For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್!?

  |

  ನೆರೆಯ ಪಾಕಿಸ್ತಾನದಲ್ಲಿ ಈಗ ರಾಜಕೀಯ ಬಿಕ್ಕಟ್ಟು ಏರ್ಪಟ್ಟಿದೆ. ಪ್ರಧಾನಿಯಾಗಿದ್ದ ಇಮ್ರಾನ್ ಖಾನ್ ಪದಚ್ಯುತಗೊಂಡಿದ್ದು, ಅವರ ಜಾಗದಲ್ಲಿ ಶಹಭಾಜ್ ಷರೀಪ್ ಅಧಿಕಾರ ಗ್ರಹಣ ಮಾಡಿದ್ದಾರೆ.

  ಇಮ್ರಾನ್ ಖಾನ್ ಪದಚ್ಯುತಗೊಂಡಿರುವುದು ತೀವ್ರ ಚರ್ಚೆಯ ವಿಷವಾಗಿದ್ದು, ಈ ಬಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಭಾರತವೂ ಸಹ ಪಾಕಿಸ್ತಾನದ ರಾಜಕೀಯ ಬೆಳವಣಿಗೆಗಳನ್ನು ಹತ್ತಿರದಿಂದ ಗಮನಿಸುತ್ತಿದೆ.

  Recommended Video

  KGF 2 ಜೊತೆಗೆ ಬರ್ತಿರೋದು ಖುಷಿಇದೆ | Jaggesh | Yash | Filmibeat Kannada

  ಈ ನಡುವೆ ಇಮ್ರಾನ್ ಖಾನ್ ಮಾಜಿ ಪತ್ನಿ ರಿಹಾಮ್, ಪದಚ್ಯುತಗೊಂಡಿರುವ ಇಮ್ರಾನ್ ಖಾನ್ ಮುಂದೆ ಯಾವ ವೃತ್ತಿ ಮಾಡಬಹುದು ಎಂದು ತಮ್ಮ ಊಹೆ ಹರಿಬಿಟ್ಟಿದ್ದಾರೆ. ಇಮ್ರಾನ್‌ರ ಮಾಜಿ ಪತ್ನಿ ನೀಡಿರುವ ಹೇಳಿಕೆ ಭಾರತದ ಮನೊರಂಜನಾ ಕ್ಷೇತ್ರಕ್ಕೆ ಸಂಬಂಧಿಸಿದ್ದಾಗಿದೆ.

  'ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಂಡಿರುವ ಇಮ್ರಾನ್ ಖಾನ್, ಬಾಲಿವುಡ್‌ಗೆ ಪಾದಾರ್ಪಣೆ ಮಾಡಬಹುದು. ಬಾಲಿವುಡ್ ಈಗ ಹಾಲಿವುಡ್ ಅನ್ನು ಮೀರಿಸುವ ಮಟ್ಟಕ್ಕೆ ಬೆಳೆದಿದೆ. ಬಾಲಿವುಡ್‌ನಲ್ಲಿ ವಿಲನ್ ಪಾತ್ರಗಳಲ್ಲಿ ಇಮ್ರಾನ್ ನಟಿಸಿದರೆ ಒಳ್ಳೆಯದು'' ಎಂದಿದ್ದಾರೆ ಇಮ್ರಾನ್ ಪತ್ನಿ ರಿಹಾಮ್.

  ವಿಲನ್‌ಗಳು ಇತ್ತೀಚೆಗೆ ಹೀರೋಗಳಿಗಿಂತಲೂ ಹೆಚ್ಚು ಹೆಸರು, ಹಣ ಸಂಪಾದನೆ ಮಾಡುತ್ತಿದ್ದಾರೆ. ಹಾಗಾಗಿ ಅದು ಅವರಿಗೆ ಸೂಕ್ತವಾಗಿರುತ್ತದೆ. ಇಲ್ಲವಾದಲ್ಲಿ ಭಾರತದ ಕಿರುತೆರೆಯ ಜನಪ್ರಿಯ 'ಕಪಿಲ್ ಶರ್ಮಾ ಶೋ'ನ ತಂಡ ಸೇರಿಕೊಳ್ಳಲಿದ್ದಾರೆ. ಅಲ್ಲಿ ಅವರ ಗೆಳೆಯ ನವಜೋತ್ ಸಿಂಗ್ ಸಿಧು ಬದಲಿಗೆ ಇಮ್ರಾನ್ ಖಾನ್ ಶೋನ ಜಡ್ಜ್ ಆಗಿ ಪಾಲ್ಗೊಳ್ಳಲಿ'' ಎಂದಿದ್ದಾರೆ ಇಮ್ರಾನ್‌ ಖಾನ್‌ರ ಮಾಜಿ ಪತ್ನಿ.

