For Quick Alerts
  ALLOW NOTIFICATIONS  
  For Daily Alerts

  ನೀವು ಹುಡುಕುತ್ತಿರುವ 'ಅರ್ಜುನ್' ನಾನಲ್ಲ: ಎನ್‌ಸಿಬಿ ಬಳಿ ಅರ್ಜುನ್ ರಾಮ್‌ಪಾಲ್ ಅಳಲು

  |

  ಬಾಲಿವುಡ್ ನಟ ಅರ್ಜುನ್ ರಾಮ್‌ಪಾಲ್‌, ಡ್ರಗ್ಸ್ ಪ್ರಕರಣ ಸಂಬಂಧ ಎರಡು ಬಾರಿ ಎನ್‌ಸಿಬಿ ವಿಚಾರಣೆ ಎದುರಿಸಿದ್ದಾರೆ. ಅರ್ಜುನ್ ರಾಮ್‌ಪಾಲ್ ಮನೆಯ ಮೇಲೂ ಎನ್‌ಸಿಬಿ ಒಂದು ಬಾರಿ ದಾಳಿ ಮಾಡಿದೆ.

  ಅರ್ಜುನ್ ರಾಮ್‌ಪಾಲ್ ಗರ್ಲ್‌ಫ್ರೆಂಡ್ ಗ್ಯಾಬ್ರಿಲ್ಲಾ ಡೆಮೆಟ್ರಾಡಿಯಸ್ ರ ಸಹೋದರ ಎಜಿಸಿಲೋಸ್ ಡೆಮೆಟ್ರಾಡಿಯಸ್ ಅನ್ನು ಡ್ರಗ್ಸ್ ಪ್ರಕರಣದಲ್ಲಿ ಎನ್‌ಸಿಬಿ ಬಂಧಿಸಿದ ನಂತರ ಅರ್ಜುನ್ ರಾಮ್‌ಪಾಲ್‌ಗೆ ಸಂಕಷ್ಟ ಎದುರಾಗಿದ್ದು.

  ವರದಿಯೊಂದರ ಪ್ರಕಾರ ಎಜಿಸಿಲೋಸ್ ಡೆಮೆಟ್ರಾಡಿಯಸ್ ನ ಮೊಬೈಲ್ ಪರಿಶೀಲಿಸಿದ ಎನ್‌ಸಿಬಿ ಅದರಲ್ಲಿ 'ಅರ್ಜುನ್' ಹೆಸರು ಕಂಡು ಬಂದ ಕಾರಣ ಅರ್ಜುನ್ ರಾಮ್‌ಪಾಲ್ ಅನ್ನು ಗುರಿಯಾಗಿಸಿಕೊಂಡಿದೆಯಂತೆ.

  ಎನ್‌ಸಿಬಿ ವಿಚಾರಣೆ ಎದುರಿಸಿದ ಅರ್ಜುನ್ ರಾಮ್‌ಪಾಲ್, 'ನೀವು ಹುಡುಕುತ್ತಿರುವ ಆ 'ಅರ್ಜುನ್' ಬೇರೆ ನಾನು ಬೇರೆ' ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತಿದ್ದಾರಂತೆ.

  ಅರ್ಜುನ್ ರಾಮ್‌ಪಾಲ್ ರ ಗರ್ಲ್‌ಫ್ರೆಂಡ್‌ನ ಸಹೋದರ, ವಾಟ್ಸ್‌ಆಪ್‌ನಲ್ಲಿ ಯಾರೊ 'ಅರ್ಜುನ್' ಹೆಸರಿನ ವ್ಯಕ್ತಿಯೊಂದಿಗೆ ಡ್ರಗ್ಸ್ ಬಗ್ಗೆ ಚಾಟ್ ಮಾಡಿದ್ದು, ಆ ಅರ್ಜುನ್ ಎಂಬಾತ ಬೇರೆ, ನಾನು ಬೇರೆ ಎಂದು ಅರ್ಜುನ್ ರಾಮ್‌ಪಾಲ್ ಎನ್‌ಸಿಬಿ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ.

  ಕೆಲವು ದಿನಗಳ ಹಿಂದೆಯಷ್ಟೆ ಎರಡನೇ ಬಾರಿ ಎನ್‌ಸಿಬಿ ವಿಚಾರಣೆ ಎದುರಿಸಿದ ಅರ್ಜುನ್ ರಾಮ್‌ಪಾಲ್, ವಿಚಾರಣೆ ಮುಗಿಸಿ ಬಂದು, ತಾವು ಎನ್‌ಸಿಬಿ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುತ್ತಿರುವುದಾಗಿ ಹಾಗೂ ತಾವು ಡ್ರಗ್ಸ್ ಪ್ರಕರಣದಲ್ಲಿ ಭಾಗಿ ಆಗಿಲ್ಲವೆಂದೂ ಹೇಳಿದ್ದರು.

  Recommended Video

  Shivanna ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಕಿಡಿಗೇಡಿಗಳು | Filmibeat Kannada

  ಸುಶಾಂತ್ ಸಿಂಗ್ ಸಾವಿನ ತನಿಖೆ ವೇಳೆ ಬಾಲಿವುಡ್‌ ಡ್ರಗ್ಸ್ ಪ್ರಕರಣ ಹೊರಬಿದ್ದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಿಯಾ ಚಕ್ರವರ್ತಿ ಸೇರಿ ಹಲವರ ಬಂಧನವಾಗಿದೆ. ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ಮಹೇಶ್ ಭಟ್, ರಾಕುಲ್ ಪ್ರೀತ್ ಸಿಂಗ್, ಶ್ರದ್ಧಾ ಕಪೂರ್ ಅವರ ವಿಚಾರಣೆ ನಡೆದಿದೆ.

  English summary
  Arjun Rampal said to NCB that he is not that 'Arjun' for which NCB searching for in drugs case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X