»   » ಹಾಲಿವುಡ್ ಗೆ ಬಾಲಿವುಡ್ ಡ್ರೀಮ್ ಬಾಯ್ ಹೃತಿಕ್

ಹಾಲಿವುಡ್ ಗೆ ಬಾಲಿವುಡ್ ಡ್ರೀಮ್ ಬಾಯ್ ಹೃತಿಕ್

Posted By:
Subscribe to Filmibeat Kannada

'ಕಹೋ ನಾ ಪ್ಯಾರ್ ಹೇ' ಚಿತ್ರದ ಮೂಲಕ ಬಾಲಿವುಡ್ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್. ಕಟ್ಟುಮಸ್ತು ದೇಹ, ಕಣ್ಣಲ್ಲಿ ಕಾಡ್ಗಿಚ್ಚಿರುವ ಹೃತಿಕ್ ರೋಷನ್ ಕೋಟ್ಯಾಂತರ ಹುಡುಗೀರ ಡ್ರೀಮ್ ಬಾಯ್.

'ಅಗ್ನೀಪತ್', 'ಕ್ರಿಷ್ 3', 'ಬ್ಯಾಂಗ್ ಬ್ಯಾಂಗ್' ಸೇರಿದಂತೆ ಬ್ಯಾಕ್ ಟು ಬ್ಯಾಕ್ ಹಿಟ್ಸ್ ಕೊಡುತ್ತಲೇ ಬಂದಿರುವ ಹೃತಿಕ್ ರೋಷನ್ ಇದೇ ವರ್ಷ ಹಾಲಿವುಡ್ ಅಂಗಳಕ್ಕೆ ಕಾಲಿಡಲಿದ್ದಾರೆ. ಬಾಲಿವುಡ್ ಮತ್ತು ಹಾಲಿವುಡ್ ನಲ್ಲಿ 'ಗ್ರೀಕ್ ಗಾಡ್' ಅಂತಲೇ ಜನಪ್ರಿಯರಾಗಿರುವ ಹೃತಿಕ್ ರೋಷನ್, ವರ್ಷಗಳ ಹಿಂದೆಯೇ ಹಾಲಿವುಡ್ ಗೆ ಹಾರಬೇಕಿತ್ತು. [ಬ್ಯಾಂಗ್ ಬ್ಯಾಂಗ್ ಬಾಕ್ಸಾಫೀಸ್ ನಲ್ಲಿ ಧೂಳ್ ಧೂಳ್]

Hrithik Roshan confirms his Hollywood Debut

'ಪಿಂಕ್ ಪ್ಯಾಂಥರ್-2' ಸೇರಿದಂತೆ ಅನೇಕ ಹಾಲಿವುಡ್ ಆಫರ್ ಗಳನ್ನ ರಿಜೆಕ್ಟ್ ಮಾಡಿದ್ದ ಹೃತಿಕ್ ರೋಷನ್, ಕೊನೆಗೂ ಆಂಗ್ಲ ಚಿತ್ರವೊಂದನ್ನ ಒಪ್ಪಿಕೊಂಡಿದ್ದಾರೆ. ''ಈ ವರ್ಷ ನನ್ನ ಹಾಲಿವುಡ್ ಸಿನಿಮಾಗೆ ಚಾಲನೆ ಸಿಗಲಿದೆ'' ಅಂತ ಖುದ್ದು ಹೃತಿಕ್ ರೋಷನ್ ಕನ್ಫರ್ಮ್ ಮಾಡಿದ್ದಾರೆ. [ನಟ ಹೃತಿಕ್ ರೋಷನ್ ಬಾಳಲ್ಲಿ ಹೊಸ ನಟಿ ಎಂಟ್ರಿ]

ಅಷ್ಟುಬಿಟ್ಟರೆ, ಹಾಲಿವುಡ್ ಚಿತ್ರದ ನಿರ್ದೇಶಕ, ಪಾತ್ರವರ್ಗ, ತಂತ್ರಜ್ಞರ ಕುರಿತು ಹೃತಿಕ್ ಹೆಚ್ಚಾಗಿ ಮಾತನಾಡಿಲ್ಲ. ಈಗ ಆಶುತೋಷ್ ಗೌರೀಕರ್ ನಿರ್ದೇಶನದ 'ಮೊಹೆನ್ಜೊ ದಾರೋ' ಚಿತ್ರದಲ್ಲಿ ಬಿಜಿಯಾಗಿರುವ ಹೃತಿಕ್, ಚಿತ್ರ ಕಂಪ್ಲೀಟ್ ಆದ ತಕ್ಷಣ ಹಾಲಿವುಡ್ ಗೆ ಹಾರಲಿದ್ದಾರೆ.

English summary
Bollywood Actor Hrithik Roshan has finally confirmed his Hollywood Debut. According to the reports, Hrithik Roshan will give kick start to his Hollywood project this year.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada