ನನ್ನ ಬಾಯ್‌ಫ್ರೆಂಡ್ ನನಗೆ ಮೋಸ ಮಾಡಿದ: ನಟಿಯ ಅಳಲು
ಬಾಲಿವುಡ್‌ನಲ್ಲಿ ಡೇಟಿಂಗ್ ಮಾಡುವುದು, ಬ್ರೇಕ್ ಅಪ್ ಮಾಡಿಕೊಳ್ಳುವುದು ತೀರಾ ಸಾಮಾನ್ಯ ವಿಷಯ. ವಿಚ್ಛೇಧನ ಸಹ ಸಾಮಾನ್ಯವೇ ವಿಷಯವೇ ಆಗಿಬಿಟ್ಟಿದೆ.
ನಟ-ನಟಿಯರ ಡೇಟಿಂಗ್‌ಗಳು, ಲಿವ್ ಇನ್ ರಿಲೇಶನ್‌ಶಿಪ್‌ಗಳು ಮಾಧ್ಯಮಗಳ ಕಣ್ಣುತಪ್ಪಿಸಿ ಗೌಪ್ಯವಾಗಿಯೇ ಇರುತ್ತವೆ. ಬ್ರೇಕ್‌ಅಪ್‌ಗಳು ಸಹ. ಆದರೆ ಕೆಲವು ನಟ-ನಟಿಯರು ಮಾತ್ರ ತಮ್ಮ ಸಂಬಂಧದ ಬಗ್ಗೆ ಬಹಿರಂಗವಾಗಿ ಹೇಳಿಕೊಳ್ಳುತ್ತಾರೆ. ಈಗ ನಟಿ ಅನುಷಾ ದಂಡೇಕರ್ ತಮ್ಮ ಬ್ರೇಕ್‌ಅಪ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಾಯಿ ಬಿಟ್ಟಿದ್ದಾರೆ.
ಬಾಲಿವುಡ್‌ನ ಕೆಲವು ಸಿನಿಮಾಗಳಲ್ಲಿ, ಎಂಟಿವಿ ಟಿವಿ ಶೋಗಳಲ್ಲಿ ನಟಿಸಿರುವ ಅನುಷಾ ದಂಡೇಕರ್, ಕರಣ್ ಕುಂದ್ರಾ ಅನ್ನು ಪ್ರೇಮಿಸುತ್ತಿದ್ದರು. ಇವರಿಬ್ಬರ ಸಂಬಂಧ ಸುಮಾರು ಐದು ವರ್ಷಗಳ ವರೆಗೆ ಚೆನ್ನಾಗಿಯೇ ನಡೆಯಿತು. ಇದೀಗ ಕೆಲವು ತಿಂಗಳ ಮುಂಚೆ ಈ ಜೋಡಿ ಬೇರಾಗಿದೆ.

'ನನಗೆ ಆತ ಸುಳ್ಳು ಹೇಳಿದ, ನನಗೆ ಆತ ಮೋಸ ಮಾಡಿದ. ಇದಕ್ಕಾಗಿ ಆತ ಸಣ್ಣ ಕ್ಷಮೆಯನ್ನೂ ಸಹ ಕೇಳಲಿಲ್ಲ. ನಾನು ಅವನ್ನು ವಿಪರೀತವಾಗಿ ಪ್ರೀತಿಸಿದ್ದೆ ನಂಬಿದ್ದೆ. ಆದರೆ ನಾನು ಮೋಸಹೋದೆ. ಅವನಿಗಾಗಿ ಕಾಯುವುದಕ್ಕೆ ಏನೂ ಉಳಿದಿಲ್ಲ, ಎಲ್ಲಾ ಪ್ರಯತ್ನಗಳು ವಿಫಲವಾದ ಮೇಲೆ ನಾನು ಹೊರಗೆ ಬರುತ್ತಿದ್ದೇನೆ, ನಾನೂ ಸಹ ಮನುಷ್ಯಳೇ' ಎಂದಿದ್ದಾರೆ ಅನುಷಾ ದಂಡೇಕರ್.
ಕರಣ್ ಕುಂದ್ರಾ, ತಮ್ಮ ಬಳಿ ಏನು ಸುಳ್ಳು ಹೇಳಿದ. ಯಾವ ರೀತಿ ಮೋಸ ಮಾಡಿದ ಎಂಬುದನ್ನೆಲ್ಲಾ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದಿಲ್ಲ ಬದಲಿಗೆ ತಮ್ಮ ಬಾಯ್‌ಫ್ರೆಂಡ್ ತಮಗೆ ಮೋಸ ಮಾಡಿದ್ದಾನೆ ಎಂದಷ್ಟೆ ಬರೆದಿದ್ದಾರೆ.
ಅನುಷಾ ರ ಆರೋಪಕ್ಕೆ ಕರಣ್ ಕುಂದ್ರಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇಬ್ಬರೂ ಸಹ ಎಂಟಿವಿ ಶೋ ನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಆ ನಂತರ ಪರಸ್ಪರ ಪ್ರೀತಿ ಗೆ ಬಿದ್ದವರು, ಈಗ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ.


Click it and Unblock the Notifications











