬಿಡದೆ ಹಿಂಸಿಸುತ್ತಿದ್ದಾರೆ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹೃತಿಕ್ ರೋಷನ್ ಆಕ್ರೋಶ ವ್ಯಕ್ತಪಡಿಸಿದ್ದು, ಇದಕ್ಕೆ ಕಂಗನಾ ಸಹೋದರಿ ರಂಗೋಲಿ ಚಂಡನ್ ತಿರುಗೇಟು ನೀಡಿದ್ದಾರೆ.

ಇದಕ್ಕೂ ಮುನ್ನ ಕಂಗನಾ ತನಗೆ ಹೃತಿಕ್ ಮತ್ತು ಅವರ ತಂದೆ ರಾಕೇಶ್ ರೋಷನ್ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ, ಕಾನೂನಿನ ಹೋರಾಟ ನಡೆಸುತ್ತಿದ್ದಾರೆ. ಹೃತಿಕ್ ಮತ್ತು ಅವರ ತಂದೆ ತಮ್ಮ ಬಳಿ ಕ್ಷಮೆ ಕೋರಬೇಕೆಂದು ಕಂಗನಾ ಹೇಳಿದ್ದರು. ಆದ್ರೆ, ಹೃತಿಕ್ ಈಗ ಕಂಗನಾರ ಆರೋಪಗಳಿಗೆ ಬಹಿರಂಗವಾಗಿ ಉತ್ತರ ನೀಡಿದ್ದಾರೆ.

ಹೃತಿಕ್ ಸಲ್ಲಿಸಿದ್ದ ದೂರಿನ ಪ್ರತಿ ಬಹಿರಂಗ

ಏಪ್ರಿಲ್ ತಿಂಗಳಲ್ಲಿ ನಟ ಹೃತಿಕ್ ರೋಷನ್ ಮುಂಬೈ ಪೋಲಿಸರಿಗೆ ಸಲ್ಲಿಸಿದ್ದ ದೂರಿನ ಪ್ರತಿ ಬಹಿರಂಗವಾಗಿದೆ. ಈ ದೂರಿನಲ್ಲಿ ಕಂಗನಾ, ನಟ ಹೃತಿಕ್ ಗೆ ಕಳುಹಿಸಿರುವ ಎಂದು ಹೇಳಲಾಗುತ್ತಿರುವ ಇ-ಮೇಲ್ ಗಳು ಕೂಡ ಬಹಿರಂಗಪಡಿಸಲಾಗಿದೆ.

ಹೃತಿಕ್ ರೋಷನ್ ಬಗ್ಗೆ ಬೆಚ್ಚಿಬೀಳಿಸುವ ಸಂಗತಿ ಬಿಚ್ಚಿಟ್ಟ ಕಂಗನಾ

ಕಂಗನಾ ಆರೋಪಕ್ಕೆ ಹೃತಿಕ್ ತಿರುಗೇಟು

ಹೃತಿಕ್ ಗೆ ನನ್ನ ಜೊತೆ ಆಪ್ತ ಸಂಬಂಧವಿತ್ತು. ಅವರ ತಂದೆ ಮತ್ತು ಹೃತಿಕ್ ನನಗೆ ಕಿರುಕುಳ ನೀಡಿದ್ದಾರೆ ಎಂದು ಕಂಗನಾ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಹೃತಿಕ್ ಪುಟಗಟ್ಟಲೇ ಉತ್ತರ ಕೊಟ್ಟಿದ್ದಾರೆ.

