»   » ದೀಪಿಕಾಗೆ 'ಪ್ರೀತ್ಸೇ..ಪ್ರೀತ್ಸೇ' ಎಂದು ಬೆಂಬಿದ್ದ ರಣ್ವೀರ್

ದೀಪಿಕಾಗೆ 'ಪ್ರೀತ್ಸೇ..ಪ್ರೀತ್ಸೇ' ಎಂದು ಬೆಂಬಿದ್ದ ರಣ್ವೀರ್

Posted By:
Subscribe to Filmibeat Kannada

ಹಾಟ್ ಕೇಕ್ ದೀಪಿಕಾ ಪಡುಕೋಣೆ ಮತ್ತು ಹ್ಯಾಂಡ್ಸಮ್ ಹಂಕ್ ರಣ್ವೀರ್ ಸಿಂಗ್ ಸಂಬಂಧ ಎಂತದ್ದು ಅಂತ ಇಡೀ ಬಾಲಿವುಡ್ ಗೆ ಗೊತ್ತಿದೆ. 'ರಾಮ್ ಲೀಲಾ' ಚಿತ್ರದ ನಂತ್ರ ಇಬ್ಬರ ಗೆಳೆತನ 'ಎಕ್ಸ್ ಟ್ರಾ' ಸ್ಪೆಷಲ್ ಆಗಿರುವ ಗುಟ್ಟು ಈಗ ಕೇವಲ ಗುಟ್ಟಾಗಿ ಉಳಿದಿಲ್ಲ.

ಹೊಸ ವರ್ಷದ ಸಂಭ್ರಮವನ್ನ ಭರ್ಜರಿಯಾಗಿ ಒಟ್ಟಾಗಿ ಆಚರಿಸಿಕೊಂಡ ದೀಪಿಕಾ-ರಣ್ವೀರ್, ಸಿಲಿಕಾನ್ ಸಿಟಿ ಬೆಂಗಳೂರಲ್ಲೂ ಕೈಕೈ ಹಿಡಿದುಕೊಂಡು ಓಡಾಡಿದ್ದು ನೆನಪಿದೆ ತಾನೆ? [ತವರೂರಲ್ಲಿ ರಣ್ವೀರ್ ನ ಜೊತೆ ದೀಪಿಕಾ ಜೂಟಾಟ]

Ranveer Singh proposes to Deepika Padukone1

ಹಳೇ ಸುದ್ದಿಯಾಗಿರುವ ಇವೆಲ್ಲಕ್ಕಿಂತ ಕುತೂಹಲ ಕೆರಳಿಸುವ ಮತ್ತೊಂದು ವಿಷಯ ಹೇಳ್ತೀವಿ ಕೇಳಿ...ಈ ತನಕ ಗುಪ್ತ್ ಗುಪ್ತ್ ಆಗೇ ಇದ್ದ ಇಬ್ಬರ ಪ್ರೇಮ ಪ್ರಣಯ ಇದೀಗ ರೋಡ್ ರೋಡ್ ನಲ್ಲೂ ಶುರುವಾಗಿದೆ!

ದೀಪಿಕಾ ಮುಂದೆ ನಡೆದುಕೊಂಡು ಹೋಗ್ತಿದ್ರೆ, ಕೈಯಲ್ಲಿ ರೋಸ್ ಹಿಡಿದುಕೊಂಡು, ''ದಿಪ್ಪಿ...ಐ ಲವ್ ಯೂ'' ಅಂತ ರಣ್ವೀರ್ ಸಿಂಗ್, ದಿಪ್ಪಿ ಬೆನ್ನು ಬಿದ್ದಿದ್ದಾರೆ.

Ranveer Singh proposes to Deepika Padukone2

ಇದ್ಯಾವ್ದೋ ಸಿನಿಮಾದ ಶೂಟಿಂಗ್! ನಾವು ಹೇಳುತ್ತಿರುವುದು ಬರೀ ಗಾಸಿಪ್ ಅಂತ ಅಂದುಕೊಳ್ಳಬೇಡಿ. ಬೇಕಾದ್ರೆ, ಈ ಚಿತ್ರಗಳನ್ನ ಒಮ್ಮೆ ನೋಡಿ...

ಅಂದು ಫರ್ಹಾ ಖಾನ್ ಹುಟ್ಟುಹಬ್ಬದ ಸಂಭ್ರಮ. ಇಡೀ ಬಾಲಿವುಡ್ ಗಾಗಿ ಪಾರ್ಟಿ ಆಯೋಜಿಸಿದ್ದ ಫರ್ಹಾ, ಯುವ ಜೋಡಿ ದಿಪ್ಪಿ ಮತ್ತು ರಣ್ವೀರ್ ರನ್ನೂ ಆಹ್ವಾನಿಸಿದ್ದರು. ಪಾರ್ಟಿ ಸಂಭ್ರಮ ಜೋರಾಗ್ತಿದ್ದಂತೆ ರಣ್ವೀರ್ ಗೂ ಪ್ರೇಮದ ಅಮಲು ನೆತ್ತಿಗೇರಿದ ಪರಿಣಾಮ ದಿಪ್ಪಿ ಹಿಂದೆ ಬಿದ್ದು ಬಿಟ್ಟರು. [ಡಿಂಪಲ್ ಬ್ಯೂಟಿ ದೀಪಿಕಾ ಪಡುಕೋಣೆ ಹಿಂತಿರುಗಿ ನೋಡಿದಾಗ!]

Ranveer Singh proposes to Deepika Padukone3

ಕೈಗೆ ಸಿಕ್ಕ ರೋಸ್ ನ ಹಿಡಿದು, ದಿಪ್ಪಿ ಕಾರು ಹತ್ತುವವರೆಗೂ 'ಲವ್ ಯೂ ದಿಪ್ಪಿ' ಅಂತ ಹಿಂದೆ ಹೋಗಿದ್ದಾರೆ. ಇಂತಹ 'ರಿಯಲ್' ರೋಮ್ಯಾನ್ಸ್ ಗೆ ಸಾಕ್ಷಿಯಾದ ಕರಣ್ ಜೋಹರ್ ಇಬ್ಬರನ್ನ ನೋಡಿ ಸಖತ್ ಮಜಾ ತೆಗೆದುಕೊಂಡಿದ್ದಾರೆ.

ರಣ್ವೀರ್ ತುಂಟಾಟಕ್ಕೆ ನಗುತ್ತಲೇ ಇದ್ದ ದೀಪಿಕಾ, ಅದ್ರಿಂದ ಎದ್ದಿರುವ ಎಲ್ಲಾ ಪ್ರಶ್ನೆಗಳಿಗೂ ನಕ್ಕು ಸುಮ್ಮನಾಗಿದ್ದಾರೆ. ಅಲ್ಲಿಗೆ, ಇದು ಬರೀ ಜೂಟಾಟವೋ, ಇಲ್ಲ ಪ್ರೇಮ ಪರಿಣಯವೋ..ನೀವೇ ನಿರ್ಧರಿಸಿ...ಹ್ಹಾಂ, ರಣ್ವೀರ್ ಕೈಯಲ್ಲಿರುವುದು ಹಳದಿ ಬಣ್ಣದ ರೋಸ್ ಅನ್ನುವುದು ನೆನಪಿರಲಿ...

English summary
Lovely couple Deepika Padukone and Ranveer Singh were spotted at Farah Khan's Birthday Party. From what looked like friendly gesture, Ranveer Singh spotted running behind Deepika with a rose in hand.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada