»   » ಸೂರಜ್ ಪಾಂಚೋಲಿ ಅತ್ತಿದ್ದಕ್ಕೆ ಭಾವುಕರಾದ ಸಲ್ಮಾನ್

ಸೂರಜ್ ಪಾಂಚೋಲಿ ಅತ್ತಿದ್ದಕ್ಕೆ ಭಾವುಕರಾದ ಸಲ್ಮಾನ್

Posted By:
Subscribe to Filmibeat Kannada

ಅದು ಬಾಲಿವುಡ್ ಚಿತ್ರ 'ಹೀರೋ' ಟ್ರೈಲರ್ ಲಾಂಚ್ ಸಮಾರಂಭ. ಟ್ರೈಲರ್ ಲಾಂಚ್ ಆಗ್ತಿದ್ದ ಹಾಗೆ ನಾಯಕ ಸೂರಜ್ ಪಾಂಚೋಲಿ ಗಳಗಳನೆ ಅಳೋಕೆ ಶುರುಮಾಡಿದರು.

ಸೂರಜ್ ಕಣ್ಣಾಲಿಗಳು ಒದ್ದೆ ಆಗಿದ್ದನ್ನ ನೋಡಿ ಬಾಲಿವುಡ್ ಟೈಗರ್ ಸಲ್ಮಾನ್ ಖಾನ್ ಕಣ್ಣಲ್ಲಿ ನೀರು ಬಂತು. ತೆರೆ ಮೇಲೆ ಖೇಡಿಗಳನ್ನ ಹಿಗ್ಗಾಮುಗ್ಗಾ ಜಾಡಿಸುವ ಸಲ್ಮಾನ್ ಖಾನ್ ಭಾವುಕ ವ್ಯಕ್ತಿ ಅನ್ನೋದಕ್ಕೆ ಇದೇ ಸಾಕ್ಷಿ. ['ಭಜರಂಗಿ ಭಾಯ್ ಜಾನ್' ಸೂಪರ್ ಸ್ಪೆಷಾಲಿಟೀಸ್]

ಅಸಲಿಗೆ ಸೂರಜ್ ಪಾಂಚೋಲಿ ಮತ್ತು ಸಲ್ಮಾನ್ ಖಾನ್ ಕಣ್ಣೀರಿಟ್ಟಿದ್ದು ಯಾಕೆ? 'ಹೀರೋ' ಟ್ರೈಲರ್ ನಲ್ಲಿ ಅಂತದ್ದೇನಿದೆ ಅನ್ನೋದನ್ನ ಹೇಳ್ತೀವಿ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....

'ಹೀರೋ' ಟ್ರೈಲರ್ ಲಾಂಚ್

1983ರಲ್ಲಿ ತೆರೆಕಂಡ ಸುಭಾಷ್ ಘಾಯ್ ನಿರ್ದೇಶನದ ಜ್ಯಾಕಿ ಶ್ರಾಫ್ ನಟನೆಯ 'ಹೀರೋ' ಚಿತ್ರದ ರೀಮೇಕ್ ಈ ಹೊಸ 'ಹೀರೋ'. ಸಲ್ಮಾನ್ ಖಾನ್ ಮತ್ತು ಸುಭಾಷ್ ಘಾಯ್ ನಿರ್ಮಿಸಿರುವ, ನಿಖಿಲ್ ಅಡ್ವಾನಿ ನಿರ್ದೇಶಿಸಿರುವ, ಸೂರಜ್ ಪಾಂಚೋಲಿ ಮತ್ತು ಆತಿಯಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿರುವ ಹೊಸ 'ಹೀರೋ' ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ನಿನ್ನೆ (ಜುಲೈ 15)ಕ್ಕೆ ಅದ್ದೂರಿಯಾಗಿ ನೆರವೇರಿತು.

ಟ್ರೈಲರ್ ನೋಡಿ ಅತ್ತ ಸೂರಜ್ ಪಾಂಚೋಲಿ

ಬಾಲಿವುಡ್ ನಲ್ಲಿ ದೊಡ್ಡ 'ಹೀರೋ' ಆಗ್ಬೇಕು ಅಂತ ವರ್ಷದಿಂದ ಶ್ರಮ ಪಡುತ್ತಿದ್ದ ಸೂರಜ್ ಪಾಂಚೋಲಿ ನಾಯಕನಾಗಿ ಅಭಿನಯಿಸಿರುವ ಚೊಚ್ಚಲ ಚಿತ್ರ ಈ 'ಹೀರೋ'. ಬಾಲಿವುಡ್ ಗಣ್ಯರು, ಮಾಧ್ಯಮ ಮಿತ್ರರ ಮುಂದೆ ಟ್ರೈಲರ್ ಲಾಂಚ್ ಆಗಿ, ಪರದೆ ಮೇಲೆ ತಮ್ಮನ್ನ ತಾವು ಕಂಡುಕೊಂಡ ಸೂರಜ್ ಪಾಂಚೋಲಿ ಗಳಗಳನೆ ಅತ್ತುಬಿಟ್ಟರು.

ಕನಸು ನನಸಾದ ಕ್ಷಣ.!

''ನನ್ನ ಕನಸು ನನಸಾದ ಕ್ಷಣ ಇದು. ಇದಕ್ಕಿಂತ ಹೆಚ್ಚು ಏನನ್ನೂ ನಾನು ಬಯಸಲಾರೆ. ಎಷ್ಟೋ ಜನ ನಟರಾಗುವುದಕ್ಕೆ ಕಾಯುತ್ತಾರೆ, ಆದರೆ ಅವಕಾಶ ಸಿಕ್ಕಿರುವುದಿಲ್ಲ. ನನಗೆ ಇಂತಹ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ'' ಅಂತ ಸಲ್ಮಾನ್ ಖಾನ್ ಗೆ ಥ್ಯಾಂಕ್ಸ್ ಹೇಳುತ್ತಾ ಸೂರಜ್ ಪಾಂಚೋಲಿ ಕಣ್ಣೀರಿಟ್ಟರು.

ಭಾವುಕರಾದ ಸಲ್ಮಾನ್ ಖಾನ್

ಯುವ ಪ್ರತಿಭೆ ಸೂರಜ್ ಪಾಂಚೋಲಿ ಆಡಿದ ಮಾತುಗಳನ್ನ ಕೇಳಿ ನಟ ಸಲ್ಮಾನ್ ಖಾನ್ ಕೂಡ ಭಾವುಕರಾದರು. ಸೂರಜ್ ಕಣ್ಣಲ್ಲಿ ಖುಷಿ ಕಂಡ ಸಲ್ಮಾನ್ ಕಣ್ಣುಗಳು ಕೂಡ ಒದ್ದೆ ಆಯ್ತು.

ಹಾಸ್ಯ ಚಟಾಕಿ ಹಾರಿಸಿದ ಸಲ್ಮಾನ್

ಭಾವುಕ ಕ್ಷಣದ ನಂತ್ರ ಸನ್ನಿವೇಶಕ್ಕೆ ಹೊಸ ಹುರುಪು ತುಂಬುವುದಕ್ಕೆ (ಸೂರಜ್ ರನ್ನ ಬೆಟ್ಟು ಮಾಡಿ ತೋರಿಸುತ್ತಾ) ''ಇವರು ನಮ್ಮ ಹೀರೋಯಿನ್'' ಮತ್ತು (ನಾಯಕಿ ಆತಿಯಾ ಶೆಟ್ಟಿ ಬೆಟ್ಟು ಮಾಡಿ ತೋರಿಸುತ್ತಾ) ''ಇವರು ನಮ್ಮ ಹೀರೋ'' ಅಂತ ಸಲ್ಮಾನ್ ಖಾನ್ ಹಾಸ್ಯ ಚಟಾಕಿ ಹಾರಿಸಿದರು.

ಟ್ರೈಲರ್ ಲಾಂಚ್ ನಲ್ಲಿ ಬಾಲಿವುಡ್ ಗಣ್ಯರು

ಸುನೀಲ್ ಶೆಟ್ಟಿ, ಆದಿತ್ಯ ಪಾಂಚೋಲಿ, ಸುಭಾಷ್ ಘಾಯ್ ಸೇರಿದಂತೆ ಬಾಲಿವುಡ್ ನ ಹಲವು ಗಣ್ಯರು 'ಹೀರೋ' ಟ್ರೈಲರ್ ಲಾಂಚ್ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

'ಹೀರೋ' ಟ್ರೈಲರ್ ನೋಡಿ

1983ರಲ್ಲಿ 'ಹೀರೋ' ಚಿತ್ರಕ್ಕಿಂತ ಕೊಂಚ ಮಾಡರ್ನ್ ಆಗಿ ಕಾಣುವ ಈ ಹೊಸ 'ಹೀರೋ' ಹೇಗಿದ್ದಾನೆ ಅಂತ ಈಗಷ್ಟೆ ರಿಲೀಸ್ ಆಗಿರುವ ಟ್ರೈಲರ್ ನಲ್ಲಿ ನೀವೇ ನೋಡಿ....

English summary
Bollywood Actor Salman Khan launched the trailer of Sooraj Pancholi and Athiya Shetty starrer 'Hero' on July 15th. At the trailer launch Sooraj Pancholi started crying and Salman Khan got emotional.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada