»   » ಅಭಿಮಾನಿಗಳ ಅನುಚಿತ ವರ್ತನೆ: ಟ್ವಿಟ್ಟರ್ ನಲ್ಲಿ ಗುಡುಗಿದ ನಟಿ ಇಲಿಯಾನಾ

ಅಭಿಮಾನಿಗಳ ಅನುಚಿತ ವರ್ತನೆ: ಟ್ವಿಟ್ಟರ್ ನಲ್ಲಿ ಗುಡುಗಿದ ನಟಿ ಇಲಿಯಾನಾ

Posted By:
Subscribe to Filmibeat Kannada

ನೋಡೋಕೆ ಸೈಲೆಂಟ್ ಮತ್ತು ಸಾಫ್ಟ್ ಆಗಿ ಕಾಣಬಹುದು. ಹಾಗಂತ ನಟಿ ಇಲಿಯಾನಾ ರವರನ್ನ ಕೆಣಕುವ ಧೈರ್ಯ ಮಾಡಿದ್ರೆ, ಗ್ರಹಚಾರ ಗ್ಯಾರೆಂಟಿ. ಯಾಕಂದ್ರೆ, ತಂಟೆಗೆ ಬಂದವರನ್ನ ತರಾಟೆಗೆ ತೆಗೆದುಕೊಳ್ಳದೇ ಬಿಡುವ ಜಾಯಮಾನದವರಲ್ಲ ನಟಿ ಇಲಿಯಾನಾ.

ಬಿಟೌನ್ ಮಂಚದ ಸಂಸ್ಕೃತಿ ರಹಸ್ಯ ಬಿಚ್ಚಿಟ್ರು ಇಲಿಯಾನಾ

ಬಿಚ್ಚುಮಾತಿನಿಂದಲೇ ಜನಪ್ರಿಯತೆ ಗಳಿಸಿರುವ ನಟಿ ಇಲಿಯಾನಾ ಈಗಾಗಲೇ ಬಾಲಿವುಡ್ ನಲ್ಲಿರುವ 'ಮಂಚದ ಸಂಸ್ಕೃತಿ' ಬಗ್ಗೆ ಬಾಯ್ಬಿಟ್ಟಿದ್ದರು. ಇದೀಗ 'ಅಭಿಮಾನಿ'ಗಳ ವೇಷದಲ್ಲಿ ತಮ್ಮ ಬಳಿ ಅನುಚಿತವಾಗಿ ವರ್ತಿಸಿದವರ ವಿರುದ್ಧ ಟ್ವಿಟ್ಟರ್ ನಲ್ಲಿ ಕೆಂಡಕಾರಿದ್ದಾರೆ. ಮುಂದೆ ಓದಿರಿ...

ಟ್ವಿಟ್ಟರ್ ನಲ್ಲಿ ಇಲಿಯಾನಾ ಬರೆದುಕೊಂಡಿರುವುದೇನು.?

''ಎಂಥ ಅಸಹ್ಯದ ಜಗತ್ತಿನಲ್ಲಿ ನಾವು ಬದುಕುತ್ತಿದ್ದೇವೆ. ನಾನು ಪಬ್ಲಿಕ್ ಫಿಗರ್ ಅನ್ನೋದು ನನಗೆ ಗೊತ್ತಿದೆ. ಹಾಗೇ, ನನಗೆ ಖಾಸಗಿ ಜೀವನವಿಲ್ಲ ಎಂಬುದನ್ನೂ ಅರ್ಥ ಮಾಡಿಕೊಂಡಿದ್ದೇನೆ. ಹಾಗಂತ ನನ್ನ ಬಳಿ ಅಸಭ್ಯವಾಗಿ ವರ್ತಿಸುವ ಹಕ್ಕು ಯಾವುದೇ ವ್ಯಕ್ತಿಗಿಲ್ಲ. ಎಷ್ಟೇ ಆಗಲಿ ಅಭಿಮಾನಿಗಳ ವರ್ತನೆಯೇ ಹಾಗೆ ಎಂದು ಕನ್ ಫ್ಯೂಸ್ ಆಗಬೇಡಿ. ನಾನು ಕೂಡ ಒಂದು ಹೆಣ್ಣು ಅನ್ನೋದನ್ನ ಮರೆಯಬೇಡಿ'' ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ ನಟಿ ಇಲಿಯಾನಾ.

ಸಮುದ್ರತೀರದ ಸೆಕ್ಸ್ ಬಗ್ಗೆ ತಹತಹಿಸಿದ ಇಲಿಯಾನಾ

ಹೀಗೆ ಟ್ವೀಟ್ ಮಾಡಲು ಕಾರಣ.?

ಅಷ್ಟಕ್ಕೂ ಇದ್ದಕ್ಕಿದ್ದಂತೆ ನಟಿ ಇಲಿಯಾನಾ ಹೀಗೆ ಟ್ವೀಟ್ ಮಾಡಲು ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಆದ್ರೆ, ಕೆಲ ವರದಿಗಳ ಪ್ರಕಾರ, ಕಾರ್ಯಕ್ರಮವೊಂದಕ್ಕೆ ತೆರಳಿದ್ದಾಗ ಕೆಲ ಕಿಡಿಗೇಡಿಗಳು ನಟಿ ಇಲಿಯಾನಾ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದರಂತೆ. ಅದರಿಂದ ಬೇಸತ್ತ ಇಲಿಯಾನಾ ಟ್ವಿಟ್ಟರ್ ನಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಕಾರಿನಲ್ಲಿ ಹೋಗುವಾಗಲೂ ಚುಡಾಯಿಸಿದ್ದರಂತೆ.!

'ಮುಂಬೈ ಮಿರರ್' ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲೂ, ತಮಗೆ ಆದ ಕಹಿ ಘಟನೆಯೊಂದರ ಬಗ್ಗೆ ಇಲಿಯಾನಾ ಮನಬಿಚ್ಚಿ ಮಾತನಾಡಿದ್ದಾರೆ. ಒಮ್ಮೆ ಫಂಕ್ಷನ್ ಮುಗಿಸಿಕೊಂಡು ವಾಪಸ್ ತೆರಳುತ್ತಿದ್ದಾಗ, ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡ ಇಲಿಯಾನಾ ರವರನ್ನ ಕೆಲವರು ಚುಡಾಯಿಸಿದರಂತೆ. ಸಾಲದಕ್ಕೆ, ಇಲಿಯಾನಾ ಕೂತಿದ್ದ ಕಾರ್ ಗಾಜನ್ನ ಒಡೆಯಲು ಪ್ರಯತ್ನಿಸಿದರಂತೆ. ತಮ್ಮ ಜೊತೆಗೆ ಬಾಡಿಗಾರ್ಡ್ ಇಲ್ಲದ ಕಾರಣ, ರಸ್ತೆಯಲ್ಲಿ ಕಿರಿಕ್ ಮಾಡಿಕೊಳ್ಳದೇ ಮನೆ ಕಡೆಗೆ ತೆರಳಿದರಂತೆ ಇಲಿಯಾನಾ.

ನಟಿಯರ ಪಾಡು ಯಾಕ್ ಕೇಳ್ತೀರಾ.?

ಅಷ್ಟಕ್ಕೂ, ಇಂತಹ ಘಟನೆಗಳು ಬಾಲಿವುಡ್ ನಲ್ಲಾಗಲಿ, ಸ್ಯಾಂಡಲ್ ವುಡ್ ನಲ್ಲಾಗಲಿ ಅಥವಾ ಬೇರಾವುದೇ ಚಿತ್ರರಂಗದಲ್ಲಾಗಲಿ ಹೊಸದೇನೂ ಅಲ್ಲ. ಸೆಲೆಬ್ರಿಟಿಗಳು ಕೂಡ ನಮ್ಮ-ನಿಮ್ಮೆಲ್ಲರಂತೆ ಮನುಷ್ಯರು, ಅವರಿಗೂ ಖಾಸಗಿ ಜೀವನ ಇದೆ ಎಂದು ಎಲ್ಲರೂ ಅರ್ಥ ಮಾಡಿಕೊಂಡರೆ ಇಂಥ ಕಿರಿಕಿರಿ ತಪ್ಪಬಹುದು.

ಮೊನ್ನೆ ಹರಿಪ್ರಿಯಾ, ಇಂದು ಅನುಶ್ರೀ...ನಟಿಯರ ಪಾಡು ಯಾಕ್ ಕೇಳ್ತೀರಾ?

English summary
Ileana D Cruz has taken her twitter account to express her anguish against a male fan who misbehaved with her

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada