»   » ಹಾಲಿವುಡ್ ಗೆ ಜಿಗಿಯಲಿದೆ ಹೃತಿಕ್ ರೋಷನ್ ಸಿನಿಮಾ!

ಹಾಲಿವುಡ್ ಗೆ ಜಿಗಿಯಲಿದೆ ಹೃತಿಕ್ ರೋಷನ್ ಸಿನಿಮಾ!

Posted By:
Subscribe to Filmibeat Kannada

ಬಾಲಿವುಡ್ ಗ್ರೀಕ್ ಗಾಡ್ ಹೃತಿಕ್ ರೋಷನ್ ಅಭಿನಯದ 'ಕಾಬಿಲ್' ಚಿತ್ರ ಬಾಲಿವುಡ್ ನಲ್ಲಿ ಸೌಂಡ್ ಮಾಡಿದ್ದು ಅಷ್ಟಕ್ಕಷ್ಟೇ. ಆದ್ರೆ, ಈ ಚಿತ್ರವೀಗ ಹಾಲಿವುಡ್ ಗೆ ರೀಮೇಕ್ ಆಗಲು ಸಜ್ಜಾಗಿದೆ. ಹೌದು, ಎಲ್ಲ ಅಂದುಕೊಂಡಂತೆ ಆದ್ರೆ, ಹೃತಿಕ್ ಸಿನಿಮಾ ಹಾಲಿವುಡ್ ಅಂಗಳದಲ್ಲಿ ರಾರಾಜಿಸಲಿದೆ.

ಹಾಲಿವುಡ್ ನ ಖ್ಯಾತ ನಿರ್ಮಾಣ (20th Century Fox) ಸಂಸ್ಥೆ 'ಕಾಬಿಲ್' ಚಿತ್ರವನ್ನ ಇಂಗ್ಲೀಷ್ ನಲ್ಲಿ ರೀಮೇಕ್ ಮಾಡಲು ಮುಂದಾಗಿದ್ದು, ಈ ಬಗ್ಗೆ ನಟ ಹೃತಿಕ್ ರೋಷನ್ ಬಳಿ ಚರ್ಚಿಸಿದ್ದಾರೆ ಎಂದು ಚಿತ್ರದ ನಿರ್ದೇಶಕ ಸಂಜಯ್ ಗುಪ್ತ ತಿಳಿಸಿದ್ದಾರೆ.

Hrithik Roshan’s Kaabil to have a Hollywood Remake

'ಕಾಬಿಲ್' ಚಿತ್ರಕ್ಕೆ ಈ ಆಫರ್ ಬಂದಿರುವುದು ನಮ್ಮ ಚಿತ್ರತಂಡಕ್ಕೆ ಸಿಕ್ಕಿದ ಗೌರವ. 2017ನೇ ಸಾಲಿನ ಆನ್ ಲೈನ್ ಸರ್ವೆಯಲ್ಲಿ 'ಕಾಬಿಲ್' ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿತ್ತು. ಈಗ ಹಾಲಿವುಡ್ ರೀಮೇಕ್ ಆಫರ್ ಬಂದಿರುವುದು ಡಬಲ್ ಧಮಾಕ ಎಂದು ಸಂಜಯ್ ಗುಪ್ತ ಸಂತಸ ಹಂಚಿಕೊಂಡಿದ್ದಾರೆ.

ಮಾಜಿ ಪತ್ನಿಗೆ ಹೃತಿಕ್ ರೋಷನ್ ಕೊಟ್ರು ಭರ್ಜರಿ ಉಡುಗೊರೆ

Hrithik Roshan’s Kaabil to have a Hollywood Remake

ಇನ್ನು ಈ ಬಗ್ಗೆ ಹೃತಿಕ್ ರೋಷನ್ ಅವರ ತಂದೆ ರಾಕೇಶ್ ರೋಷನ್ ಅವರ ಬಳಿ ಚರ್ಚಿಸಿ ಅಂತಿಮ ನಿರ್ಣಯವನ್ನ ಕೈಗೊಳ್ಳಲಾಗುವುದಂತೆ. ಅಂದ್ಹಾಗೆ, ಹೃತಿಕ್ ರೋಷನ್ ಹಾಗೂ ಯಾಮಿ ಗೌತಮ್ ಅಭಿನಯದ ಈ ಚಿತ್ರವನ್ನ ಹೃತಿಕ್ ರೋಷನ್ ಅವರ ತಂದೆ ರಾಕೇಶ್ ರೋಷನ್ ಅವರೇ ನಿರ್ಮಾಣ ಮಾಡಿರುವುದು.

English summary
Hrithik Roshan Starrer Kaabil has been Approached by 20th Century Fox for a Hollywood Remake and the makers are in talks for the procurement of the remake rights.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada