Don't Miss!
- News
ಕೆಲವೇ ಕ್ಷಣಗಳಲ್ಲಿ ತುಮಕೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ, ಸಿದ್ಧತೆ ಹೇಗಿದೆ ತಿಳಿಯಿರಿ
- Technology
ಟೆಲಿಗ್ರಾಮ್ನಲ್ಲಿ ವಾಟ್ಸಾಪ್ ಅನ್ನೇ ಮೀರಿಸುವ ಫೀಚರ್ಸ್!; ಬಳಕೆದಾರರಿಗೆ ಸಾಕಷ್ಟು ಅನುಕೂಲ
- Finance
ಅದಾನಿ ಡಾಲರ್ ಬಾಂಡ್ ವಿರುದ್ಧ ಸಾಲ ನೀಡಲು ಸ್ಟಾಡರ್ಡ್ ಚಾರ್ಟೆಡ್ ನಕಾರ: ವರದಿ
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತವನ್ನು ಮಣಿಸಲು ಆಸಿಸ್ ತಂಡಕ್ಕೆ ಮಿಚೆಲ್ ಜಾನ್ಸನ್ ಸಲಹೆ
- Automobiles
ಸೆಲ್ಟೋಸ್ನ ಗೇರ್ಬಾಕ್ಸ್ನಲ್ಲಿ ದೋಷ ಕಂಡು ಬಂದಾಗ ಉಚಿತವಾಗಿ ಬದಲಾಯಿಸಿ ಕೊಟ್ಟ ಕಿಯಾ
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನನಗೆ ಸಿನಿಮಾ ಅವಕಾಶ ಕೊಡಿಸಿದ್ದು ಸಲ್ಮಾನ್ ಖಾನ್ ಅಲ್ಲ: ನಟಿ ಪ್ರನೂತನ್
ನಟಿ ಪ್ರನೂತನ್ ಈಗಿನನ್ನೂ ಬಾಲಿವುಡ್‌ನಲ್ಲಿ ಒಂದು ಸಿನಿಮಾದಲ್ಲಿ ಅಷ್ಟೇ ನಟಿಸಿದ್ದಾರೆ. ಆದರೆ ಆಕೆಗೆ ಸಾಕಷ್ಟು ಅವಕಾಶಗಳು ಹುಡುಕಿ ಬರುತ್ತಿವೆ.
ಇತ್ತೀಚೆಗೆ ಮಾಧ್ಯಮದೊಟ್ಟಿಗೆ ಮಾತನಾಡಿರುವ ಪ್ರನೂತನ್ ಬಾಲ್, 'ನನಗೆ ಸಿನಿಮಾದಲ್ಲಿ ಅವಕಾಶ ಕೊಟ್ಟಿದ್ದ ಸಲ್ಮಾನ್ ಖಾನ್ ಅಲ್ಲ. ಅವರಿಂದ ನನಗೆ ಅವಕಾಶ ದೊರೆಯಲಿಲ್ಲ' ಎಂದು ಹೇಳಿದ್ದಾರೆ.
ನಟಿ ಪ್ರನೂತನ್ ಸಿನಿಮಾ ಕುಟುಂಬದ ಹಿನ್ನೆಲೆ ಉಳ್ಳವರು. ಆಕೆಯ ಅಜ್ಜಿ ಖ್ಯಾತ ನಟಿ ನೂತನ್. ಪ್ರನೂತ್ ರ ತಂದೆ ಸಿನಿಮಾ ನಿರ್ಮಾಪಕರೂ ಆಗಿರುವ ಮೌನಿಷ್ ಬಾಲ್. ಹಾಗಾಗಿ ಆಕೆಗೆ ಸಹಜವಾಗಿಯೇ ನೆಪೊಟಿಸಮ್ (ಸ್ವಜನಪಕ್ಷಪಾತ)ದ ಪ್ರಶ್ನೆಗಳು ತೂರಿಬಂದಿವೆ.
ಇದಕ್ಕೆ ಉತ್ತರಿಸಿದ ನಟಿ ಪ್ರನೂತನ್, 'ನಾನು ಸಿನಿಮಾ ಉದ್ಯಮದಲ್ಲಿ ಎಲ್ಲಿಯೂ ನಾನು ಸಿನಿಮಾ ಕುಟುಂಬಕ್ಕೆ ಸಂಬಂಧಿಸಿದವಳು ಎಂದು ಹೇಳಿಕೊಂಡಿಲ್ಲ. ನಾನು ಸಾಮಾನ್ಯ ಯುವತಿಯಾಗಿಯೇ ಆಡಿಷನ್‌ಗಳನ್ನು ಎದುರಿಸಿದೆ' ಎಂದಿದ್ದಾರೆ.
'ನೋಟ್‌ಬುಕ್ ಸಿನಿಮಾಕ್ಕಾಗಿ ಸತತ ಐದು ಗಂಟೆಗಳ ಆಡಿಷನ್ ಅನ್ನು ನಾನು ನೀಡಿದ್ದೇನೆ. ಅದು ಸರಳವಾಗಿರಲಿಲ್ಲ. ಸಲ್ಮಾನ್ ಖಾನ್ ನನ್ನ ತಂದೆಯ ಆತ್ಮೀಯ ಗೆಳೆಯರು ಆದರೆ ಅವರಿಗೆ ಆದರೆ ಸಲ್ಮಾನ್ ಖಾನ್ ಗೆ ನಾನು ಆಡಿಷನ್ ಮಾಡಿದ್ದೇನೆ ಎಂಬುದು ಸಹ ಗೊತ್ತಿರಲಿಲ್ಲ. ನಾನು ಆಯ್ಕೆಯಾದ ಬಳಿಕವೇ ಅವರ ಸಿನಿಮಾದ ತಂಡ ಸಲ್ಮಾನ್ ಖಾನ್‌ಗೆ ಈ ಮಾಹಿತಿ ನೀಡಿದ್ದು' ಎಂದು ಹೇಳಿದ್ದಾರೆ ಪ್ರನೂತ್. ನೋಟ್‌ಬುಕ್ ಸಿನಿಮಾದ ನಿರ್ಮಾಪಕರಲ್ಲಿ ಸಲ್ಮಾನ್ ಖಾನ್ ಸಹ ಒಬ್ಬರು.
Recommended Video
'ನೆಪೊಟಿಸಂ ಬಗ್ಗೆ ಏನೇನೋ ಮಾತನಾಡುವ ಜನ ಸ್ಟಾರ್ ಮಕ್ಕಳು ಅನುಭವಿಸಿರುವ, ಅನುಭವಿಸುತ್ತಿರುವ ಕಷ್ಟಗಳನ್ನು ಸಹ ಕೇಳಬೇಕು. ಪ್ರತಿಯೊಬ್ಬರಿಗೂ ಅವರದ್ದೇ ಆದ ಸಂಕಷ್ಟಗಳು ಇರುತ್ತವೆ. ಸ್ಟಾರ್ ಮಕ್ಕಳಾದ ಕೂಡಲೇ ಅವರ ಹಾದಿ ಸುಗಮವಾಗಿರುವುದಿಲ್ಲ' ಎಂದಿದ್ದಾರೆ ಪ್ರನೂತನ್.