»   » ನಾನು ಪರಿಪೂರ್ಣ ಗಂಡಸು ಅಲ್ಲ: ಅಮೀರ್ ಖಾನ್

ನಾನು ಪರಿಪೂರ್ಣ ಗಂಡಸು ಅಲ್ಲ: ಅಮೀರ್ ಖಾನ್

Posted By: ಉದಯರವಿ
Subscribe to Filmibeat Kannada

ನ್ಯೂಯಾರ್ಕ್ ನಲ್ಲಿ ನಡೆದ 'ಜಗತ್ತಿನಲ್ಲಿ ಮಹಿಳೆ' ಎಂಬ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ನಟ ಅಮೀರ್ ಖಾನ್ ಅಲ್ಲಿ ಕೆಲವೊಂದು ಕುತೂಹಲಕಾರಿ ಹೇಳಿಕೆಗಳನ್ನು ಕೊಡುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ. ನಿಜವಾದ ಗಂಡಸು ಎಂದರೆ ಯಾರು? ಎಂದು ಕೇಳಿರುವ ಅವರು.

"ತೋಳ್ಬಲ ಇರುವವನಾಗಿ, ಇತರರನ್ನು ಹೊಡೆಯುವಷ್ಟು ಶಕ್ತಿಯುತನಾಗಿ, ಯಾವುದೇ ಪರಿಸ್ಥಿತಿಯಲ್ಲೂ ಕಣ್ಣೀರಿಡದಂತಹ, ಯಾರ ಮೇಲೂ ಅವಲಂಬಿಸದಂತೆ ಇರಬೇಕೆ? ಆ ರೀತಿಯ ಎಲ್ಲಾ ಲಕ್ಷಣಗಳು ಇರಬೇಕೆಂದರೆ ನಾನು ಪರಿಪೂರ್ಣ ಪ್ರಮಾಣದಲ್ಲಿ ಗಂಡಸು ಅಲ್ಲ ಎಂಬುದನ್ನು ನಿಸ್ಸಂಶಯವಾಗಿ ಒಪ್ಪುತ್ತೇನೆ" ಎಂದಿದ್ದಾರೆ. [ಚಿತ್ರಗಳಲ್ಲಿ ಆಮೀರ್ ಖಾನ್ 50ನೇ ಹುಟ್ಟುಹಬ್ಬ]

Aamir Khan

"ಕೇವಲ ಸಮಸ್ಯೆಗಳು ಬಂದಾಗಷ್ಟೇ ಅಲ್ಲದೇ ಯಾವುದೇ ಸಮಸ್ಯೆ ಬರದಿದ್ದರೂ ನಾನು ನನ್ನ ಪತ್ನಿಯ ಕೈಹಿಡಿದುಕೊಳ್ಳುತ್ತೇನೆ. ಆಕೆಯ ನೆರಳನ್ನು ಬಯಸುತ್ತೇನೆ. ಗಂಡಸು ಎಂದರೆ ಆ ರೀತಿ ಇರಬೇಕು ಈ ರೀತಿ ಇರಬೇಕು ಎಂದು ಚಿಕ್ಕಂದಿನಿಂದಲೂ ತಂದೆತಾಯಿ ಹೇಳಿದ ಕಾರಣಕ್ಕೆ ಅವರಲ್ಲಿ ಅಹಂಕಾರದ ಮನಸ್ಥಿತಿ ಬೆಳೆಯುತ್ತದೆ" ಎಂದರು.

"ಪತ್ನಿಯ ಮೇಲೆ ಕೈ ಮಾಡುವ ಗಂಡಸರು ಚಿಕ್ಕಂದಿನಿಂದ ಅಂತಹ ವಾತಾವರಣದಲ್ಲೇ ಬೆಳೆದಿರುತ್ತಾರೆ. ಪುರಷನೆಂದರೆ ಅಧಿಕಾರ ಚಲಾಯಿಸಬೇಕು ಎಂಬ ಧೋರಣೆಯಲ್ಲೇ ಇರುತ್ತಾರೆ. ಈ ರೀತಿಯ ಪರಿಸ್ಥಿತಿ ಸಮಾಜದಲ್ಲಿ ಬದಲಾಗಬೇಕು, ಸ್ತ್ರೀ ಮತ್ತು ಪುರುಷರು ಸಮಾನ ಎಂಬ ಧೋರಣೆ ಬೆಳೆಯಬೇಕು".

ಭಾರತದಲ್ಲಿ ಸ್ತ್ರೀಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವ ಸಂಬಂಧ ಮಾತನಾಡಿರುವ ಅಮೀರ್ ಖಾನ್, "ತಪ್ಪಿತಸ್ಥರನ್ನು ಶಿಕ್ಷಿಸಲು ಹೆಚ್ಚು ಸಮಯ ತೆಗೆದುಕೊಳ್ಳಲಾಗುತ್ತಿದೆ. ಅತ್ಯಾಚಾರ ಪ್ರಕರಣಗಳು ಹೆಚ್ಚಾಗಲು ಇದೂ ಒಂದು ಕಾರಣ. ಕಾನೂನಿನಲ್ಲಿ ಕೆಲವೊಂದು ಬದಲಾವಣೆಗಳಾಗಬೇಕಿವೆ" ಎಂದಿದ್ದಾರೆ.

"ಅತ್ಯಾಚಾರಕ್ಕೆ ಒಳಗಾದ ಮಹಿಳೆಯರು ಮಾನಸಿಕವಾಗಿ ಕುಗ್ಗಿಹೋಗದೆ ಅವರಿಗೆ ಧೈರ್ಯ ತುಂಬುವ ರೀತಿಯಲ್ಲಿ ಸಮಾಜದಲ್ಲಿ ಬದಲಾವಣೆಗಳು ಬರಬೇಕು. ಮುಖ್ಯವಾಗಿ ಈ ರೀತಿಯ ಕೇಸಿನ ವಿಚಾರಣೆ ನಡೆಸುವ ಪೊಲೀಸರು, ಪರೀಕ್ಷಿಸುವ ವೈದ್ಯರ ವರ್ತನೆಯಲ್ಲೂ ಬದಲಾವಣೆಗಳಾಗಬೇಕು" ಎಂದಿದ್ದಾರೆ ಅಮೀರ್ ಖಾನ್.

English summary
"Who is a real man? Someone who goes and beats people up? A protector?" Aamir khan probed. In certain contexts in India, "real men aren't supposed to cry or hold their wives' hands," he added. "Based on those definitions, I am completely not a real man," Khan declared, laughing. "Not a single episode goes by without me crying."

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada