Don't Miss!
- Sports
ಮುಂದುವರಿದ ಶುಬ್ಮನ್ ಅಬ್ಬರ: ಏಕದಿನ ಕ್ರಿಕೆಟ್ನಲ್ಲಿ ಗಿಲ್ ನಾಲ್ಕನೇ ಶತಕ
- News
ರೈಲು ಹಳಿ ಬಳಿ ಟೆಡ್ಡಿ ಬೇರ್ ಉಡುಪಿನಲ್ಲಿ ಡ್ಯಾನ್ಸ್ ಮಾಡಿದ ಭೂಪ: ವೈರಲ್ ವಿಡಿಯೋ
- Automobiles
ವಿಚಿತ್ರ ಆಫರ್ ಘೋಷಿಸಿದ ಫೋರ್ಡ್: ಈ ಕಾರಿನ ಬುಕಿಂಗ್ ರದ್ದು ಮಾಡಿಕೊಂಡರೆ 2 ಲಕ್ಷ ರೂ. ನಗದು
- Technology
ಸ್ಪ್ಯಾಮ್ ಕರೆಗಳನ್ನು ನಿರ್ಬಂಧಿಸುವುದು ಹೇಗೆ ಗೊತ್ತಾ?..ಈ ಕ್ರಮಗಳನ್ನು ಅನುಸರಿಸಿ!
- Lifestyle
ಬೆಂಗಳೂರಿಗರಲ್ಲಿ ಹೆಚ್ಚಾಗುತ್ತಿದೆ ವಿಟಮಿನ್ ಡಿ ಕೊರತೆ, ಕಾರಣವೇನು?
- Finance
10 ಗ್ರಾಂ ಚಿನ್ನದ ಬೆಲೆ 113 ರೂ, ಅಚ್ಚರಿ ಆಯ್ತ, ವೈರಲ್ ಸುದ್ದಿ ಓದಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಪ್ರಭಾಸ್ ಮುಂದೆ ಹೃತಿಕ್ ರೋಷನ್ ಏನೇನೂ ಅಲ್ಲ' ಎಂದಿದ್ದ ರಾಜಮೌಳಿ: 15 ವರ್ಷ ಬಳಿಕ ಪ್ರತಿಕ್ರಿಯೆ!
ಮೂವಿ ಮಾಂತ್ರಿಕ ರಾಜಮೌಳಿ ಖುಷಿಯ ಅಲೆಯಲ್ಲಿ ತೇಲಾಡುತ್ತಿದ್ದಾರೆ.RRR ಸಿನಿಮಾದ 'ನಾಟು ನಾಟು' ಹಾಡು ಬೆಸ್ಟ್ ಒರಿಜಿನಲ್ ಸಾಂಗ್ ಕ್ಯಾಟಗರಿಯಲ್ಲಿ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದೆ. ಈ ಅಂತರಾಷ್ಟ್ರೀಯ ಪ್ರಶಸ್ತಿ ಗೆದ್ದ ಬಳಿಕ ಜಕ್ಕಣ್ಣ ಫುಲ್ ಖುಷಿಯಾಗಿದ್ದಾರೆ.
ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದ ಬಳಿಕ ರಾಜಮೌಳಿ ಸಾಕಷ್ಟು ಸಂದರ್ಶನಗಳನ್ನು ನೀಡಿದ್ದಾರೆ. ಇದರಲ್ಲೊಂದು ಹೃತಿಕ್ ರೋಷನ್ ಬಗ್ಗೆ 15 ವರ್ಷಗಳ ಹಿಂದೆ ನೀಡಿದ್ದ ಹಳೆ ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇದೇ ವೇಳೆ ರಾಜಮೌಳಿಯ ಎರಡು ವಿಡಿಯೋಗಳು ವೈರಲ್ ಆಗಿವೆ. ಒಂದು "RRR ಬಾಲಿವುಡ್ ಸಿನಿಮಾ ಅಲ್ಲ" ಎಂದಿರೋ ವಿಡಿಯೋ. ಇನ್ನೊಂದು 'ಪ್ರಭಾಸ್ ಮುಂದೆ ಹೃತಿಕ್ ರೋಷನ್ ಏನೇನೂ ಅಲ್ಲ' ಎಂದು ಹೇಳಿಕೆ ಪ್ರತಿಕ್ರಿಯಿಸಿದ ವಿಡಿಯೋ. ಈ ಎರಡೂ ವಿಡಿಯೋ ಈ ವೈರಲ್ ಆಗುತ್ತಿದೆ. ಅಷ್ಟಕ್ಕೂ ಈ ವಿಡಿಯೋಗಳಲ್ಲಿ ರಾಜಮೌಳಿ ಹೇಳಿದ್ದೇನು?

15 ವರ್ಷದ ವಿಡಿಯೋ ವೈರಲ್
ಸುಮಾರು 15 ವರ್ಷಗಳ ಹಿಂದೆ ರಾಜಮೌಳಿ 'ಬಿಲ್ಲ' ಸಿನಿಮಾ ಇವೆಂಟ್ ಒಂದರಲ್ಲಿ ಹೃತಿಕ್ ರೋಷನ್ ಬಗ್ಗೆ ಹೇಳಿಕೆ ನೀಡಿದ್ದರು. ಆ ವಿಡಿಯೋ ಇದೇ ಸಂದರ್ಭದಲ್ಲಿ ವೈರಲ್ ಆಗಿತ್ತು. ಆ ವಿಡಿಯೋದಲ್ಲಿ ರಾಜಮೌಳಿ "ಪ್ರಭಾಸ್ ಮುಂದೆ ಹೃತಿಕ್ ರೋಷನ್ ಏನೆನೂ ಅಲ್ಲ" ಎಂದಿದ್ದರು. ಈ ವಿಡಿಯೋಗೆ ಹಲವು ನೆಟ್ಟಿಗರು ಜಕ್ಕಣ್ಣನ ವಿರುದ್ಧ ಕಮೆಂಟ್ ಮಾಡಿದ್ದರು. ಆ ವಿಡಿಯೋ ಬಗ್ಗೆ ರಾಜಮೌಳಿ ಈಗ ಸ್ಪಷ್ಟನೆ ಕೊಟ್ಟಿದ್ದಾರೆ.

ಹೃತಿಕ್ ಬಗ್ಗೆ ರಾಜಮೌಳಿ ಏನು ಹೇಳಿದ್ದರು?
" ಎರಡು ವರ್ಷದ ಹಿಂದೆ ಧೂಮ್ 2 ತೆರೆಕಂಡಾಗ ನನಗೆ ಅಚ್ಚರಿಯಾಗಿತ್ತು. ಬರೀ ಬಾಲಿವುಡ್ ಮಂದಿ ಇಂತಹ ಕ್ವಾಲಿಟಿ ಸಿನಿಮಾವನ್ನು ಏಕೆ ಮಾಡುತ್ತಾರೆ ಎಂದುಕೊಂಡಿದ್ದೆ. ನಮ್ಮ ಹೃತಿಕ್ ರೋಷನ್ ಅಂತಹ ಹೀರೊ ಇಲ್ಲವೇ? ನಾನು ಈಗಷ್ಟೇ ಬಿಲ್ಲ ಸಾಂಗ್, ಪೋಸ್ಟರ್ ಹಾಗೂ ಟ್ರೈಲರ್ ಅನ್ನು ನೋಡಿದ್ಮೇಲೆ ನಾನು ಒಂದೇ ಮಾತು ಹೇಳುತ್ತೇನೆ. ಪ್ರಭಾಸ್ ಮುಂದೆ ಹೃತಿಕ್ ರೋಷನ್ ಏನೇನೂ ಅಲ್ಲ. ತೆಲುಗು ಚಿತ್ರರಂಗವನ್ನು ಹಾಲಿವುಡ್ ಲೆವೆಲ್‌ಗೆ ತೆಗೆದುಕೊಂಡು ಹೋಗಿದ್ದಕ್ಕೆ ಮೆಹೆರ್ ರಮೇಶ್ (ನಿರ್ದೇಶಕ)ಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ." ಎಂದಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ರಾಜಮೌಳಿ ಸ್ಪಷ್ಟನೆ ನೀಡಿದ್ದಾರೆ.

ರಾಜಮೌಳಿ ಸ್ಪಷ್ಟನೆ ಏನು?
RRR ಸಿನಿಮಾದ 'ನಾಟು ನಾಟು' ಹಾಡು ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ಸ್ ಅವಾರ್ಡ್ ಗಿಟ್ಟಿಸಿಕೊಳ್ಳುತ್ತಿದ್ದಂತೆ ರಾಜಮೌಳಿಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅದಕ್ಕೆ ರಾಜಮೌಳಿ ಈಗ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. "ಇದು ತುಂಬಾ ಹಳೆಯ ಮಾತು. 1515 ವರ್ಷದ ಹಿಂದೆ ಇರಬಹುದು.ಹೌದು.. ನಾನು ಆಯ್ಕೆ ಮಾಡಿಕೊಂಡ ಪದಗಳು ಉತ್ತಮವಾಗಿರಲಿಲ್ಲ. ಅದನ್ನು ನಾನು ಒಪ್ಪಿಕೊಳ್ಳಲೇಬೇಕು. ಅವರನ್ನು ಘನತೆಯನ್ನು ಕೆಳಗಿಳಿಸುವುದು ನನ್ನ ಉದ್ದೇಶವಾಗಿರಲಿಲ್ಲ. ಅವರನ್ನು ತುಂಬಾನೇ ಗೌರವಿಸುತ್ತೇನೆ." ಎಂದು ರಾಜಮೌಳಿ ಸ್ಪಷ್ಟನೆ ನೀಡಿದ್ದಾರೆ.
#RRR is NOT a Bollywood film
— 🇮🇳Änkïtä - sëlf SüFFïcïent 🧚♀️🦋💫❤✨ (notesonwisdom) January 14, 2023
It’s a TELUGU FILM from the south of India where I come from🔥#Bollywood creep doesn't even hv that visionary to script🤣
They copies all contents from Tollywood & hollywood and all Their stories, VFX, senses & even D costumes r copied 🤣#BoycottBW pic.twitter.com/gP4ZdFswIU
'RRR ಬಾಲಿವುಡ್ ಸಿನಿಮಾ ಅಲ್ಲ'
ಇದೇ ವೇಳೆ ರಾಜಮೌಳಿ "RRR ಬಾಲಿವುಡ್ ಸಿನಿಮಾ ಅಲ್ಲ. ಇದು ದಕ್ಷಿಣ ಭಾರತದ ತೆಲುಗು ಸಿನಿಮಾ. ಅಲ್ಲಿಂದಲೇ ನಾನು ಬಂದಿದ್ದೇನೆ. ನಾನು ಸಿನಿಮಾದ ಕಥೆ ನಿಲ್ಲುವುದಕ್ಕಿಂತ ಮುಂದುವರೆಸಲು ಹಾಡಗಳನ್ನು ಬಳಸುತ್ತೇನೆ.ಇದನ್ನು ಕಥೆಯನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು ಬಳಸುತ್ತೇನೆ." ಎಂದು ಹೇಳಿದ್ದಾರೆ. ಇಲ್ಲಿ 'RRR ಬಾಲಿವುಡ್ ಸಿನಿಮಾ ಅಲ್ಲ' ಎಂದಿದ್ದಕ್ಕೆ ನೆಟ್ಟಿಗರು ರಾಜಮೌಳಿ ಮೇಲೆ ಬೇಸರ ಪಟ್ಟುಕೊಂಡಿದ್ದಾರೆ.