»   » ಮಾಜಿ ಪತ್ನಿಗೆ ಹೃತಿಕ್ ರೋಷನ್ ಕೊಟ್ರು ಭರ್ಜರಿ ಉಡುಗೊರೆ

ಮಾಜಿ ಪತ್ನಿಗೆ ಹೃತಿಕ್ ರೋಷನ್ ಕೊಟ್ರು ಭರ್ಜರಿ ಉಡುಗೊರೆ

Posted By:
Subscribe to Filmibeat Kannada

ಖ್ಯಾತ ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ಮಾಜಿ ಪತ್ನಿ ಸುಸೇನ್ ಖಾನ್ ಇಬ್ಬರು ಮತ್ತೆ ಒಂದಾಗುತ್ತಿದ್ದಾರ....? ಇಂತಾಹದೊಂದು ಪ್ರಶ್ನೆ ಈಗ ಬಾಲಿವುಡ್ ನಲ್ಲಿ ಕೇಳಿ ಬರುತ್ತಿದೆ.

ತಮ್ಮ ಬಾಲ್ಯದ ಗೆಳತಿ ಸುಸೇನ್ ಖಾನ್ ರನ್ನು ಪ್ರೀತಿಸಿ ವಿವಾಹವಾಗಿದ್ದ ನಟ ಹೃತಿಕ್, ನಂತರ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಚೇದನ ಪಡೆದಿದ್ದರು. ಆದ್ರೆ, ವಿಚ್ಚೇದನದ ನಂತರವೂ ಇಬ್ಬರು ಒಟ್ಟಾಗಿ ಓಡಾಡುತ್ತಿದ್ದಾರಂತೆ. ಒಬ್ಬರ ಬಗ್ಗೆ ಮತ್ತೊಬ್ಬರ ಹೆಚ್ಚು ಕಾಳಜಿ ವಹಿಸುತ್ತಿದ್ದಾರಂತೆ. ಮಕ್ಕಳ ಹುಟ್ಟು ಹಬ್ಬ, ರಜಾ ದಿನಗಳಂದು ಅವರುಗಳ ಜೊತೆ ಕಾಲ ಕಳೆಯುವುದನ್ನು ನಟ ಹೃತಿಕ್ ಮಿಸ್ ಮಾಡಿಕೊಳ್ಳುವುದಿಲ್ಲವಂತೆ. ಈ ಬೆಳವಣಿಗೆಗಳು ಈಗ ಇಬ್ಬರು ಮತ್ತೆ ಒಂದಾಗುತ್ತಾರಾ ಎಂಬ ಪ್ರಶ್ನೆ ಮೂಡಿಸಿದೆ.

Hrithik Roshan Buys A New House for Ex-Wife Sussanne Khan

ಇನ್ನು ಇದಕ್ಕೆ ಪುಷ್ಠಿ ಕೊಡುವಂತೆ, ನಟ ಹೃತಿಕ್ ರೋಷನ್ ತಮ್ಮ ಮಾಜಿ ಪತ್ನಿಗೆ ತಮ್ಮ ಮನೆ ಸಮೀಪದಲ್ಲಿಯೇ ಸುಮಾರು 25 ಕೋಟಿ ರೂ.ಬೆಲೆ ಬಾಳುವ ಬಂಗಲೆಯನ್ನ ಖರೀದಿಸಿ ಗಿಫ್ಟ್ ನೀಡಿದ್ದಾರಂತೆ.

ನಟ ಹೃತಿಕ್ ಮತ್ತು ಸುಸೇನ್ ಖಾನ್ ಒಂದಾಗುವ ಕುರಿತು ಪ್ರತಿಕ್ರಿಯೆ ನೀಡಿರುವ ಸುಸೇನ್, ಪರಸ್ಪರ ಒಪ್ಪಿಗೆ ಮೇರೆಗೆ ಬೇರ್ಪಟ್ಟಿದ್ದೇವೆ. ಆದರೆ ಈಗಲೂ ಉತ್ತಮ ಸ್ನೇಹಿತರಾಗಿದ್ದು, ಹಾಗೆಯೇ ಮುಂದುವರೆಯುತ್ತೇವೆ ಎಂದಿದ್ದಾರೆ. ಸುಮ್ಮನೆ ವಂದಂತಿಗಳನ್ನ ಹಬ್ಬಿಸಬೇಡಿ ಎಂದು ಟ್ವೀಟ್ ಮಾಡುವ ಮೂಲಕ ಈ ಅಂತೆ ಕಂತೆಗಳನ್ನ ಅಲ್ಲೆಗಳೆದಿದ್ದಾರೆ.

English summary
Hrithik Roshan buys a new house for ex-wife Sussanne Khan, Closer to his Own
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada