For Quick Alerts
  ALLOW NOTIFICATIONS  
  For Daily Alerts

  ಅತ್ಯಾಚಾರಿಗಳ ಮರ್ಮಾಂಗವನ್ನು ಕತ್ತರಿಸಿ: ಗುಟುರು ಹಾಕಿದ ರಾಖಿ ಸಾವಂತ್

  |

  ''ಅತ್ಯಾಚಾರ ಮಾಡುವವರನ್ನು ಗಲ್ಲಿಗೇರಿಸಿ.. ಇಲ್ಲಾಂದ್ರೆ, ಗಲ್ಫ್ ದೇಶಗಳಲ್ಲಿ ಶಿಕ್ಷೆ ಕೊಡುವ ಹಾಗೆ ನಪುಂಸಕನನ್ನಾಗಿ ಮಾಡಿ. ರೇಪಿಸ್ಟ್ ಗಳ ಮರ್ಮಾಂಗ ಕತ್ತರಿಸಿ'' - ಹೀಗಂತ ಹೇಳುತ್ತಾ ರಾಖಿ ಸಾವಂತ್ ಗುಟುರು ಹಾಕಿದ್ದಾರೆ.

  ಇಷ್ಟು ದಿನ ಸೋಷಿಯಲ್ ಮೀಡಿಯಾದಲ್ಲಿ ಏನಾದರೂ ಒಂದು ಕಿರಿಕ್ ಮಾಡುತ್ತಿದ್ದ ರಾಖಿ ಸಾವಂತ್ ಇದೀಗ ಗಂಭೀರ ವಿಷಯದ ಕುರಿತು ಮಾತನಾಡಿದ್ದಾರೆ. ಹೈದರಾಬಾದ್ ನಲ್ಲಿ ನಡೆದ ಪಶು ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಕುರಿತು ರಾಖಿ ಸಾವಂತ್ ಆಕ್ರೋಶಗೊಂಡಿದ್ದಾರೆ.

  ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ರಾಖಿ ಸಾವಂತ್, ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಅಂತ ಒತ್ತಾಯಿಸಿದ್ದಾರೆ. ಮುಂದೆ ಓದಿರಿ...

  ನಿಮ್ಮ ಮಾನವನ್ನು ನೀವೇ ಕಾಪಾಡಿಕೊಳ್ಳಿ..

  ನಿಮ್ಮ ಮಾನವನ್ನು ನೀವೇ ಕಾಪಾಡಿಕೊಳ್ಳಿ..

  ''ನಾನು ತುಂಬಾ ದುಃಖದಲ್ಲಿದ್ದೇನೆ. ಹೈದರಾಬಾದ್ ನ ಪಶು ವೈದ್ಯೆ ಮೇಲಿನ ಅತ್ಯಾಚಾರ ಪ್ರಕರಣ ತುಂಬಾ ಬೇಸರ ತಂದಿದೆ. ಮಹಿಳೆಯರು ರಾತ್ರಿ ಹೊತ್ತು ಹೊರಗೆ ಹೋಗುವಾಗ ವಾಹನದ ಪೆಟ್ರೋಲ್, ಟೈರ್ ನ ಗಾಳಿ.. ಎಲ್ಲವನ್ನೂ ಚೆಕ್ ಮಾಡಿಕೊಳ್ಳಬೇಕು. ನಿಮ್ಮ ಮಾನವನ್ನು ನೀವೇ ಉಳಿಸಿಕೊಳ್ಳಬೇಕು. ನಿಮ್ಮ ಮಾನವನ್ನು ಕಾಪಾಡಲು ಬೇರೆ ಯಾರೂ ಬರುವುದಿಲ್ಲ'' ಎಂದಿದ್ದಾರೆ ರಾಖಿ ಸಾವಂತ್

  ಹೈದರಾಬಾದ್ ರೇಪ್ ಕೇಸ್: ಹಳೇಕಾಲದ ಯೋಚನೆಗಳೇ ಸರಿ ಎಂದ ಶ್ರುತಿ ನಾಯ್ಡುಹೈದರಾಬಾದ್ ರೇಪ್ ಕೇಸ್: ಹಳೇಕಾಲದ ಯೋಚನೆಗಳೇ ಸರಿ ಎಂದ ಶ್ರುತಿ ನಾಯ್ಡು

  ಭಯ ಇರಬೇಕು.!

  ಭಯ ಇರಬೇಕು.!

  ''ಅತ್ಯಾಚಾರ ಮಾಡುವವರನ್ನು ಗಲ್ಲಿಗೇರಿಸಿ. ಇಲ್ಲಾಂದರೆ, ತಾಲಿಬಾನ್ ಅಥವಾ ಗಲ್ಫ್ ದೇಶಗಳಲ್ಲಿ ಶಿಕ್ಷೆ ನೀಡುವ ಹಾಗೆ ನಪುಂಸಕನನ್ನಾಗಿ ಮಾಡಿ. ರೇಪಿಸ್ಟ್ ಗಳ ಮರ್ಮಾಂಗ ಕತ್ತರಿಸಿ. ಅತ್ಯಾಚಾರ ಮಾಡಿದರೆ ಏನಾಗುತ್ತೆ ಅನ್ನೋ ಭಯ ಇರಬೇಕು'' - ರಾಖಿ ಸಾವಂತ್

  ಪಶು ವೈದ್ಯೆ ಅತ್ಯಾಚಾರ, ಹತ್ಯೆ ಪ್ರಕರಣ: ಮರಣದಂಡನೆ ವಿಧಿಸಿ ಎಂದ ಮಹೇಶ್ ಬಾಬುಪಶು ವೈದ್ಯೆ ಅತ್ಯಾಚಾರ, ಹತ್ಯೆ ಪ್ರಕರಣ: ಮರಣದಂಡನೆ ವಿಧಿಸಿ ಎಂದ ಮಹೇಶ್ ಬಾಬು

  ಕಠಿಣ ಶಿಕ್ಷೆ ಆಗಲೇಬೇಕು

  ಕಠಿಣ ಶಿಕ್ಷೆ ಆಗಲೇಬೇಕು

  ''ಕಾನೂನು ಬದಲಾಗುವವರೆಗೂ ಅತ್ಯಾಚಾರ ನಿಲ್ಲುವುದಿಲ್ಲ. ಹೈದರಾಬಾದ್ ಹುಡುಗಿಗಾಗಿ ನಾನು ನ್ಯಾಯ ಕೇಳುತ್ತಿದ್ದೇನೆ. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಆಗಲೇಬೇಕು ಎಂದು ಮೋದಿಜಿ ಬಳಿ ಮನವಿ ಮಾಡುತ್ತೇನೆ'' ಎಂದು ವಿಡಿಯೋದಲ್ಲಿ ರಾಖಿ ಸಾವಂತ್ ಹೇಳಿದ್ದಾರೆ.

  ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಥಳಿಸಿ, ನೇಣಿಗೇರಿಸಿ: ರಾಜ್ಯಸಭೆಯಲ್ಲಿ ಜಯಾ ಬಚ್ಚನ್ ಗುಡುಗುಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಥಳಿಸಿ, ನೇಣಿಗೇರಿಸಿ: ರಾಜ್ಯಸಭೆಯಲ್ಲಿ ಜಯಾ ಬಚ್ಚನ್ ಗುಡುಗು

  ಎಲ್ಲರದ್ದೂ ಒಂದೇ ಮಾತು.!

  ಎಲ್ಲರದ್ದೂ ಒಂದೇ ಮಾತು.!

  ಹೈದರಾಬಾದ್ ನ ಪಶು ವೈದ್ಯೆ ಮೇಲಿನ ಅತ್ಯಾಚಾರ ಪ್ರಕರಣದ ಕುರಿತು ಬಾಲಿವುಡ್ ನಟ ಸಲ್ಮಾನ್ ಖಾನ್, ಸಂಸದೆ ಜಯಾ ಬಚ್ಚನ್, ನಟ ಚಿರಂಜೀವಿ, ನಟ ಮಹೇಶ್ ಬಾಬು, ನಟ ಸುದೀಪ್, ನಟಿ ಅನುಷ್ಕಾ ಶೆಟ್ಟಿ, ನಟ ಜಗ್ಗೇಶ್ ಸೇರಿದಂತೆ ಹಲವರು ದನಿಯೆತ್ತಿದ್ದಾರೆ. ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಿ ಎಂಬ ಕೂಗು ದೇಶದ ಮೂಲೆ ಮೂಲೆಯಲ್ಲೂ ಕೇಳಿಬರುತ್ತಿದೆ.

  English summary
  Hyderabad Veterinary Doctor rape and murder case: Rakhi Sawant wants PM Modi to punish Rapists.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X