  ಹೇಗೋ ನವಜೋತ್ ಸಿಂಗ್ ಸಿಧು ಸ್ಥಾನ ಅಲ್ಲಿ ಖಾಲಿ ಇದೆ. ಅಲ್ಲದೆ, ನವಜೋತ್ ಸಿಂಗ್ ಸಿಧು ಅವರೊಟ್ಟಿಗೆ ಇಮ್ರಾನ್ ಖಾನ್‌ಗೆ ಒಳ್ಳೆಯ ಗೆಳೆತನ ಇದೆ. ಹಾಗಾಗಿ ಸಿಧು ಹಾಗೂ ಇಮ್ರಾನ್ ಒಟ್ಟಿಗೆ ಆ ಶೊನಲ್ಲಿ ಭಾಗವಹಿಸಲಿ, ಇತ್ತೀಚೆಗೆ ಇಮ್ರಾನ್ ಖಾನ್ ಅವರು ಶಾಯರಿಗಳನ್ನು ಓದುವುದನ್ನೂ ಅಭ್ಯಾಸ ಮಾಡಿಕೊಂಡಿದ್ದಾರೆ. ಹಾಗಾಗಿ ಆ ಕೆಲಸ ಅವರಿಗೆ ಸೂಕ್ತವಾಗಿರುತ್ತದೆ'' ಎಂದಿದ್ದಾರೆ ರಿಹಾಮ್.

  ಇಮ್ರಾನ್ ಖಾನ್ ಮಾಜಿ ಪತ್ನಿ ರಿಹಾಮ್, ಈಗ ಇಮ್ರಾನ್‌ರ ವಿರೋಧಿ ಬಣದಲ್ಲಿದ್ದು, ಇಮ್ರಾನ್ ಖಾನ್ ಪದಚ್ಯುತಗೊಳ್ಳುವ ಸಂದರ್ಭದಲ್ಲಿ ಭಾವುಕರಾಗಿ ಭಾಷಣ ಮಾಡಿದ್ದನ್ನು ಲೇವಡಿ ಮಾಡುತ್ತಾ ಯೂಟ್ಯೂಬ್ ಚಾನೆಲ್‌ ಒಂದರ ಬಳಿ ಮೇಲಿನಂತೆ ಹೇಳಿದ್ದಾರೆ.

  ಅಸಲಿಗೆ ಭಾರತದ ನವಜೋತ್ ಸಿಂಗ್ ಸಿಧು ಹಾಗೂ ಇಮ್ರಾನ್ ಖಾನ್ ನಡುವೆ ಒಳ್ಳೆಯ ಗೆಳೆತನವಿದೆ. ಇಮ್ರಾನ್ ಖಾನ್ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮಕ್ಕೆ ನವಜೋತ್ ಸಿಂಗ್ ಸಿಧುಗೆ ಆಹ್ವಾನ ನೀಡಲಾಗಿತ್ತು. ಸಾಕಷ್ಟು ವಿರೋಧಗಳನ್ನು ಎದುರಿಸಿಯೂ ಸಿಧು, ಇಮ್ರಾನ್ ಖಾನ್‌ರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ಕಾರಣಕ್ಕಾಗಿ ಈಗ ರಿಹಾಮಾ, ಸಿಧು ಸ್ಥಾನವನ್ನು ಇಮ್ರಾನ್ ಖಾನ್ ತುಂಬಬಹುದು ಎಂದಿರುವುದು.

  ಪಾಕ್ ಕ್ರಿಕೆಟಿಗರಿಗೆ ಕಪಿಲ್ ಶರ್ಮಾ ಶೋ ಹೊಸದೇನೂ ಅಲ್ಲ. ಈಗಾಗಲೇ ಪಾಕ್ ಕ್ರಿಕೆಟಿಗರಾದ ಶೊಯೆಬ್ ಅಖ್ತರ್ ಹಾಗೂ ವಸೀಂ ಅಕ್ರಂ ಅವರುಗಳು ಈ ಶೋನಲ್ಲಿ ಭಾಗವಹಿಸಿದ್ದಾರೆ.

  English summary
  Pakistan ex prime minister Imran Khan should join Bollywood or join Kapil Sharma show said his ex wife Reham.
  Thursday, April 14, 2022, 14:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X