»   » 'ದಂಗಲ್' ಗರ್ಲ್ ಫಾತಿಮಾ ಬಿಕಿನಿ ಅವತಾರ ನೋಡಿದ್ರೆ ಶಾಕ್ ಆಗ್ತಿರಾ..!

'ದಂಗಲ್' ಗರ್ಲ್ ಫಾತಿಮಾ ಬಿಕಿನಿ ಅವತಾರ ನೋಡಿದ್ರೆ ಶಾಕ್ ಆಗ್ತಿರಾ..!

Posted By:
Subscribe to Filmibeat Kannada

ಅಮೀರ್ ಖಾನ್ ಅಭಿನಯದ 'ದಂಗಲ್' ಚಿತ್ರದಲ್ಲಿ ಮಹಿಳಾ ಕುಸ್ತಿಪಟು ಗೀತಾ ಪೊಗಟ್ ಪಾತ್ರದಿಂದ ನಟಿ ಫಾತಿಮಾ ಸನಾ ಶೇಖ್ ಬಾಲಿವುಡ್ ಸಿನಿ ಪ್ರಿಯರ ಮನಗೆದ್ದವರು. ಅಂದಹಾಗೆ ಈ ನಟಿ ಈಗ ಅಮೀರ್ ಖಾನ್ ರವರ 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಚಿತ್ರತಂಡ ಇಂದು ಯೂರೋಪ್ ನ ಮಾಲ್ಟಾದಲ್ಲಿ ಶೂಟಿಂಗ್ ಆರಂಭಿಸಿದೆ.

ಫಾತಿಮಾ ಸನಾ ಶೇಖ್ ಇಂದು(ಜೂನ್ 7) ತಮ್ಮ ಇನ್‌ಸ್ಟಗ್ರಾಂ ನಲ್ಲಿ ಸಖತ್ ಹಾಟೆಸ್ಟ್ ಬಿಕಿನಿ ಫೋಟೋಗಳನ್ನು ಪೋಸ್ಟ್ ಮಾಡಿದ್ದು, ಎಲ್ಲರ ಗಮನ ಸೆಳೆದಿದ್ದಾರೆ. ಅಲ್ಲದೇ ಫೋಟೋಗಳು ಇಂದು ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಬಹುಶಃ ಈ ಫೋಟೋ ನೋಡಿದವರೂ 'ದಂಗಲ್' ಚಿತ್ರದಲ್ಲಿ ನಟಿಸಿದ್ದ ಗೀತಾ ಪೊಗಟ್ ಈಕೆಯೇ..! ಎಂದು ಆಶ್ಚರ್ಯ ಪಡುವುದರಲ್ಲಿ ಯಾವುದೇ ಸಂಶಯವಿಲ್ಲ. ಆಕೆಯ ಬಿಕಿನಿ ಅವತಾರ ಫೋಟೋಗಳಲ್ಲಿ ಇಲ್ಲಿದೆ. ಮುಂದೆ ಓದಿರಿ.

ಬಿಕಿನಿ ಬೇಬ್ ಆದ ಫಾತಿಮಾ

ನಟಿ ಫಾತಿಮಾ ಸನಾ ಶೇಖ್ ಕಪ್ಪು ಬಣ್ಣದ ಈಜು ಉಡುಗೆ ಧರಿಸಿರುವ ತಮ್ಮ ಲೇಟೆಸ್ಟ್ ಬಿಕಿನಿ ಅವತಾರವನ್ನು ಇಂದು ಸಾಮಾಜಿಕ ಜಾಲತಾಣ ಇನ್‌ಸ್ಟಗ್ರಾಂನಲ್ಲಿ ಪೋಸ್ಟ್ ಮಾಡಿ ಪಡ್ಡೆ ಹುಡುಗರ ಗಮನ ಸೆಳೆದಿದ್ದಾರೆ. ಮನಮೋಹಕವಾದ ಅವರ ಬ್ಲಾಕ್ ಅಂಡ್ ವೈಟ್ ಎಫೆಕ್ಟ್ ಡ್ರೆಸ್ ನಲ್ಲಿನ ಬಿಕಿನಿ ಫೋಟೋ ಎಂತಹವರಿಗೂ ರೋಮಾಂಚನಗೊಳಿಸುವಲ್ಲಿ ಸಂಶಯವಿಲ್ಲ

ಮ್ಯಾಗಜೀನ್‌ಗಾಗಿ ಫೋಟೋಶೂಟ್

ಅಂದಹಾಗೆ ಫಾತಿಮಾ ಸನಾ ಶೇಖ್ ಶೇರ್ ಮಾಡಿರುವ, ಯುವಕರ ಕಣ್ಣುಕುಕ್ಕುವ ಈ ಬಿಕಿನಿ ಅವತಾರ 'ಜಿಕ್ಯೂ ಇಂಡಿಯಾ' ಎಂಬ ನಿಯತಕಾಲಿಕೆಯ ಕವರ್ ಫೋಟೋಗೆ ನೀಡಿರುವ ಪೋಸ್. ಈ ಫೋಟೋಗಳನ್ನು ಮಾಲ್ಡೀವ್ಸ್ ನ ಪ್ರಿಸ್ಟೈನ್ ಬೀಚ್‌ನಲ್ಲಿ ಸೆರೆಹಿಡಿಯಲಾಗಿದೆ.

ಗ್ಲಾಮ್ ಲುಕ್ ನಲ್ಲಿ ಫಾತಿಮಾ

ಫಾತಿಮಾ ಅವರ ಈ ಬೆರಗುಗೊಳಿಸುವ ಫೋಟೋ ನೋಡಿದ ಎಲ್ಲರೂ ಫಿದಾ ಆಗುವುದರಲ್ಲಿ ಯಾವುದೇ ಡೌಟ್ ಇಲ್ಲ. ತಮ್ಮ ಈ ಗ್ಲಾಮ್ ಲುಕ್ ಮೂಲಕ ಯಂಗ್‌ಸ್ಟರ್‌ಗಳ ಹೃದಯಕ್ಕೆ ಕಿಚ್ಚು ಹಚ್ಚಿರುವ ಫಾತಿಮಾ ಸನಾ ಶೇಖ್ ಈ ಹಿಂದೆ ಹೀಗೆ ಕಾಣಿಸಿಕೊಂಡಿರಲಿಲ್ಲ.

ಮ್ಯಾಗಜೀನ್ ಕವರ್ ಫೋಟೋಗೆ ಪೋಸ್

ನಟಿ ಮ್ಯಾಗಜೀನ್ ಕವರ್ ಫೋಟೋಗಳಿಗೆ ಪೋಸ್ ಕೊಟ್ಟಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಫಾತಿಮಾ 'Femina Magazine' ಕವರ್ ಫೋಟೋಗೆ ಪೋಸ್ ನೀಡಿದ್ದರು.

'ಥಗ್ಸ್ ಆಫ್ ಹಿಂದೂಸ್ತಾನ್' ನಲ್ಲಿ ಫಾತಿಮಾ ಅಭಿನಯ

ನಟಿ 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರದಲ್ಲಿ ಆಕ್ಷನ್ ದೃಶ್ಯಗಳಲ್ಲಿ ಮತ್ತು ಕತ್ತಿ ಹಿಡಿದು ಯುದ್ಧ ಮಾಡುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

English summary
Fatima Sana Shaikh has posted her bikini pictures, which she did for GQ India’s June issue in Instagram.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada