»   » ಹೊಸ ಬಾಳಿಗೆ ಕಾಲಿಟ್ಟ ಬಾಲಿವುಡ್ ನಟ ಶಿವ್ ಪಂಡಿತ್

ಹೊಸ ಬಾಳಿಗೆ ಕಾಲಿಟ್ಟ ಬಾಲಿವುಡ್ ನಟ ಶಿವ್ ಪಂಡಿತ್

Posted By:
Subscribe to Filmibeat Kannada

ಬಾಲಿವುಡ್ ಲೋಕದಲ್ಲಿ ಈಗ ಮದುವೆ ಸಂಭ್ರಮ ಜೋರಾಗಿದೆ. ಮೊನ್ನೆಯಷ್ಟೇ ನಟಿ ಸೋನಂ ಕಪೂರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಿನ್ನೆ ನಟಿ ನೇಹಾ ಧೂಪಿಯಾ ವೈವಾಹಿಕ ಜೀವನಕ್ಕೆ ಅಡಿಯಿಟ್ಟರು. ಈಗ ಇವರಿಬ್ಬರ ಹಾದಿಯಲ್ಲಿ ನಟ ಶಿವ್ ಪಂಡಿತ್ ಕೂಡ ಸಾಗಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ ಎಕ್ಸ್ ಟ್ರಾ ಇನ್ನಿಂಗ್ಸ್ ಹೋಸ್ಟ್ ಮಾಡುತ್ತಿದ್ದ ಬಾಲಿವುಡ್ ನಟ ಶಿವ್ ಪಂಡಿತ್ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಡಿಸೈನರ್ ಹಾಗೂ ಸ್ಟೈಲಿಸ್ಟ್ Ameira Punvani ರವರ ಕೈಹಿಡಿದಿದ್ದಾರೆ ನಟ ಶಿವ್ ಪಂಡಿತ್.

ಮೇ 9 ರಂದು ಶಿವ್ ಪಂಡಿತ್ ವಿವಾಹ ಸರಳವಾಗಿ ನಡೆದಿದೆ. ಕುಟಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಶಿವ್ ಪಂಡಿತ್ ಮದುವೆ ನೆರವೇರಿದೆ.

In pics: Shiv Pandit got married to Ameira Punvani

ಅಷ್ಟಕ್ಕೂ, ಇವರಿಬ್ಬರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಕೆಲವು ವರ್ಷಗಳಿಂದ ಪ್ರೇಮದ ಅಮಲಿನಲ್ಲಿ ತೇಲುತ್ತಿದ್ದ ಈ ಜೋಡಿಯ ಪ್ರೀತಿಗೆ ಇದೀಗ ಅಧಿಕೃತ ಮುದ್ರೆ ಬಿದ್ದಿದೆ.

In pics: Shiv Pandit got married to Ameira Punvani

ರೇಡಿಯೋ ಜಾಕಿಯಾಗಿ, ಟಿವಿ ಶೋಗಳ ಹೋಸ್ಟ್ ಆಗಿರುವ ಶಿವ್ ಪಂಡಿತ್, 'ಶೈತಾನ್', 'ಬಾಸ್' ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸ್ಪ್ರೈಟ್, ಏರ್ ಟೆಲ್, ಕೋಲ್ಗೇಟ್ ಮುಂತಾದ ಆಡ್ ಗಳಲ್ಲೂ ಶಿವ್ ಪಂಡಿತ್ ಮಿಂಚಿದ್ದಾರೆ.

English summary
Bollywood Actor Shiv Pandit got married to Ameira Punvani.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X