»   » 'ಜಝ್ಬಾ' ಆಕ್ಸಿಡೆಂಟ್ ಸ್ಪಾಟ್ ನಲ್ಲಿ ಐಶ್ವರ್ಯಾ ರೈ

'ಜಝ್ಬಾ' ಆಕ್ಸಿಡೆಂಟ್ ಸ್ಪಾಟ್ ನಲ್ಲಿ ಐಶ್ವರ್ಯಾ ರೈ

Posted By:
Subscribe to Filmibeat Kannada

ಅಂತೂ ಇಂತೂ ಐಶ್ವರ್ಯಾ ರೈ ಬಚ್ಚನ್ ಮತ್ತೆ ಬಣ್ಣ ಹಚ್ಚಿದ್ದಾರೆ. ನಾಲ್ಕು ವರ್ಷಗಳ ಸುದೀರ್ಘ ಗ್ಯಾಪ್ ನ ನಂತ್ರ ಬಚ್ಚನ್ ಬಹು ಮರಳಿ ಬಾಲಿವುಡ್ ಅಂಗಳದ ಕಡೆ ಮುಖ ಮಾಡಿದ್ದಾರೆ.

ಸೆಟ್ಟೇರುವ ಮುನ್ನವೇ 'ಐಶ್ವರ್ಯಾ ರೈ ಕಮ್ ಬ್ಯಾಕ್ ಸಿನಿಮಾ' ಅಂತ ಭರ್ಜರಿ ಪ್ರಚಾರ ಗಿಟ್ಟಿಸಿಕೊಂಡಿರುವ 'ಜಝ್ಬಾ' ಚಿತ್ರದ ಚಿತ್ರೀಕರಣ ಮುಂಬೈನಲ್ಲಿ ಬಿರುಸಿನಿಂದ ಸಾಗುತ್ತಿದೆ. ಸೆಟ್ ನಲ್ಲಿ ಬಚ್ಚನ್ ಬಹುರಾಣಿ ಕ್ಯಾಮರಾ ಕಣ್ಣುಗಳಲ್ಲಿ ಕಂಡುಬಂದಿದ್ದು ಹೀಗೆ.

In Pics; Aishwarya Rai Bachchan shoots for Jazbaa

ನಿಮ್ಮ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನೀವು ಓದಿದ ಹಾಗೆ, 'ಜಝ್ಬಾ' ಚಿತ್ರದಲ್ಲಿ ಐಶ್ವರ್ಯಾ ರೈ ಲಾಯರ್ ಪಾತ್ರ ನಿರ್ವಹಿಸುತ್ತಿದ್ದಾರೆ. ಕಿಡ್ನ್ಯಾಪ್ ಕಮ್ ಮರ್ಡರ್ ಮಿಸ್ಟರಿ ಚಿತ್ರವಾಗಿರುವ 'ಜಝ್ಬಾ'ದಲ್ಲಿ ಐಶ್ವರ್ಯಾ ಕ್ರಿಮಿನಲ್ ಲಾಯರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಮುಂಬೈನ ಅಂಧೇರಿಯಲ್ಲಿ ನಡೆಯುತ್ತಿರುವ 'ಜಝ್ಬಾ' ಚಿತ್ರದ ಶೂಟಿಂಗ್ ಅಂಗಳದಿಂದ ಬಂದಿರುವ ತಾಜಾ ಫೋಟೋ ಇದು. ತನಿಖಾ ಕಾರ್ಯದಲ್ಲಿ ತೊಡಗಿರುವ ಐಶ್ವರ್ಯಾ ರೈ ಕೊಂಚ ಸೀರಿಯಸ್ ಆಗಿ ಸೆಟ್ ನಲ್ಲಿ ಕಂಡುಬಂದಿದ್ದಾರೆ. [ಚಾನ್ಸ್ ಗಾಗಿ ನಿರ್ದೇಶಕರ ಮನೆ ಬಾಗಿಲು ತಟ್ಟಿದ್ರಾ ಐಶೂ]

In Pics; Aishwarya Rai Bachchan shoots for Jazbaa

ಶೂಟಿಂಗ್ ಬಗ್ಗೆ ಹೇಳ್ಬೇಕು ಅಂದ್ರೆ, ಆರೋಪಿಯ ಬೆನ್ನು ಬೀಳುವ ಐಶ್ವರ್ಯಾ, ಆತನನ್ನ ಹಿಡಿಯುವುದಕ್ಕೆ ಕಾರ್ ನಲ್ಲೇ ಚೇಸ್ ಮಾಡಿಕೊಂಡು ಬರುತ್ತಾರೆ. ಅಷ್ಟರಲ್ಲೇ ಸಂಭವಿಸುವ ಅಪಘಾತದಲ್ಲಿ ಆರೋಪಿ ಮೃತಪಡುತ್ತಾನೆ. ಆಗ, ಆಕ್ಸಿಡೆಂಟ್ ಆದ ಸ್ಥಳಕ್ಕೆ ಐಶ್ ಭೇಟಿ ನೀಡುವ ಸನ್ನಿವೇಶ ಇದು. [ಐಶ್ವರ್ಯಾ ರೈ ಬಾಲಿವುಡ್ ನಲ್ಲಿ ಸೆಕೆಂಡ್ ಇನ್ನಿಂಗ್ಸ್]

ದಕ್ಷಿಣ ಕೊರಿಯಾದ ಸೂಪರ್ ಹಿಟ್ 'ಸೆವೆನ್ ಡೇಸ್' ಚಿತ್ರದ ರೀಮೇಕ್ ಆಗಿರುವ 'ಜಝ್ಬಾ'ದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಇರ್ಫಾನ್ ಖಾನ್ ಇದ್ದಾರೆ. ಜೊತೆಗೆ ಶಬಾನಾ ಆಜ್ಮಿ, ಅನುಪಮ್ ಖೇರ್, ಸಿದ್ಧಾಂತ್ ಕಪೂರ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಸಂಜಯ್ ಗುಪ್ತಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

English summary
Bollywood Actress Aishwarya Rai Bachchan is busy shooting for her comeback flick Jazbaa. Here, we bring you the most interesting pics of Aishwarya Rai from Jazbaa shooting spot.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada