twitter
    For Quick Alerts
    ALLOW NOTIFICATIONS  
    For Daily Alerts

    ಅಕ್ರಮ ನಿರ್ಮಾಣ ಪ್ರಕರಣ: ಸುಪ್ರೀಂಕೋರ್ಟ್‌ ಆದೇಶದಿಂದ ಸೋನು ಸೂದ್ ನಿರಾಳ

    |

    ಮುಂಬೈ ಮಹಾನಗರ ಪಾಲಿಕೆ ಹಾಗೂ ಸೂನು ಸೂದ್ ನಡುವೆ ನಡೆಯುತ್ತಿದ್ದ 'ಅಕ್ರಮ-ಸಕ್ರಮ' ಜಗಳದಲ್ಲಿ ಸೋನು ಸೂದ್ ಗೆ ತಾತ್ಕಾಲಿಕ ಮೇಲುಗೈ ಆಗಿದೆ.

    ಸೋನು ಸೂದ್ ರ ಒಡೆತನದ ಮುಂಬೈನ ಜುಹುವಿನಲ್ಲಿರುವ ಹೋಟೆಲ್‌ ಅನ್ನು ಕಟ್ಟಡ ನಿರ್ಮಾಣ ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಲಾಗಿದೆ ಎಂದು ಬಿಎಂಸಿಯು ಸೋನು ಸೂದ್ ಗೆ ನೊಟೀಸ್ ಜಾರಿ ಮಾಡಿತ್ತು. ನೊಟೀಸ್ ಗೆ ತಡೆ ನೀಡಬೇಕೆಂದು ಆಗ್ರಹಿಸಿ ಸೋನು ಸೂದ್ ನ್ಯಾಯಾಲಯದ ಮೆಟ್ಟಿಲೇರಿದ್ದರು.

    ಮೊದಲಿಗೆ ಬಾಂಬೆ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದ ಸೋನು ಸೂದ್ ಗೆ ಅಲ್ಲಿ ನಿರಾಸೆ ಎದುರಾಯಿತು. ನಂತರ ಸುಪ್ರೀಂಕೋರ್ಟ್‌ ಮೊರೆ ಹೋದರು ಸೋನು ಸೂದ್. ಅಲ್ಲಿ ನಟ ಸೋನು ಸೂದ್ ಗೆ ನಿರಾಳತೆ ಒದಗಿದೆ.

    Illegal Construction Case: Supreme Court Gives Sonu Sood Relief

    ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌, 'ಸೋನು ಸೂದ್ ಅವರು ತಮ್ಮ ಕಟ್ಟಡ ನಿರ್ಮಾಣವನ್ನು ಕ್ರಮಬದ್ಧಗೊಳಿಸುವುದಾಗಿ ಹೇಳಿ ಬಿಎಂಸಿಗೆ ಅರ್ಜಿ ದಾಖಲಿಸಿದ್ದು, ಅರ್ಜಿಯ ಬಗ್ಗೆ ಬಿಎಂಸಿ ಅಧಿಕಾರಿಗಳು ನಿಲವು ತಳೆಯುವವರೆಗೂ ಸೋನು ಸೂದ್ ರ ಕಟ್ಟಡವನ್ನು ಕೆಡವುವ ಅಥವಾ ಜುಲ್ಮಾನೆ ವಿಧಿಸುವ ಕಾರ್ಯವನ್ನು ಬಿಎಂಸಿ ಮಾಡಬಾರದು' ಎಂದು ಸುಪ್ರೀಂಕೋರ್ಟ್ ಹೇಳಿದೆ.

    ಆದೇಶದ ನಂತರ ಟ್ವೀಟ್ ಮಾಡಿರುವ ಸೋನು ಸೂದ್, 'ನನ್ನ ಕಟ್ಟಡವು ಸಕ್ರಮ ನಿರ್ಮಾಣವಾಗಿದ್ದು, ನನಗೆ ನ್ಯಾಯಾಂಗದಲ್ಲಿ ವಿಶ್ವಾಸವಿದೆ' ಎಂದಿದ್ದಾರೆ.

    ಹ್ಯಾರಿಸನ್ ಫೋರ್ಡ್‌ರ 'ಶಾಂತಿಯೆಂದರೆ ಯುದ್ಧವಿಲ್ಲದೇ ಇರುವುದಲ್ಲ, ನ್ಯಾಯ ನೆಲೆಸಿರುವುದು' ಎಂಬ ಮಾತನ್ನು ಉಲ್ಲೇಖಿಸಿರುವ ಸೋನು ಸೂದ್, 'ಸುಪ್ರೀಂಕೋರ್ಟ್ ಆದೇಶ ನನಗೆ ಉಸಿರಾಡುವ ಅವಕಾಶ ಒದಗಿಸಿದೆ, ಜೊತೆಗೆ ಸರಿಪಡಿಸಿಕೊಳ್ಳಲು ಸಮಯ ನೀಡಿದೆ. ನನ್ನ ಕಟ್ಟಡ ಸಕ್ರಮವೇ ಆಗಿತ್ತು. ಕೆಲ ಬಣ್ಣಗಳಲ್ಲಿ ಅಷ್ಟೇ ಬದಲಾವಣೆ ಇತ್ತು. ಕಾನೂನುಬದ್ಧವಾಗಿಯೇ ನನ್ನ ಎಲ್ಲ ವ್ಯವಹಾರಗಳನ್ನು ಮಾಡುವುದೇ ನನ್ನ ಪ್ರಯತ್ನವಾಗಿರುತ್ತಿತ್ತು, ಮುಂದೆಯೂ ಆಗಿರುತ್ತದೆ. ನಾನು ಸದಾ ನ್ಯಾಯಾಂಗದಲ್ಲಿ ನಂಬಿಕೆ ಉಳ್ಳವನಾಗಿದ್ದೇನೆ' ಎಂದಿದ್ದಾರೆ ಸೋನು ಸೂದ್.

    Recommended Video

    ತೆಲುಗು ಮಾಧ್ಯಮಗಳಿಗೆ ಉತ್ತರಕೊಟ್ಟ ಪ್ರಶಾಂತ್ ನೀಲ್ | Salaar | Prabhas | Filmibeat Kannada

    ಈ ಹಿಂದೆ ನಟಿ ಕಂಗನಾ ರಣೌತ್ ಒಡೆತನದ ಕಚೇರಿಯನ್ನು ಅಕ್ರಮ ನಿರ್ಮಾಣವೆಂದು ಘೋಷಿಸಿ ನೊಟೀಸ್ ನೀಡಿದ್ದ ಬಿಎಂಸಿ, ಆ ಕಟ್ಟಡವನ್ನು ಧ್ವಂಸ ಗೊಳಿಸಿತು.

    English summary
    Supreme court gives relief to Sonu Sood in illegal construction case. BMC send notice to Sonu Sood that his Juhu hotel is a illegal construction.
    Saturday, February 6, 2021, 8:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X