ಆ ಮಹಿಳೆಗೂ ನನಗೂ ಆಪ್ತ ಸಂಬಂಧವಿಲ್ಲ

''ನನ್ನನ್ನು ಪ್ರಶ್ನಿಸುವ ಮಹಿಳೆಯನ್ನು ನಾನು ಖಾಸಗಿಯಾಗಿ ಭೇಟಿಯಾಗಲಿಲ್ಲ. ನಾವು ಅನೇಕ ಸಿನಿಮಾಗಳಿಗೆ ಒಟ್ಟಿಗೆ ಕೆಲಸ ಮಾಡಿರಬಹುದು. ಈ ಆರೋಪದ ವಿರುದ್ಧ ನಾನು ಹೋರಾಟ ಮಾಡುತ್ತಿಲ್ಲ. ಅಥವಾ ನಾನೊಬ್ಬ ಒಳ್ಳೆ ಮನುಷ್ಯ ಎಂದು ಭಾವನೆ ಮೂಡಿಸಲು ಚಿಕ್ಕ ಮಕ್ಕಳಂತೆ ಪ್ರಯತ್ನಿಸುತ್ತಿಲ್ಲ. ನನಗೆ ನನ್ನ ತಪ್ಪೇನೆಂಬುದು ಗೊತ್ತು. ನಾನು ಒಬ್ಬ ಮನುಷ್ಯ'' ಎಂದು ಮನಬಿಚ್ಚಿ ಮಾತನಾಡಿದ್ದಾರೆ.

'ಪ್ಯಾರಿಸ್ ಪ್ರಣಯ'ದ ಕಹಾನಿ ಲೀಕ್

ಇನ್ನು 2014 ರಲ್ಲಿ ಪ್ಯಾರಿಸ್ ನಲ್ಲಿ ಹೃತಿಕ್ ನನಗೆ ಪ್ರಪೋಸ್ ಮಾಡಿದ್ದರು ಎಂದು ಆರೋಪಿಸಿದ್ದ ಕಂಗನಾ ಗೆ ಹೃತಿಕ್ ಉತ್ತರಿಸಿದ್ದಾರೆ. ''2014ರಲ್ಲಿ ಪ್ಯಾರಿಸ್ ನಲ್ಲಿ ನಡೆದಿದೆ ಎನ್ನಲಾದ ಘಟನೆಗೆ ಸಂಬಂಧಪಟ್ಟಂತೆ ಯಾವುದೇ ಸಾಕ್ಷಿಗಳಿಲ್ಲ. ನಮ್ಮ ಮಧ್ಯೆ ರೊಮ್ಯಾಂಟಿಕ್ ಸಂಬಂಧಗಳಿದ್ದವು ಎಂಬುದಕ್ಕೆ ಯಾವುದೇ ಕುರುಹುಗಳಿಲ್ಲ. 2014 ಜನವರಿಯಲ್ಲಿ ನಾನು ವಿದೇಶಕ್ಕೆ ಹೋಗಿಲ್ಲ ಎಂದು ನನ್ನ ಪಾಸ್ ಪೋರ್ಟ್ ಚೆಕ್ ಮಾಡಿದರೇ ಗೊತ್ತಾಗುತ್ತೆ'' ಎಂದು ಸಮರ್ಥಿಸಿಕೊಂಡಿದ್ದಾರೆ.

ಕಂಗನಾ ಲ್ಯಾಪ್ ಟ್ಯಾಪ್ ವಶಕ್ಕೆ ಪಡೆಯಲಿ

ಕಂಗನಾ ಇ ಮೇಲ್ ರವಾನೆಯಾದ ಬಗ್ಗೆ ಮಾಡಿರುವ ಆರೋಪಕ್ಕೆ ಸಂಬಂಧಪಟ್ಟಂತೆ, ನನ್ನ ಕಂಪ್ಯೂಟರ್ ನಿಂದ ಸುಮಾರು 3,000 ಮೇಲ್ ಗಳು ಹೋಗಿವೆ. ಅವುಗಳಲ್ಲಿ ಆರೋಪ ಮಾಡುತ್ತಿರುವವರಿಗೂ ಕಳುಹಿಸಿದ್ದಿದೆ. ನನ್ನ ಲ್ಯಾಪ್ ಟಾಪ್, ಫೋನ್ ಗಳನ್ನು ಸೈಬರ್ ಅಪರಾಧ ಇಲಾಖೆಗೆ ನೀಡಿದ್ದೇನೆ. ಅವರು ತೀರ್ಮಾನ ಮಾಡುತ್ತಾರೆ. ಆದರೆ ಆರೋಪ ಮಾಡುತ್ತಿರುವ ಮಹಿಳೆ ತಮ್ಮ ಬಳಿಯ ಲ್ಯಾಪ್ ಟಾಪ್, ಫೋನ್ ಗಳನ್ನು ಪೊಲೀಸರಿಗೆ ಏಕೆ ನೀಡುತ್ತಿಲ್ಲ ಎಂದು'' ಹೃತಿಕ್ ಪ್ರಶ್ನಿಸಿದ್ದಾರೆ.

ಬೆಂಬಿಡದೆ ಹಿಂಸಿಸುತ್ತಿದ್ದಾರೆ

ಕಳೆದ 4 ವರ್ಷಗಳಿಂದ ಸತತವಾಗಿ ಈ ವಿಷಯ ಕುರಿತು ನನ್ನನ್ನು ಹಿಂಸಿಸಲಾಗುತ್ತಿದೆ. ಸಮಾಜದಲ್ಲಿ ಮಹಿಳೆಯರ ಪರವಾದ ವಾದ, ಬೇಧಭಾವ ನನ್ನನ್ನು ರಕ್ಷಿಸಿಕೊಳ್ಳಲು ಅಸಹಾಯಕನನ್ನಾಗಿ ಮಾಡಿದೆ. ನನ್ನ ಜೀವನದಲ್ಲಿ ಇಲ್ಲಿಯವರೆಗೆ ಯಾವೊಬ್ಬ ಮಹಿಳೆ ಅಥವಾ ಪುರುಷನ ಜೊತೆ ಜಗಳವಾಡಿಲ್ಲ. ನನ್ನ ವಿಚ್ಛೇದನದಲ್ಲಿ ಕೂಡ ಜಗಳವಾಗಿಲ್ಲ. ನಾನು ಮತ್ತು ನನ್ನ ಸುತ್ತಮುತ್ತಲಿರುವವರು ಸಮಾಧಾನ, ಶಾಂತಿಯನ್ನೇ ಬಯಸಿದ್ದಾರೆ. ಇಲ್ಲಿ ನಾನು ಯಾರನ್ನೂ ಆರೋಪಿಸುತ್ತಿಲ್ಲ ಮತ್ತು ಯಾರ ಬಗ್ಗೆಯೂ ತೀರ್ಪು ನೀಡುತ್ತಿಲ್ಲ. ಆದರೆ ನನ್ನ ಸತ್ಯವನ್ನು ರಕ್ಷಿಸಬೇಕಾಗಿದೆ ಎಂದಿದ್ದಾರೆ.

ಹೃತಿಕ್ ಟ್ವೀಟ್ ಗೆ 'ರಂಗೋಲಿ' ಖಂಡನೆ

ಇಷ್ಟೆಲ್ಲಾ ವಿಷ್ಯವನ್ನ ಪ್ರಸ್ತಾಪಿಸಿರುವ ನಟ ಹೃತಿಕ್ ವಿರುದ್ಧ ಕಂಗನಾ ಸಹೋದರಿ ರಂಗೋಲಿ ಚಂಡೆಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ''ಎಲ್ಲರಿಗೂ ಗೊತ್ತು ಯಾರು ಯಾರ ಹಿಂದೆ ಬಿದ್ದಿದ್ದರು ಅಂತ. ಕಂಗನಾಳ ಬಗ್ಗೆ ಚಿಂತಿಸುವುದನ್ನ ಬಿಟ್ಟುಬಿಡು. ಅವಳು ನಿನಗಿಂತ ಎಷ್ಟೋ ಮುಂದೆ ಸಾಗಿದ್ದಾಳೆ. ಅಂಕಲ್ ನೀನು ನಿನ್ನ ಮಕ್ಕಳು ಮತ್ತು ಪತ್ನಿಯ ಬಗ್ಗೆ ಗಮನಹರಿಸು'' ಎಂದು ವ್ಯಂಗ್ಯ ಮಾಡಿದ್ದಾರೆ.

English summary
Actor Hrithik Roshan on Thursday broke his silence on the dragging row with actress Kangana Ranaut.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada