For Quick Alerts
  ALLOW NOTIFICATIONS  
  For Daily Alerts

  'ಬೆಂಗಳೂರಿನಲ್ಲಿ ನನಗೆ ಬದುಕಲು ತುಂಬಾ ಆಸೆ' ಎಂದವರು ಯಾರು?

  By ಸೋನು ಗೌಡ
  |

  ನಾನು ನನ್ನ ಬಾಲ್ಯದ ಜೀವನವನ್ನು ಇದೇ ಊರಿನಲ್ಲಿ ಕಳೆದಿದ್ದೇನೆ. ನನ್ನ ಅಜ್ಜಿ ಮನೆ ಸಂಬಂಧಿಕರೂ ಇಲ್ಲಿ ಇದ್ದಾರೆ. ಹಾಗಾಗಿ ಇಲ್ಲಿಯೇ ಮನೆಯೊಂದನ್ನು ಕಟ್ಟಿ ನನ್ನ ಮಕ್ಕಳ ಜೊತೆ ಕಳೆಯಬೇಕು ಅನ್ನೋದು ನನ್ನ ಆಸೆ' ಅಂತ ಬಾಲಿವುಡ್ ಬಾದ್ ಷಾ, ಕಿಂಗ್ ಖಾನ್ ಶಾರುಖ್ ಖಾನ್ ಅವರು ಹೇಳಿದ್ದಾರೆ.

  ಬೆಂಗಳೂರಿನ 'ಐಐಎಂಬಿ' ಹಳೆ ವಿದ್ಯಾರ್ಥಿಗಳ ಸಂಘ ಆಯೋಜಿಸಿದ್ದ ನಾಯಕತ್ವ ಶೃಂಗ 'ಇಂಬ್ಯೂ'ನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ನಂತರ ಪ್ರೇಕ್ಷಕರೊಂದಿಗೆ ನಡೆಸಿದ ಸಂಭಾಷಣೆಯಲ್ಲಿ ಮಾತನಾಡಿದ ಶಾರುಖ್ ಅವರು 'ನಾನು ನನ್ನ ಬಾಲ್ಯವನ್ನು ಮಂಗಳೂರು ಮತ್ತು ಬೆಂಗಳೂರಿನಲ್ಲಿ ಕಳೆದಿದ್ದೇನೆ'.

  'ನಾನು ಚಿಕ್ಕವನಿರುವಾಗ ಬೆಂಗಳೂರಿನ ಹವಾಮಾನ ಇದಕ್ಕಿಂತಲೂ ತುಂಬಾ ಸುಂದರವಾಗಿತ್ತು. ಇಲ್ಲಿ ನನ್ನ ಅಜ್ಜಿ ಮನೆ ಇತ್ತು. ಅದನ್ನು ನಾನು ಮತ್ತೆ ನಿರ್ಮಿಸಿ ರಾಜಧಾನಿ ಬೆಂಗಳೂರಿನಲ್ಲಿಯೇ ನನ್ನ ಕುಟುಂಬದವರ ಜೊತೆ ಕಾಲ ಕಳೆಯಲು ಇಚ್ಛೆ ಪಡುತ್ತೇನೆ' ಎಂದು ಕಿಂಗ್ ಖಾನ್ ತಿಳಿಸಿದ್ದಾರೆ.['ಡಿಡಿಎಲ್ ಜೆ' ಸೂಪರ್ ಜೋಡಿಯ, 'ದಿಲ್ ವಾಲೆ' ಟ್ರೈಲರ್ ನೋಡಿದ್ರಾ?]

  'ಸಾಮಾಜಿಕ ಜಾಲತಾಣಗಳ ಬಗ್ಗೆ ನಿಮ್ಮ ಅಭಿಪ್ರಾಯ ಏನು'? ಅಂತ ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ಸಂಸದ ಶಶಿ ತರೂರ್ ಅವರು ನಟ ಶಾರುಖ್ ಅವರನ್ನು ಪ್ರಶ್ನಿಸಿದರು.

  ಅದಕ್ಕೆ ಕಿಂಗ್ ಖಾನ್ ಶಾರುಖ್ ಅವರು 'ಅದೊಂಥರಾ ಪ್ರೇಮ ಸಂಬಂಧ ಇದ್ದಂತೆ, ಮೊದಲಿಗೆ ಅಲ್ಲಿ ಎಲ್ಲವೂ ಚೆನ್ನಾಗಿಯೇ ಕಾಣುತ್ತದೆ. ನಂತರ ಎಲ್ಲದರ ಬಗ್ಗೆಯೂ ಅಪಸ್ವರ ಆರಂಭವಾಗುತ್ತೆ. ಟ್ವಿಟ್ಟರ್, ಫೇಸ್ ಬುಕ್ಕ್ ಗಳ ಕತೆ ಕೂಡ ಇಷ್ಟೆ'.

  'ಒಮ್ಮೆ ಸಾಮಾಜಿಕ ಜಾಲತಾಣಗಳಿಗೆ ಪ್ರವೇಶ ಪಡೆದ ನಂತರ ಅವುಗಳ ಬಗ್ಗೆ ದೂರಿ ಪ್ರಯೋಜನ ಇಲ್ಲ. ನಿಮಗೆ ಇರುವಂತಹ ಮಾತಿನ ಹಕ್ಕು ಅಲ್ಲಿ ಎಲ್ಲರಿಗೂ ಇರುತ್ತದೆ. ನಾನು ಮಾತ್ರ ಇಲ್ಲಿ ಮಾತನಾಡುವೆ, ನೀವು ಮಾತನಾಡಬಾರದು ಎಂದು ಹೇಳಲು ಆಗುವುದಿಲ್ಲ' ಎಂದರು.[ಶಾರುಖ್ ಬರ್ಥ್ ಡೇಗೆ 'ಫ್ಯಾನ್' ಸೂಪರ್ ಟೀಸರ್ ]

  'ನನಗೆ ಇಷ್ಟವಾದ ಚಿತ್ರಗಳನ್ನು ಮಾಡುವುದು ನನ್ನ ಇಚ್ಛೆ. 'ಬಾಝಿಗರ್', 'ಢರ್', 'ಕಭಿ ಹಾಂ ಕಭಿ ನಾ' ಮೊದಲಾದ ಚಿತ್ರಗಳು ನನ್ನ ವೃತ್ತಿ ಜೀವನವನ್ನೇ ಬದಲಿಸಿದವು. ಮೊದಲು ಬೇಡ ಎನಿಸಿದ್ದ, ಕಷ್ಟ ಅಂತ ಅನಿಸಿದ್ದ 'ಪ್ರೀತಿ-ಪ್ರೇಮ' ಇರುವ ಚಿತ್ರಗಳಲ್ಲಿ ನಟಿಸುವುದು ನಂತರ ಸುಲಭ ಆಯಿತು'.

  ಆದ್ದರಿಂದ ಜೀವನಕ್ಕೆ ಬೇಕಾದ ಅಂಶಗಳನ್ನು ಕೂಡ ಕಲಿತುಕೊಂಡೆ. ಹಾಗಾಗಿ ನಿಮಗೆ ಬೇಡ ಅಂತ ಅನಿಸಿದ್ದನ್ನೂ ಮಾಡಿ, ಅದರಲ್ಲಿ ಕಲಿಯುವುದು ಬೇಕಾದಷ್ಟಿರುತ್ತದೆ ಎಂದು ಶಾರುಖ್ ನುಡಿದರು.

  ಕಾರ್ಯಕ್ರಮದಲ್ಲಿ ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ, ಸಂಸದ ಶಶಿ ತರೂರ್ ಮುಂತಾದವರು ಹಾಜರಿದ್ದರು.

  English summary
  Actor Shahrukh Khan on Friday said he wishes to renovate his grandparents’ house in Bengaluru and come and live here along with his children. Bollywood star Shah Rukh Khan today said twiteratti and other social media users should be thick-skinned and shouldn’t be complaining and defining limits of what is good or bad opinion.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X