For Quick Alerts
  ALLOW NOTIFICATIONS  
  For Daily Alerts

  ಹೃತಿಕ್ vs ಟೈಗರ್ : ಏನಿದು ಹೊಸ ಫೈಟ್.?

  By Bharath Kumar
  |

  ಹೃತಿಕ್ ರೋಷನ್ ವರ್ಸಸ್ ಕಂಗನಾ ರನೌತ್ ಇರಬೇಕಾದ ಜಾಗದಲ್ಲಿ ಹೃತಿಕ್ ವರ್ಸಸ್ ಟೈಗರ್ ಹೆಸರಿದೆ ಎಂದು ಅಚ್ಚರಿ ಪಡಬೇಡಿ. ಹೃತಿಕ್ ವರ್ಸಸ್ ಟೈಗರ್ ಗೂ ಮತ್ತು ಕಂಗನಾಗೂ ಯಾವುದೇ ಸಂಬಂಧವಿಲ್ಲ. ಇದು ಬೇರೆಯೇ ಕಥೆ.

  'ಹೃತಿಕ್ ವರ್ಸಸ್ ಟೈಗರ್' ಈ ಹ್ಯಾಷ್ ಟ್ಯಾಗ್ ಸದ್ಯ ಟ್ವಿಟ್ಟರ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ಇವರಿಬ್ಬರು ಒಟ್ಟಿಗೆ ಮಾಡ್ತಿರುವ ಸಿನಿಮಾ. ಇತ್ತೀಚಿಗಷ್ಟೆ ಹೃತಿಕ್ ಹಾಗೂ ಟೈಗರ್ ಶ್ರಾಫ್ ಜೋಡಿಯ ಸಿನಿಮಾ ಸೆಟ್ಟೇರಿದೆ.

  ಯಶ್ ರಾಜ್ ಬ್ಯಾನರ್ ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಸಿದ್ಧಾರ್ಥ್ ಆನಂದ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹೃತಿಕ್, ಟೈಗರ್ ಜೊತೆಯಲ್ಲಿ ವಾನಿ ಕಪೂರ್ ಕಾಣಿಸಿಕೊಳ್ಳುತ್ತಿದ್ದಾರೆ.

  'ಟೈಗರ್ ಶ್ರಾಫ್'ಗೆ ಜಬರ್ ದಸ್ತ್ ಬಿರುದು ನೀಡಿದ ಹೃತಿಕ್-ಅಕ್ಷಯ್ 'ಟೈಗರ್ ಶ್ರಾಫ್'ಗೆ ಜಬರ್ ದಸ್ತ್ ಬಿರುದು ನೀಡಿದ ಹೃತಿಕ್-ಅಕ್ಷಯ್

  ಚಿತ್ರದ ಕಥೆ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಡದ ಚಿತ್ರತಂಡ ರಿಲೀಸ್ ಡೇಟ್ ಕೂಡ ಘೋಷಣೆ ಮಾಡಿದೆ. ಗಾಂಧಿಜಯಂತಿ ಪ್ರಯುಕ್ತ 2019ರ ಅಕ್ಟೋಬರ್ 2 ರಂದು ಈ ಸಿನಿಮಾ ಮಾಡಲು ನಿರ್ಧರಿಸಿದೆ.

  ಸದ್ಯಕ್ಕೆ ಕಲಾವಿದರನ್ನ ಆಯ್ಕೆ ಮಾಡಿಕೊಂಡಿರುವ ಸಿನಿಮಾತಂಡ ಚಿತ್ರಕ್ಕೆ ಹೆಸರು ಇಟ್ಟಿಲ್ಲ. ಬಟ್, ಈ ಸಿನಿಮಾದಲ್ಲಿ ಟೈಗರ್ ಶ್ರಾಫ್ ಗೆ ಮೆಂಟರ್ ಆಗಿ ಹೃತಿಕ್ ರೋಷನ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಆದ್ರೆ, ಯಾವ ಆಟದಲ್ಲಿ ಅಥವಾ ಯಾವ ವಿಭಾಗದಲ್ಲಿ ಮೆಂಟರ್ ಎನ್ನುವುದು ಕುತೂಹಲ ಮೂಡಿಸಿದೆ.

  ವಿಶೇಷ ಅಂದ್ರೆ, ಟೈಗರ್ ಶ್ರಾಫ್ ಗೆ ಹೃತಿಕ್ ರೋಷನ್ ನಿಜ ಜೀವನದಲ್ಲೂ ಗಾಢ್ ಫಾದರ್. ಹೀಗಾಗಿ, ಗುರು ಶಿಷ್ಯರ ಕಾಂಬಿನೇಷನ್ ನಲ್ಲಿ ಬರಲಿರುವ ಈ ಸಿನಿಮಾದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿದೆ.

  English summary
  Actors Hrithik Roshan and Tiger Shroff shared the first picture from their upcoming untitled film together. The film will also star Vaani Kapoor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X